ಮಲ್ಪೆ: ನೀರಿನಲ್ಲಿ ಮುಳುಗಿದ್ದ ದುಬಾರಿ ಐ-ಫೋನ್ ಮೇಲೆತ್ತಿ ಮಾಲಕರಿಗೆ ಹಸ್ತಾಂತರಿಸಿದ ಈಶ್ವರ್ ಮಲ್ಪೆ

ಮಲ್ಪೆ: ಇಲ್ಲಿನ ಹೆಸರಾಂತ ಈಜು ತಜ್ಞ, ನೀರಿನಲ್ಲಿ ಮುಳುಗಿದ್ದವರ ಮೇಲೆತ್ತುವ ಆಪದ್ಬಾಂಧವ ಈಶ್ವರ್ ಮಲ್ಪೆ ಅವರು 10 ಫೀಟ್ ನೀರಿನಾಳದಲ್ಲಿ ಮುಳುಗಿದ್ದ ಬಹು ದುಬಾರಿ ಐ-ಫೋನ್ ಅನ್ನು ಮೇಲೆತ್ತಿ ಫೋನಿನ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಮಲ್ಪೆ ದಕ್ಕೆ ಬಳಿ ಈ ಘಟನೆ ನಡೆದಿದ್ದು, ವ್ಯಾಪಾರಸ್ಥರೊಬ್ಬರ 1.5 ಲಕ್ಷದ ಐ-ಫೋನ್ ಒಂದು ನೀರಿಗೆ ಬಿದ್ದಿದ್ದು, ಅದರಲ್ಲಿ ಹಲವು ಪ್ರಮುಖ ಕಡತಗಳಿದ್ದವು ಎನ್ನುವ ಕಾರಣಕ್ಕೆ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಫೋನ್ ಅನ್ನು ನೀರಿನಿಂದ ಮೇಲೆತ್ತಿ ಕೊಡುವಂತೆ ಮನವಿ ಮಾಡಿದ್ದರು. […]
ಕೋಟೆ ಗ್ರಾಮ ಪಂಚಾಯತ್ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆ

ಕಾಪು: ಕೋಟೆ ಗ್ರಾಮ ಪಂಚಾಯತ್ ನೂತನ ಗ್ರಂಥಾಲಯ ಕಟ್ಟಡದ ಉದ್ಘಾಟನೆಯು ಆ. 10 ರಂದು ನಡೆಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಟ್ಟಡಾವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಉಪಾಧ್ಯಕ್ಶೆ ಪ್ರಮೀಳಾ ಜತ್ತನ್ನ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಅಂಬಾಡಿ, ಕೋಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರುತಿ, ಗ್ರಾಮ ಆಡಳಿತಾಧಿಕಾರಿ ಲೋಕನಾಥ […]
ಕೊಡವೂರು: ಆ. 12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಡವೂರು: ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು, ಸ್ವಾವಲಂಬಿ ಭಾರತ, ಉಡುಪಿ ನೇತ್ರ ತಪಾಸಣಾ ವಿಭಾಗ ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ದಂತ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಉಪ ಕೇಂದ್ರ ಕೊಡವೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಂಬಾಕು ನಿಯಂತ್ರಣ ಘಟಕ ಹಾಗೂ ಆಸಾಂಕ್ರಮಿಕ ರೋಗ ನಿಯಂತ್ರಣ ಘಟಕ […]
ಕಾರ್ಕಳ: ಕಂಪೆನಿ ಸೆಕ್ರಟರಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ

ಕಾರ್ಕಳ: ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಮಂಜುನಾಥ ಭಟ್, ಶ್ರೀಯಾ ಕೆ ಎಸ್, ಶ್ರಾವ್ಯ ಭಟ್ ಎಸ್, ಪ್ರಣೀತಾ, ಧನುಷ್ ಡಿ, ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು […]
ಕರ್ನಾಟಕದಲ್ಲೇ ಮೊದಲ ಬಾರಿಗೆ ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ಹೆರಿಗೆ ನಡೆಸಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು

ಮಣಿಪಾಲ: 31 ವರ್ಷ ವಯಸ್ಸಿನ ಮಹಿಳೆಯು ಎರಡನೆ ಬಾರಿ ಗರ್ಭ ಧರಿಸಿದ್ದು, 34ನೇ ವಾರದ ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವಿನ ಕಸ (Placenta) ಗರ್ಭಕೋಶದ ಬಾಯಿಗೆ ಅಡ್ಡಲಾಗಿರುವ ವಿಶೇಷ ಸ್ಥಿತಿ ಬೆಳಕಿಗೆ ಬಂದಿತ್ತು. ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದ ನಂತರ ಪ್ಲಾಸೆಂಟಾ ಪ್ರೀವಿಯಾ ಮತ್ತು ಪ್ಲಾಸೆಂಟಾ ಅಕ್ರಿಟಾ ಇರುವ ಸಾಧ್ಯತೆ ಕಂಡು ಬಂದಿತು. ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ರೋಗಿಗಿರುವ ತೊಂದರೆಯನ್ನು ದೃಢಪಡಿಸಿತು. ಪರಿಸ್ಥಿತಿಯನ್ನು ಅರಿತ ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ ಹೆಬ್ಬಾರ್ […]