ಭಾರತದ ರಸ್ತೆಗಳಲ್ಲಿ ಓಡಲು Harley-Davidson X440 ತಯಾರಿ: 25,597 ಬುಕಿಂಗ್‌ ಪಡೆದ Hero MotoCorp!!

ಮಧ್ಯಮ ಗಾತ್ರದ ಮೋಟಾರ್‌ ಸೈಕಲ್‌ಗಳಿಗೆ ಹಾರ್ಲೆ ಡೇವಿಡ್‌ಸನ್‌ ನ ಪ್ರವೇಶವು ಭಾರತೀಯ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಕಂಪನಿಯ ಭಾರತೀಯ ಪಾಲುದಾರರಾದ Hero MotoCorp ಈ ವರ್ಷ 4 ಜುಲೈ ನಿಂದ ಬುಕ್ಕಿಂಗ್ ತೆರೆದಿದ್ದು, ಅಂದಿನಿಂದ Harley-Davidson X440 ಗಾಗಿ ಬ್ರ್ಯಾಂಡ್ 25,597 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಿದೆ. ಬುಕಿಂಗ್ ವಿಂಡೋವನ್ನು ಈಗ ಮುಚ್ಚಲಾಗಿದೆ ಮತ್ತು ಹೊಸ ಬುಕಿಂಗ್ ವಿಂಡೋವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ತನ್ನ ಸೂಚನೆಯಲ್ಲಿ ತಿಳಿಸಿದೆ. Hero MotoCorp […]

ಬ್ರೌನ್ ವುಡ್ ಫರ್ನಿಚರ್ಸ್ ನಲ್ಲಿ ಎಲ್ಲ ರೀತಿಯ ಫರ್ನಿಚರ್ ಗಳ ಮೇಲೆ 25% ವರೆಗೆ ರಿಯಾಯತಿ!!

ಉಡುಪಿ: ನಗರದ ಅಂಬಲಪಾದಿ ಜಂಕ್ಷನ್ ನ ಸುರಭಿ ಲೋಟಸ್ ಕಟ್ಟಡದಲ್ಲಿರುವ ಬ್ರೌನ್ ವುಡ್ ಫರ್ನಿಚರ್ಸ್ ಮಳಿಗೆಯಲ್ಲಿ ಎಲ್ಲ ರೀತಿಯ ಫರ್ನಿಚರ್ ಗಳ ಮೇಲೆ 25% ವರೆಗೆ ರಿಯಾಯತಿ ಕೊಡುಗೆ ಲಭ್ಯ. ಸಂಪರ್ಕಿಸಿ: 9036772710/ 0820 4608922

ಸೌತ್ ಕೆನರಾ ಫೋಟೋಗ್ರಾಫ‌ರ್ಸ್ ಅಸೋಸಿಯೇಶನ್ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫ‌ರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಹಾಗೂ ಉಡುಪಿ ವಲಯದ ಅತಿಥ್ಯದಲ್ಲಿ 14 ವಲಯಗಳ ಎಸ್ ಕೆಪಿಎ ಸದಸ್ಯರ ಜಿಲ್ಲಾಮಟ್ಟದ ಕೆಸರು ಗದ್ದೆ ಕ್ರೀಡಾಕೂಟವು ಕಟಪಾಡಿ ಬೀಡು ಕಂಬಳ ಗದ್ದೆಯ ಸಮೀಪದಲ್ಲಿ ಭಾನುವಾರ ನಡೆಯಿತು. ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಛಾಯಾಗ್ರಾಹಕರನ್ನು ಮೀರಿಸುವ ವ್ಯಕ್ತಿ ಇಲ್ಲ. ದೇಶದಲ್ಲಿ ಅತೀ ಹೆಚ್ಚು ಭವಿಷ್ಯ ಇರುವ ವೃತ್ತಿ ನಿರತರು ಛಾಯಾಗ್ರಾಹಕರಾಗಿದ್ದಾರೆ. ಪ್ರಸ್ತುತ ಸರಕಾರವನ್ನು ಗುರುತಿಸಿ, […]

ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುವ ಉಡುಪಿಯ ಪ್ರಪ್ರಥಮ ‘ಸಂಜೀವಿನಿ’ ಸೂಪರ್ ಮಾರ್ಕೆಟ್

ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆಯ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಮಹಿಳೆಯರು ಆರ್ಥಿಕ ಲಾಭ ತರುವ ಹಲವು ಉದ್ಯಮಗಳಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಆರಂಭಿಸುತ್ತಿದ್ದು, ಆಗಸ್ಟ್ 14 ರಂದು ಈ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಆರಂಭಗೊಳ್ಳಲಿದೆ. ಈ ಸೂಪರ್ ಮಾರ್ಕೆಟ್ ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ/ಒಳಾಂಗಣ […]

ರಾಹುಲ್ ಕಾಮತ್ ನಿಧನ

ಉಡುಪಿ: ತೆಂಕಪೇಟೆ ನಿವಾಸಿ ರಾಜೇಶ್ ಕಾಮತ್ ಇವರ ಪುತ್ರ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ರಾಹುಲ್ ಕಾಮತ್ ( 29 ) ವರ್ಷ, ಅಲ್ಪಕಾಲದ ಅನಾರೋಗ್ಯದ ಕಾರಣ ಭಾನುವಾರ(ಆ.13) ದಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಣಿಪಾಲದ ಆರ್. ಕೆ.ಇಂಡಸ್ಟ್ರೀಸ್ ಪಾಲುದಾರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಂದೆ, ತಾಯಿ, ತಂಗಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.