ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 503 ಸಿಬ್ಬಂದಿಗಳು ಶ್ಲಾಘನೀಯ ಸೇವಾ ಪ್ರಶಸ್ತಿಗೆ ಆಯ್ಕೆ
ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಪ್ರಸ್ತುತ ವರ್ಷ 503 ಸಿಬ್ಬಂದಿಗಳು ಶ್ಲಾಘನೀಯ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ನಗದು ಬಹುಮಾನದ ಮೊತ್ತವನ್ನು ರೂ.500 ರಿಂದ ರೂ.2,000 ಕ್ಕೆ ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರ ಭರತ್ ಎಸ್. ಆದೇಶ ಹೊರಡಿಸಿದ್ದಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶ್ಲಾಘನೀಯ ಸೇವಾ ಪ್ರಶಸ್ತಿಗೆ 503 ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರ ಭರತ್ ಎಸ್. ಮಾಹಿತಿ ನೀಡಿದ್ದಾರೆ ಪ್ರತಿ ಪ್ರಕರಣಕ್ಕೆ ತಕ್ಕಂತೆ ಇದುವರೆಗೂ ರೂ.500ರ ವರೆಗೆ ನಗದು […]
‘ಯಂಗ್ ಇಂಡಿಯಾ’ಗೆ ಬುಮ್ರಾ ಕ್ಯಾಪ್ಟನ್: ಐರ್ಲೆಂಡ್ ಪ್ರವಾಸ
ಹೈದರಾಬಾದ್:ಯುವ ಆಟಗಾರರ ಟೀಂ ವಿಂಡೀಸ್ನಲ್ಲಿ ಯಶಸ್ಸು ಸಾಧಿಸುವಲ್ಲಿ ಎಡವಿತು. ಇನ್ನು, ಇದೇ 18ರಿಂದ ಮೂರು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಜಸ್ಪ್ರಿತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಗಾಯದಿಂದ ಚೇತರಿಸಿಕೊಂಡು ನೇರವಾಗಿ ಕ್ಯಾಪ್ಟನ್ ಆಗಿ ತಂಡಕ್ಕೆ ಬುಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಕಳೆದುಕೊಂಡಿತು. ಐರ್ಲೆಂಡ್ ಪ್ರವಾಸದಲ್ಲಿ ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ಪಾದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಶಿವಂ […]
ಕಟಪಾಡಿ: ಬೈಕ್-ಕಾರು ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
ಕಟಪಾಡಿ: ಕಾರೊಂದು ಡಿವೈಡರ್ ದಾಟಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಗಾಯಾಳುಗಳ ಮಾಹಿತಿ ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸಮಾಜ ಸೇವಕ ಆಸ್ಟಿನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಚಂದ್ರಯಾನ-3 ರ ಚಿತ್ರ ರಚಿಸಿ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿಸಿದ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು
ಉಡುಪಿ: ಅಂಬಲಪಾಡಿಯ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು ಇವರು ಪ್ರತೀ ಬಾರಿಯಂತೆ ಈ ಬಾರಿಯೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಈ ಬಾರಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಂದ್ರಯಾನ- 3 ರ ಚಿತ್ರ ರಚಿಸಿ ಜನಮನ್ನಣೆ ಗಳಿಸಿದ್ದಾರೆ. ಕಲಾರಚನೆಯಲ್ಲಿ ಸುಧಾಕರ್, ದಯಾನಂದ, ಹರೀಶ್ ಸಹಕರಿಸಿದ್ದಾರೆ.
ಮಂಗಳೂರು: ಸಾಹಿತ್ಯ ಅಕಾಡೆಮಿ ವತಿಯಿಂದ ಗ್ರಾಮಲೋಕ ಕಾರ್ಯಕ್ರಮ
ಮಂಗಳೂರು: ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಐಸಿವೈಎಂ ನಿರ್ಕಾಣ್ ಘಟಕ ವತಿಯಿಂದ ನಿರ್ಕಾಣ್ ಸಂತ ತೋಮಸರ ಶಾಲೆಯ ಸಭಾಂಗಣದಲ್ಲಿ ಭಾನುವಾರ, ಆಗಸ್ಟ್ 13 ರಂದು ಗ್ರಾಮ ಲೋಕ ಕಾರ್ಯಕ್ರಮ ನಡೆಯಿತು. ರಾಷ್ಟ್ರಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸದಸ್ಯ ಎಚ್ಚೆಮ್, ಪೆರ್ನಾಲ್ ಸಾಹಿತ್ಯ ಆಕಾಡೆಮಿ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳು ಹಾಗೂ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿ, ಕಾರ್ಯಕ್ರಮದ ಅಧ್ಯಕ್ಷ ಜಿಯೋ ಅಗ್ರಾರ್, ಕವಿ ಸುರೇಶ್ ಬಾಳಿಗ, ಕತೆಗಾರ ಪಂಚು ಬಂಟ್ವಾಳ್, […]