ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಯಶ್ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಬ್ಯಾಂಕಿನ 2023-28 ನೇ ಸಾಲಿನ 5 ವರ್ಷಗಳ ಅವಧಿಯ ಅಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಬ್ಯಾಂಕಿನ ಉಪಾಧ್ಯಕ್ಷರಾಗಿ ವಾಸುದೇವ ಸಾಲ್ಯಾನ್, ನಿರ್ದೇಶಕರಾಗಿ ಕೆ ಸಂಜೀವ ಶ್ರೀಯಾನ್, ವೆಂಕಟರಮಣ ಕಿದಿಯೂರು, ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ರಾಮ ನಾಯ್ಕ್ ಎಚ್, ಶಿವರಾಮ ಕುಂದರ್, […]
ಕುಂಜಿಬೆಟ್ಟು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಉಡುಪಿ: ಕುಂಜಿಬೆಟ್ಟು ಹತ್ತಿರದ ಶಾಂಭವಿ ಬಿಲ್ಡಿಂಗ್‌ನ ಎಸ್‌ಆರ್‌ಎಸ್ ಸ್ಟಾಪ್ ಕ್ವಾರ್ಟರ್ಸ್‌ನಲ್ಲಿರುವ ಶಿಕ್ಷಕಿ ದಂಪತಿಯ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳ್ಳರು ಗಂಗಾಧರ ಅವರ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದು, ಕಾಪಾಟಿನಲ್ಲಿದ್ದ ಚಿನ್ನದ ಕರಿಮಣಿ ಸರ, ಮುತ್ತಿನ ಸರ, 2 ಚಿನ್ನದ ಸರ, 2 ಚಿನ್ನದ ಬಳೆ, 6 ಚಿನ್ನದ ಕಿವಿಯೋಲೆಗಳು, 2 ಚಿನ್ನದ ಉಂಗುರ, ಮಕ್ಕಳ 12 ಸಣ್ಣ ಉಂಗುರ ಸೇರಿದಂತೆ ಒಟ್ಟು 116 ಗ್ರಾಂ […]
ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಕಾಪು: ವಿಧಾನಸಭಾ ಕ್ಷೇತ್ರದ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಕಳತ್ತೂರು ಶಾಂತಿಗುಡ್ಡೆಯಿಂದ ನಟ್ಟಿಲ್ ಸಂಪರ್ಕ ರಸ್ತೆ ಅಭಿವೃದ್ಧಿ – 50 ಲಕ್ಷ, ಗೋಳಿಬೆಟ್ಟು ರಸ್ತೆ ಅಭಿವೃದ್ಧಿ – 25 ಲಕ್ಷ, ಪೈಯಾರು 3 ಸೈಂಟ್ಸ್ ಕಾಲೋನಿ ರಸ್ತೆ ಅಭಿವೃದ್ಧಿ – 10 ಲಕ್ಷ ಹಾಗೂ ಕುತ್ಯಾರು ವೀರಭದ್ರ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ನಿರ್ಮಾಣ – 2 ಲಕ್ಷ ಸೇರಿದಂತೆ ಒಟ್ಟು 87 ಲಕ್ಷ ರೂಪಾಯಿ […]
ಬಿಲ್ಲವ ಸೇವಾ ಸಂಘದ ವತಿಯಿಂದ ಆ.13 ರಂದು ‘ಆಟಿಡೊಂಜಿ ಕೂಟ’

ಉಡುಪಿ: ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ, ಬಿಲ್ಲವ ಮಹಿಳಾ ಘಟಕ ಅಂಬಲಪಾಡಿ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಇದರ ಸಹಯೋಗದಲ್ಲಿ ಆ.13 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ‘ಆಟಿಡೊಂಜಿ ಕೂಟ’ (ಆಟಿ ತಿಂಗಳ ವೈಶಿಷ್ಟ್ಯ ಮತ್ತು ಆಹಾರ ಪದ್ಧತಿಯ ಪ್ರಾತ್ಯಕ್ಷಿಕೆ) ಕಾರ್ಯಕ್ರಮವು ಸಂಘದ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಲಿದೆ. ಆಟಿ ತಿಂಗಳ ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿ, […]
ಜನನಿ ಎಂಟರ್ ಪ್ರೈಸಸ್ ಫ್ರೀಡಂ ಸೇಲ್: ಎಲೆಕ್ಟ್ರಾನಿಕ್ಸ್ ಹಾಗೂ ಪೀಠೋಪಕರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು

ಬ್ರಹ್ಮಾವರ: ಜನನಿ ಎಂಟರ್ ಪ್ರೈಸಸ್ ನಲ್ಲಿ ಫ್ರೀಡಂ ಸೇಲ್- ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ಅಡುಗೆ ಉಪಕರಣಗಳ ಮೇಲೆ ವಿಶೇಷ ಕೊಡುಗೆಗಳು, 20% ವರೆಗೆ ಕ್ಯಾಶ್ ಬ್ಯಾಕ್, ವಿಶೇಷ ಎಕ್ಸ್ ಚೆಂಜ್ ಆಫರ್, ಕಾಂಬೋ ಆಫರ್, ರಿಯಾಯತಿಗಳು ಹಾಗೂ ಹಲವು ಕೊಡುಗೆಗಳು ಲಭ್ಯವಿದೆ. ಗ್ರಾಹಕರು ಈ ಕೊಡುಗೆಗಳ ಸಂಪೂರ್ಣ ಪ್ರಯೋಜನ ಪಡೆಯಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವಿಳಾಸ: ಜನನಿ ಎಂಟರ್ ಪ್ರೈಸಸ್, ಮಧುವನ್ ಕಾಂಪ್ಲೆಕ್ಸ್, ಎಸ್.ಎಂ.ಎಸ್ ಕಾಲೇಜು ಎದುರುಗಡೆ ಬ್ರಹ್ಮಾವರ ಸಂಪರ್ಕಿಸಿ: 0820-2987075, 9972013221