ಉಡುಪಿ: ತಾಯಿ- ಮಗಳು ನಾಪತ್ತೆ
ಉಡುಪಿ: ನಗರದ ನಯಂಪಳ್ಳಿ ನಿವಾಸಿ ಅಕ್ಷತಾ (32) ಎಂಬ ಮಹಿಳೆಯು ತನ್ನ ಮಗಳಾದ ಖುಷಿ (9) ಯೊಂದಿಗೆ ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, […]
ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಅರ್ಪಿತಾ ಡಿಸೋಜಾಗೆ ನಾಲ್ಕನೇ ರ್ಯಾಂಕ್
ಮಂಗಳೂರು: ಸಿಟಿ ಕಾಲೇಜ್ ಆಫ್ ಫಿಜಿಯೊಥೆರಪಿ ಕಾಲೇಜಿನ ವಿದ್ಯಾರ್ಥಿನಿ ಅರ್ಪಿತ ಡಿಸೊಜಾ ಇವರಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಇವರು ಡೊಡ್ಡ ಮೂಲೆ ಹೌಸ್, ಕಯ್ಯಾರ್, ಕಾಸರಗೋಡು ನಿವಾಸಿಗಳಾದ ಅಲ್ಬರ್ಟ್ ಡಿಸೊಜಾ ಮತ್ತು ಸೆಲೀನ್ ಮಚಾದೊವರ ಮಗಳಾಗಿದ್ದಾರೆ.
ಕಾರ್ಕಳ: ಆ.14 ರಂದು ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ
ಕಾರ್ಕಳ: ಹಿಂದು ಜಾಗರಣ ವೇದಿಕೆ ಕಾರ್ಕಳ ವತಿಯಿಂದ ಹಿಂದು ಜಾಗೃತಿ- ಹಿಂದು ಸಂಘಟನೆ- ಹಿಂದು ಸುರಕ್ಷೆಗಾಗಿ “ಅಖಂಡ ಭಾರತ ಸಂಕಲ್ಪ ದಿನ” ಹಾಗೂ “ಬೃಹತ್ ಪಂಜಿನ ಮೆರವಣಿಗೆ” ಕಾರ್ಕಳ ಅನಂತ ಪದ್ಮನಾಭ ದೇವಸ್ಥಾನದಿಂದ ಹೊರಟು ಕಾರ್ಕಳ ಬಸ್ಟ್ಯಾಂಡ್, ಮೂರು ಮಾರ್ಗ, ವೆಂಕಟರಮಣ ದೇವಾಲಯದ ಮಾರ್ಗವಾಗಿ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಗಾಂಧಿ ಮೈದಾನದವರೆಗೆ ನಡೆಯಲಿದೆ. ಆ.14 ಸೋಮವಾರ ದಂದು ಸಂಜೆ 6 ಗಂಟೆಗೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ಸಭೆಯನ್ನು ಉದ್ದೇಶಿಸಿ ಮಹೇಶ್ ಕಡಗದಾಳು (ಪ್ರಾಂತ ಸಹ ಸಂಯೋಜಕರು, ಹಿಂಜಾವೇ ಕರ್ನಾಟಕ ದಕ್ಷಿಣ) ದಿಕ್ಸೂಚಿ […]
ಇಂದು ಸ್ಪಂದನಾ ಅಂತ್ಯಕ್ರಿಯೆ; ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ
ಬೆಂಗಳೂರು: ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದು, ಇಂದು ಮಧ್ಯಾಹ್ನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಸ್ಪಂದನಾ ತಂದೆ ಬಿ. ಕೆ. ಶಿವರಾಮ್ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆವರೆಗೂ ಅಂತಿಮ ದರ್ಶನದ ವ್ಯವಸ್ಥೆ ಇರಲಿದೆ.