ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್ ನಿಧನ
ನಟಿ ಅಂಕಿತಾ ಲೋಖಂಡೆ ಅವರ ಸಿನಿ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಭಿಮಾನಿಗಳು ಲೋಖಂಡೆ ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಅಂಕಿತಾರ ತಂದೆಯ ನಿಧನದ ಸುದ್ದಿ ಕೇಳಿದ ಸಹನಟರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ಅವರು ಶನಿವಾರದಂದು (ಆಗಸ್ಟ್ 12) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ವಿಧಿವಶರಾಗಿದ್ದಾರೆ. ಅಂತಿಮ ನಮನ ಸಲ್ಲಿಸಿದ ಸಿನಿ ಸ್ನೇಹಿತರು: ಜನಪ್ರಿಯ […]
ಗ್ರಾಂಡ್ ಮಾಸ್ಟರ್ ಬಿರುದು ಪಡೆದ ಕಲಬುರಗಿಯ ಬಾಲಕ: ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ದಾಖಲೆ
ಕಲಬುರಗಿ :ಕಲಬುರಗಿಯ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಧ್ರುವಂತ್ ಆಲೂರ್ ಎಂಬಾತ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ತನ್ನ ಬುದ್ಧಿ ಶಕ್ತಿಯಿಂದ ಗ್ರಾಂಡ್ ಮಾಸ್ಟರ್ ಎಂಬ ಬಿರುದು ಪಡೆದಿದ್ದಾನೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿ, ಗ್ರಾಂಡ್ ಮಾಸ್ಟರ್ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ಮುಂಚೆ ದಕ್ಷಿಣ ಅಂಡಮಾನ್ & ನಿಕೋಬಾರ್ನ ಶಿವಯೋಗಿತ ಐದು ನಿಮಿಷದಲ್ಲಿ 198 ಸ್ಪೆಲ್ಲಿಂಗ್ ಮತ್ತು ತಮಿಳುನಾಡಿನ ರಿಕ್ಷೀತ ಎಂಬ ಪ್ರತಿಭೆಗಳು ಮಾಡಿದ್ದ […]
ಮಣಿಪಾಲ: ಮಣಿಪಾಲ್ ಡೆಂಟಲ್ ಕಾನ್ಫರೆನ್ಸ್ ನ ಎರಡನೇ ಆವೃತ್ತಿ ಸಂಪನ್ನ
ಮಣಿಪಾಲ: ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಆಗಸ್ಟ್ 10 ಮತ್ತು 11 ರಂದು ಮಣಿಪಾಲ್ ಡೆಂಟಲ್ ಕಾನ್ಫರೆನ್ಸ್ ನ ನಿರೀಕ್ಷಿತ ಎರಡನೇ ಆವೃತ್ತಿಯನ್ನು ಆಯೋಜಿಸಿತ್ತು. ಮಾಹೆಯ 2023 ರ ಘೋಷಣೆಯಂತೆ ಈ ವರ್ಷ ಅಂತರಾಷ್ಟ್ರೀಕರಣದ ವರ್ಷ ಎಂದು ಆಚರಿಸುತ್ತಿದ್ದು, ಈ ಪದವಿಪೂರ್ವ ವಿದ್ಯಾರ್ಥಿ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಸಮ್ಮೇಳನವನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಉದ್ಘಾಟಿಸಿ ಉತ್ಸಾಹಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, […]
ಎಳ್ಳಾರೆಯ ವಿನೋದ ನಾಯಕ್ ಅವರ ಹೃದಯ ಸಮಸ್ಯೆಯ ಚಿಕಿತ್ಸೆಗಾಗಿ ಬೇಕಾಗಿದೆ ಆರ್ಥಿಕ ಸಹಾಯ
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ವಿನೋದ ನಾಯಕ್ ಅವರು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮಣಿಪಾಲಿನ ಕೆಎಂಸಿ ಆಸ್ಪತ್ರೆಯಲ್ಲಿ 11 ಲಕ್ಷದವರೆಗೆ ಖರ್ಚು ಮಾಡಿರುತ್ತಾರೆ. ಈಗ ತಮಿಳುನಾಡಿನ ಸಿ.ಎಂ.ಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದು, ಚಿಕಿತ್ಸೆಗೆ 10 ಲಕ್ಷದವರೆಗೆ ಹಣದ ಅವಶ್ಯಕತೆ ಇದೆ. ಈ ಅಶಕ್ತ ಕುಟುಂಬಕ್ಕೆ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ. Bank : Canara Branch : Uppoor A/C No : 0760101009804 IFSC Code : CNRB0000760 ದೂರವಾಣಿ […]
ಆ. 16 ಹಾಗೂ17 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 16 ಮತ್ತು 17 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಪ್ರಗತಿನಗರ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 16 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ […]