ಮಂಗಳೂರು ಡ್ರ್ಯಾಗನ್ಸ್ ಜಯಭೇರಿ: ಮಹಾರಾಜ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಶರತ್
ಬೆಂಗಳೂರು: ಬಿ.ಆರ್.ಶರತ್ ದಾಖಲಿಸಿದ ಅಜೇಯ ಶತಕ (111) ಹಾಗೂ ರೋಹನ್ ಪಾಟೀಲ್ (54) ಅರ್ಧಶತಕದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ 5 ವಿಕೆಟ್‌ಗಳ ಜಯ ದಾಖಲಿಸಿದೆ. ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಂದು ಮಂಗಳೂರು ಡ್ರ್ಯಾಗನ್ಸ್ ತಂಡವು ಮೈಸೂರು ನೀಡಿದ್ದ 202 ರನ್ ತಲುಪಿ ಗೆದ್ದು ಬೀಗಿತು.ಮೈಸೂರು ನೀಡಿದ 202 ರನ್ಗಳ ಬೃಹತ್ ಗುರಿಯನ್ನು ಮಂಗಳೂರು ತಂಡ 7 ಎಸೆತ ಬಾಕಿ ಇರುವಂತೆಯೇ ತಲುಪಿತು. ಆದರೆ, 54 ರನ್ ಗಳಿಸಿದ್ದ ರೋಹನ್ ಪಾಟೀಲ್ ಜೆ.ಸುಚಿತ್ಗೆ […]
ಕೊಪ್ಪಳ ಜಿಲ್ಲಾ ಪಂಚಾಯಿತಿ IAS ಅಧಿಕಾರಿಯಿಂದ ಭತ್ತದ ಸಸಿ ನಾಟಿ: ರೈತರೊಂದಿಗೆ ಗದ್ದೆಗಿಳಿದ ಅಧಿಕಾರಿ
ಗಂಗಾವತಿ (ಕೊಪ್ಪಳ) :ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅಧಿಕಾರಿ, ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದರು. ಇದಕ್ಕೂ ಮೊದಲು ಹೊಸಕೇರಿ ಗ್ರಾಮದ ಬೀಜ ಸಂಸ್ಕರಣಾ ಕೇಂದ್ರ, ಕೋಟಯ್ಯ ಕ್ಯಾಂಪಿನ ಅನ್ನಪೂರ್ಣ ಮಹಿಳಾ ಸಂಘದ ಕಿರು ಆಹಾರ ಉತ್ಪಾದನಾ ಘಟಕ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತ ಶೇಷಗಿರಿ ಅವರ ಹೊಲಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗದ್ದೆಗಿಳಿದು ಸಸಿ ನಾಟಿ ಮಾಡಿದ್ದ ವಿದ್ಯಾರ್ಥಿಗಳು : ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗಿಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ […]
ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಮಲ್ ಹಾಸನ್: ಇಂಡಿಯನ್ 2 ಪೋಸ್ಟರ್
ಇಂಡಿಯನ್ 2 ಪೋಸ್ಟರ್: ಬಹುನಿರೀಕ್ಷಿತ ಸಿನಿಮಾ ಇಂಡಿಯನ್ 2 ಅನ್ನು ಸ್ಟಾರ್ ಡೈರೆಕ್ಟರ್ ಎಸ್ ಶಂಕರ್ ನಿರ್ದೇಶಿಸುತ್ತಿದ್ದಾರೆ. ಲೈಕಾ ಮತ್ತು ರೆಡ್ ಜೈಂಟ್ ಮೂವೀಸ್ (Red Giant Movies) ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡುತ್ತಿವೆ. ಇಂಡಿಯನ್ 2 ರಿಂದ ಕಮಲ್ ಹಾಸನ್ ಪೋಸ್ಟರ್ ಶೇರ್ ಮಾಡಿರುವ ಚಿತ್ರ ತಯಾಕರು, ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ”ಇಂಡಿಯನ್ 2”. ಸ್ವಾತಂತ್ರ್ಯ ದಿನದ ಹಿನ್ನೆಲೆ ತಮಿಳು ಚಿತ್ರ […]
ಆಕಸ್ಮಿಕವಾಗಿ ಸ್ವಚ್ಛತಾ ಕಾರ್ಮಿಕನಿಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆ : ಮನೆಗೆ ಕರೆಸಿ ಕ್ಷಮೆ ಯಾಚಿಸಿದ ನಟಿ ರಚಿತಾ ರಾಮ್
ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ರಚಿತಾ ರಾಮ್ ಅವರಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ನಟಿ ಕಾರ್ಮಿಕನ ಬಳಿ ಕ್ಷಮೆಯಾಚಿಸದೇ ಸ್ಥಳದಿಂದ ಹೊರಟು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣ ಸೇರಿದಂತೆ ಕಾರ್ಮಿಕರ ಒಕ್ಕೂಟಗಳಿಂದಲೂ ವಿರೋಧ ವ್ಯಕ್ತವಾಗಿತ್ತು. ಕಾರು ಚಾಲಕನಿಂದಾದ ಆಕಸ್ಮಿಕ ತಪ್ಪಿನಿಂದ ನಿನ್ನೆ (ಸೋಮವಾರ) ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ಮುಜುಗರಕ್ಕೆ ಒಳಗಾಗಿದ್ದರು. ರಚಿತಾ ರಾಮ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ […]
ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಧುರ: ಸುನಿಧಿ ಹೆಬ್ಬಾರ್ ಬರೆದ ಬರಹ..
ಸ್ವಾತಂತ್ರ್ಯ ಎಂಬ ಉತ್ಸವದ ನೆನಪಿನ ಅಂಗಳದಲ್ಲಿ ಯಾವುದೇ ಹಬ್ಬವಾಗಲಿ, ಹಬ್ಬದ ದಿನ ನಾವು ಖುಷಿಯಾಗಿರುವುದು ಒಂದು ಲೆಕ್ಕವಾದರೆ ಆ ಹಬ್ಬದ ತಯಾರಿ ನೂರು ಪಟ್ಟು ಸಂತೋಷಕಾರಿಯಾದದ್ದು. ಅದೂ ಗೆಳೆಯರೊಂದಿಗೆ ಸೇರಿ, ಕೆಲಸವನ್ನೆಲ್ಲ ಹಂಚಿಕೊಂಡು, ಒಮ್ಮೆ ನಗುತ್ತಾ ಒಮ್ಮೆ ಕಚ್ಚಾಡುತ್ತ, ನಲಿಯುತ್ತ ಆಚರಿಸುತ್ತಿದ್ದದ್ದು ನಮ್ಮ ರಾಷ್ಟ್ರೀಯ ಹಬ್ಬಗಳು. ಅಗಸ್ಟ್ ತಿಂಗಳ ಜಿಟಿ ಜಿಟಿ ಮಳೆಯಲ್ಲಿ ಬಟ್ಟೆಯನೆಲ್ಲ ಒದ್ದೆಮಾಡಿಕೊಂಡು ಉತ್ಸಾಹದಿಂದ ನಾವೆಲ್ಲ ಸೇರುತ್ತಿದದ್ದು ಸ್ವಾತಂತ್ರ್ಯೋತ್ಸವಕ್ಕೆ. ನಾನು ನನ್ನ ನೆನಪಿನ ಪುಟವನ್ನು ತಿರುವು ಹಾಕಿ ಹೋಗಬಯಸುವುದು ಮರಳಿ ನನ್ನ ಹೈ ಸ್ಕೂಲ್ […]