ಅಂಗವೈಕಲ್ಯದಿಂದ ಬಳಲುತ್ತಿರುವ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾಕಿರಣ: ಹತ್ತಿ ಬತ್ತಿ ತಯಾರಿಸಿ ಆತ್ಮನಿರ್ಭರತೆಯತ್ತ ಪಯಣ…
ಉಡುಪಿ: ಕಾರಣಾಂತರಗಳಿಂದ ಅಂಗವೈಕಲ್ಯ ಹೊಂದಿ ಇನ್ನೊಬ್ಬರ ಆಶ್ರಯದಲ್ಲಿ ಬದುಕುವಂತಾದಾಗ ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡುವಂತಹ ಯೋಚನೆಗಳು ಬರುತ್ತವೆ. ಮನೆ ನಿಭಾಯಿಸಲು ತೆಗೆದುಕೊಂಡ ಸಾಲ, ಮಕ್ಕಳ ವಿದ್ಯಾಭ್ಯಾಸ, ಸಂಸಾರದ ಭಾರ ತೂಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಹಲವರು. ಅಂಗವೈಕಲ್ಯವೇ ಒಂದು ಅಭಿಶಾಪವಾದಂತಹ ಅಶಕ್ತರ ಬಾಳಿನಲ್ಲಿ ಭರವಸೆಯ ಆಶಾ”ಕಿರಣ”ವಾಗಿ ಅವರ ಬೆಂಬಲಕ್ಕೆ ನಿಂತಿದೆ ಡಾ. ಶಶಿಕಿರಣ್ ಶೆಟ್ಟಿ ಅವರ ಹೋಂ ಡಾಕ್ಟರ್ ಫೌಂಡೇಶನ್. ಕಳೆದ ಹಲವಾರು ವರ್ಷಗಳಿಂದ ಅಶಕ್ತರು, ಅನಾಥರು, ಅಸಾಹಯಕರು, ಕುಟುಂಬದಿಂದ ಪರಿತ್ಯಕ್ತ ವೃದ್ದರು, ಶಾಲಾ ವಿದ್ಯಾರ್ಥಿಗಳು, ರೈತರು […]
ಮುಂದಿನ ಮೂರು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯ ಪೂರ್ಣ: ಯೋಗಿ ಆದಿತ್ಯನಾಥ್
ಅಯೋಧ್ಯಾ: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಂದಿನ ವರ್ಷ ಜನವರಿ ವೇಳಿಗೆ ಮಂದಿರ ಕಾರ್ಯ ಪೂರ್ಣವಾಗುವ ನಿರೀಕ್ಷೆಗಳಿವೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತುತ ಉತ್ತರ ಪ್ರದೇಶದಲ್ಲಿ 9 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. 12 ವಿಮಾನ ನಿಲ್ದಾಣಗಳ ಕಾರ್ಯ ನಡೆಯುತ್ತಿದೆ. ಇದರಲ್ಲಿ ಎರಡು ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿವೆ. ಇದರಲ್ಲಿ ಒಂದು ಅಯೋಧ್ಯೆಯಲ್ಲಿದ್ದು ಮುಂದಿನ ಮೂರು ತಿಂಗಳಲ್ಲಿ ಅದರ ಕಾರ್ಯ ಸಂಪೂರ್ಣವಾಗಲಿದೆ ಎಂದರು. […]
ಚುನಾವಣಾ ಸಂಸ್ಥೆಗಳ ಆಯುಕ್ತರ ನೇಮಕಾತಿಗಾಗಿ ಹೊಸ ಮಸೂದೆ: ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಲ್ಲ ಸ್ಥಾನ
ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಮಂಡಿಸಲಿರುವ ಹೊಸ ಮಸೂದೆಯ ಪ್ರಕಾರ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ. ಮಾರ್ಚ್ನಲ್ಲಿ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಈ ಮೂವರನ್ನು ಒಳಗೊಂಡ ಸಮಿತಿಯು ಚುನಾವಣಾ ಸಂಸ್ಥೆಗೆ ನೇಮಕಾತಿಗಳನ್ನು ಮಾಡಬೇಕು ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ […]
ಉಡುಪಿ: ಬಿಜಿಎಸ್ ಮೋಟರ್ಸ್ ಸುಝುಕಿ ಅಧಿಕೃತ ಶೋ ರೂಂ ಪ್ರಾರಂಭ
ಉಡುಪಿ: ಕಿನ್ನಿಮೂಲ್ಕಿಯ ಸ್ವಾಗತ ಗೋಪುರದ ಬಳಿ ಬಿಜಿಎಸ್ ಮೋಟರ್ಸ್, ಸುಝುಕಿ ಇದರ ಅಧಿಕೃತ ಶೋ ರೂಂ ಪ್ರಾರಂಭವಾಗಿದೆ. ದೂರವಾಣಿ: 7026019787, 0820-4299077 ಸರ್ವಿಸ್ ಗಾಗಿ: 9964019787
ವಿವಿಧ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ
ಉಡುಪಿ: ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ವೇಳೆ, ಅವರಿಗೆ ತಿಳಿಯದಂತೆ, ಅವರ ಅಶ್ಲೀಲ ಛಾಯಾಚಿತ್ರವನ್ನು ಮೊಬೈಲ್ನಲ್ಲಿ ತೆಗೆದು ಅದನ್ನು ಗೋಪಾಲನಿಗೆ ನೀಡಿದ್ದು, ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದು, ಸದ್ರಿಯವರು ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲನು ಊರಿನಲ್ಲಿ ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು […]