3 ಶತಕೋಟಿ ವರ್ಷ ಹಳೆಯ ಪುರಾವೆ ಮಂಗಳಗ್ರಹದಲ್ಲಿ ಪತ್ತೆ : ಜೀವ ವಿಕಾಸಕ್ಕೆ ಪೂರಕವಾಗಿದ್ದ ಗ್ರಹ

ನ್ಯೂಯಾರ್ಕ್ : ಮಂಗಳ ಗ್ರಹದಲ್ಲಿ 3.8 ರಿಂದ 3.6 ಶತಕೋಟಿ ವರ್ಷಗಳ ಹಿಂದಿನ ಸೆಡಿಮೆಂಟರಿ ಪದರುಗಳಲ್ಲಿ ಲವಣಗಳ ನಿಕ್ಷೇಪಗಳಿಂದ ರಚಿತವಾದ ಷಟ್ಕೋನಾಕಾರದ ಮಾದರಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.ಮಂಗಳ ಗ್ರಹದ ಮೇಲೆ ಜೀವಿಗಳ ಉಗಮಕ್ಕೆ ಪೂರಕವಾದ ವಾತಾವರಣ ಇತ್ತು ಎಂಬ ಬಗ್ಗೆ ಹೊಸ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಕ್ಯೂರಿಯಾಸಿಟಿಯ ಮಾಸ್ಟ್​ ಕ್ಯಾಮ್ 1 ಮತ್ತು ಚೆಮ್​ ಕ್ಯಾಮ್​ 2 ಉಪಕರಣಗಳನ್ನು ಬಳಸಿಕೊಂಡು ವಿಜ್ಞಾನಿಗಳು 3.8 ರಿಂದ 3.6 ಬಿಲಿಯನ್ ವರ್ಷಗಳ ಹಿಂದಿನ ಲವಣಗಳ ನಿಕ್ಷೇಪವನ್ನು ಕಂಡುಹಿಡಿದಿದ್ದಾರೆ. ಋತುಮಾನಕ್ಕನುಗುಣವಾಗಿ ಒಣಗುವ […]

ಇಂದು ವಿಶ್ವ ಸಿಂಹ ದಿನದ ಹಿನ್ನೆಲೆ : ಸಿಂಹಗಳ ಆವಾಸಸ್ಥಾನ ಸುರಕ್ಷತೆಗೆ ಶ್ರಮಿಸುತ್ತಿರುವವರ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಟ್ವೀಟ್ ಮಾಡುವ​ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಂಹಗಳ ಆವಾಸಸ್ಥಾನದ ಸುರಕ್ಷತೆಗೆ ಕೆಲಸ ಮಾಡುತ್ತಿರುವವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಗೆ ಸಿಂಹಗಳ ಸಂಖ್ಯೆ ಅಭಿವೃದ್ಧಿ ಆಗುತ್ತಿರುವುದ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಸಿಂಹವನ್ನು ಗೌರವಿಸಿ, ರಕ್ಷಿಸುವುದನ್ನು ಮುಂದುವರಿಸೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಇಂದು ವಿಶ್ವ ಸಿಂಹ ದಿನ. ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖವಾಗಿರುವ ಸಿಂಹಗಳ ಸಂಖ್ಯೆ ಇಳಿಕೆಯಾಗಿದ್ದು, ಈ […]

ಹೊಸ ವೈಶಿಷ್ಟ್ಯ ಜಾರಿಗೆ ತರ್ತಿದೆ RBI : ನಿಮ್ಮ ಧ್ವನಿಯ ಮೂಲಕವೇ ಯುಪಿಐ ಪೇಮೆಂಟ್

ಮುಂಬೈ: ಸುರಕ್ಷಿತ ಮತ್ತು ಸುಭದ್ರ ರೀತಿಯಲ್ಲಿ ಹಣಕಾಸು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ “ಸಂಭಾಷಣಾ ಪಾವತಿ” (conversational payments) ಯೋಜನೆಯ ಮೇಲೆ ಆರ್​ಬಿಐ ಕೆಲಸ ಮಾಡುತ್ತಿದೆ ಎಂದು ಗವರ್ನರ್ ತಿಳಿಸಿದ್ದಾರೆ.ಧ್ವನಿ ಅಥವಾ ಸಂಭಾಷಣೆಯ ಮೂಲಕವೇ ಯುಪಿಐ ಪಾವತಿಗಳನ್ನು ಪೂರ್ಣಗೊಳಿಸಬಹುದಾದ ವ್ಯವಸ್ಥೆಯೊಂದನ್ನು ಆರ್​ಬಿಐ ಜಾರಿಗೆ ತರುತ್ತಿದೆ. ಧ್ವನಿಯ ಮೂಲಕ ಹಣ ಪಾವತಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್​ಬಿಐ) ಸಿದ್ಧತೆ ನಡೆಸಿದೆ. ಪ್ರಸ್ತಾವಿತ ಸಂಭಾಷಣಾ ಪಾವತಿ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಚಾಲಿತವಾಗಿರುತ್ತದೆ ಎಂಬುದು […]

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಜಯ್ ಸಿಂಗ್​ ನೇಮಕ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ಅಜಯ್ ಸಿಂಗ್ ಅವರನ್ನು ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಅಜಯ್ ಸಿಂಗ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಜೇವರ್ಗಿ ಶಾಸಕರ ಅಸಮಾಧಾನ ತಗ್ಗಿಸುವ ಕಸರತ್ತು ನಡೆಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿನಿಯಮ 2013ರ ನಿಯಮಿತ ಅನ್ವಯ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 11 ಸದಸ್ಯರನ್ನೊಳಗೊಂಡಂತೆ ಮಂಡಳಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಜೇವರ್ಗಿ ಕ್ಷೇತ್ರದ […]

ಸೆನ್ಸೆಕ್ಸ್​ 308 & ನಿಫ್ಟಿ 89 ಅಂಕ ಕುಸಿತ: ಹಣದುಬ್ಬರ ಹೆಚ್ಚಳ

ಮುಂಬೈ: ಬಿಎಸ್‌ಇ ಬೆಂಚ್​ ಮಾರ್ಕ್​ ಸೆನ್ಸೆಕ್ಸ್ 307.63 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಕುಸಿದು 65,688.18 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 89.45 ಪಾಯಿಂಟ್ಸ್ ಅಥವಾ ಶೇಕಡಾ 0.46 ರಷ್ಟು ಕುಸಿದು 19,543.10 ಕ್ಕೆ ತಲುಪಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಹಣಕಾಸು ನೀತಿ ಸಮಿತಿಯು ಪ್ರಮುಖ ಬಡ್ಡಿ ದರಗಳನ್ನು ಶೇಕಡಾ 6.50 ಕ್ಕೆ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡ ನಂತರ ದೇಶೀಯ ಶೇರು ಮಾರುಕಟ್ಟೆಗಳು ಗುರುವಾರ ಕುಸಿದವು. ಇಂದಿನ ಶೇರು ಮಾರುಕಟ್ಟೆ ವಹಿವಾಟಿನಲ್ಲಿ ಸೆನ್ಸೆಕ್ಸ್​ 308 ಅಂಕ […]