ಕೋಟ ಮೂರ್ತೆದಾರ ಸೇವಾ ಸಹಕಾರಿ ಸಂಘ ದಲ್ಲಿ ನಡೆದ 77 ನೇ ಸ್ವಾತಂತ್ರ್ಯ ದಿನಾಚರಣೆ
ಕೋಟ ಮೂರ್ತೆದಾರ ಸೇವಾ ಸಹಕಾರಿ ಸಂಘ ದಲ್ಲಿ ನಡೆದ 77 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಕೊರಗ ಪೂಜಾರಿ ನೆರವೇರಿಸಿದರು . ಈ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ, “ರಾಜೀವ್ ಭವನ” ದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ, “ರಾಜೀವ್ ಭವನ” ದಲ್ಲಿ ನಡೆದ 77ನೇ ಸ್ವಾತ್ಪಂತ್ರ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರು ನೆರವೇರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಭಾಷಣದಲ್ಲಿ , ಭಾರತದ ಸಾರ್ವಭೌಮತೆ, ಅಖಂಡತೆ, ಸಮಾನತೆ, ಸಾಮರಸ್ಯತೆ ಮತ್ತು ಸಹೋದರತ್ವದ ಉಳಿವಿಗಾಗಿ ಭಾರತೀಯರಾದ ನಾವೆಲ್ಲರೂ ಪಣತೊಡಬೇಕು. ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತದ ಸಂವಿಧಾನವನ್ನು ರಕ್ಷಿಸುವ ರಕ್ಷಕರಾಗಿ, ದ್ವೇಷ, ಹಿಂಸೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಿ, ವಿಶೇಷವಾಗಿ […]
₹1.79 ಕೋಟಿಗೂ ಹೆಚ್ಚ ಹಣ ಸಂಗ್ರಹ : ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆ ಇದ್ದುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಗಾಜಿನ ಮನೆಯ ಹೊರಾಂಗಣದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ, ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಭಾನುವಾರ ಒಂದೇ ದಿನ 1.25 ಲಕ್ಷ ಮಂದಿ ಆಗಮಿಸಿದ್ದು, ಪ್ರವೇಶ ಶುಲ್ಕದ ರೂಪದಲ್ಲಿ ಒಟ್ಟಾರೆ 80.50 ಲಕ್ಷ ರೂ. ಸಂಗ್ರಹವಾಗಿದೆ. ಪ್ರವೇಶ ದ್ವಾರಗಳಲ್ಲಿ ಒಳಗೂ, ಹೊರಗೂ ಭಾರಿ ಜನಸಂದಣಿ ಕಂಡುಬಂದಿತ್ತು. ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗಿತ್ತು. […]
ಬುಮ್ರಾ ನಾಯಕತ್ವದಲ್ಲಿ ಐಪಿಎಲ್ ಸ್ಟಾರ್ಸ್ ಪಡೆ : ಐರ್ಲೆಂಡ್ ಟಿ20 ಸರಣಿಗೆ ತೆರಳಿದ ಭಾರತ ತಂಡ
ಹೈದರಾಬಾದ್: ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟಿ20 ಸ್ಟಾರ್ಗಳ ಪಡೆ ಐರ್ಲೆಂಡ್ಗೆ ಇಂದು ತೆರಳಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರಿತ್ ಬುಮ್ರಾ ಅವರ ನಾಯಕತ್ವದಲ್ಲಿ ತಂಡ ಐರ್ಲೆಂಡ್ನಲ್ಲಿ ಪಂದ್ಯಗಳನ್ನು ಆಡಲಿದೆ. ಆಗಸ್ಟ್ 18 ರಿಂದ ಆರಂಭ ಆಗಲಿರುವ ಐರ್ಲೆಂಡ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಇಂದು ಪ್ರವಾಸ ಬೆಳೆಸಿದೆ ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಡಬ್ಲಿನ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 18, 20 ಮತ್ತು 23 […]
ಯುವ ಪ್ರತಿಭೆಗೆ ಅವಕಾಶ: ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದ ವಿನೇಶ್ ಫೋಗಟ್
ನವದೆಹಲಿ: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ಪಡೆದು ನೇರಪ್ರವೇಶ ಪಡೆದುಕೊಂಡಿದ್ದ ಫೋಗಟ್ ಗಾಯದ ಕಾರಣದಿಂದಾಗಿ ಆಡುತ್ತಿಲ್ಲ ಎಂದು ತಿಳಿಸಿದ್ದಾರೆ. ಭಾರತೀಯ ಕುಸ್ತಿ ಫೆಡರೇಶನ್ (IWF) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿನೇಶ್ ಫೋಗಟ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದಿದ್ದಾರೆ.ಸೆಪ್ಟೆಂಬರ್ 23ರಿಂದ ಚೀನಾದದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಿಂದ ವಿನೇಶ್ ಫೋಗಟ್ ಹಿಂದೆ ಸರಿದಿದ್ದಾರೆ. ತಮ್ಮ ಎಕ್ಸ್‌ಆಯಪ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿರುವ ಅವರು, “ನಾನು […]