ಕರ್ನಾಟಕ ಬ್ಯಾಂಕ್‌ನ ಮಾಜಿ ಎಂಡಿ ಪೊಳಲಿ ಜಯರಾಮ ಭಟ್ ನಿಧನ
ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಪೊಳಲಿ ಜಯರಾಮ ಭಟ್ ಬುಧವಾರ ನಿಧನರಾದರು ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ದುರಾದೃಷ್ಟವಶಾತ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಪೊಳಲಿಯಲ್ಲಿ ಜನಿಸಿದ ಭಟ್ ಅವರು 1972 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಎಂಎಸ್ಸಿ ಕಾರ್ಯಕ್ರಮದಲ್ಲಿ ಉನ್ನತ ಶ್ರೇಣಿಯನ್ನು ಪಡೆಯುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದರು. ಶಿಕ್ಷಣತಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಪಿ ಜಯರಾಮ ಭಟ್ ಅವರ […]
ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ಹೋಗಲ್ಲ ಎಂದು ಹೇಳಿಕೆ ನೀಡಿದ ನಟ ವಿನೋದ್ ಪ್ರಭಾಕರ್
ಬೆಂಗಳೂರು: ಕನ್ನಡ ಖ್ಯಾತ ನಟ ದಿ. ಟೈಗರ್ ಪ್ರಭಾಕಾರ್ ಮಗ ನಟ ವಿನೋದ್ ಟೈಗರ್ ಪ್ರಭಾಕರ್ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ . ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಟ ವಿನೋದ್, ಮಹೇಶ್ ಶೆಟ್ಟಿ ಸರ್ ನಿಮ್ಮ ಕೆಲಸದ ಮೇಲೆ ನನಗೆ ಅಪಾರ ಗೌರವವಿದೆ, ನಾನು ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನಲ್ಲಿ ಪ್ರಾರ್ಥಿಸುತ್ತೇನೆ. ಸೌಜನ್ಯ ನ್ಯಾಯ ಕೊಡಲಿ. ಸೌಜನ್ಯ ಸಾವಿಗೆ ನ್ಯಾಯ ಸಿಗುವವರೆಗೂ […]
ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ : ಪತ್ನಿಗೆ ಕಣ್ಣೀರಿನ ಮೂಲಕ ವಿದಾಯ ಹೇಳಿದ ವಿಜಯ ರಾಘವೇಂದ್ರ
ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ. ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೊಳಗಾಗಿ ಸ್ಪಂದನಾ ಕೊನೆಯುಸಿರೆಳೆದ ಸುದ್ದಿ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರ ಆಘಾತಕ್ಕೆ ಕಾರಣವಾಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ಪಾರ್ಥಿವ ಶರೀರವನ್ನು ಬ್ಯಾಂಕಾಕ್ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಮಲ್ಲೇಶ್ವರಂನ ನಿವಾಸದಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಸ್ಪಂದನಾ ಲೀನರಾಗಿದ್ದಾರೆ.ಇಂದು ಸಂಜೆ 5 ಗಂಟೆಗೆ ವಿಜಯ್ ರಾಘವೇಂದ್ರ ಅವರ ಪತ್ನಿ […]
ರಾಜ್ಯದ ಹೆಸರನ್ನು ‘ಕೇರಳಂ’ಗೆ ಬದಲಾಯಿಸುವ ನಿರ್ಣಯಕ್ಕೆ ಅಂಗೀಕಾರ ಹಾಕಿದ ಕೇರಳ ವಿಧಾನಸಭೆ; ಕೇಂದ್ರದ ಅಂಗೀಕಾರಕ್ಕೆ ಮನವಿ
ತಿರುವನಂತಪುರಂ: ರಾಜ್ಯದ ಹೆಸರನ್ನು ‘ಕೇರಳ’ ದಿಂದ ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ರಾಜ್ಯ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿತು. ‘ಕೇರಳ ವನ್ನು ಕೇರಳಂ ಎಂದು ಬದಲಾಯಿಸಲು ಕೇರಳ ವಿಧಾನಸಭೆಯು ಸಂವಿಧಾನದಕ್ಕೆ ತಿದ್ದುಪಡಿಯನ್ನು ಮಾಡಲು ಕೋರಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ವಿಧಾನಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 118 ರ ಅಡಿಯಲ್ಲಿ ಸದನದಲ್ಲಿ ನಿರ್ಣಯದ ವಿಷಯಗಳನ್ನು ಮಂಡಿಸಿದರು. ಮಲಯಾಳಂನಲ್ಲಿ ‘ಕೇರಳಂ’ ಎಂಬುದು ಸ್ವೀಕಾರಾರ್ಹ ಮತ್ತು ಸಾಮಾನ್ಯ […]
ಸುಧೀಂದ್ರ ಗೋಲ್ಡ್ ಫೈನಾನ್ಸ್ ನ 3 ನೇ ಶಾಖೆ ಉದ್ಘಾಟನೆ
ಉಡುಪಿ: ಇಲ್ಲಿನ ಸರ್ವಿಸ್ ಬಸ್ ಸ್ಟಾಂಡ್ ಸಮೀಪದ ಹೂವಿನ ಮಾರ್ಕೆಟ್ ಎದುರಿನ ಕಟ್ಟಡದಲ್ಲಿ ಮಂಗಳವಾರದಂದು ಸುಧೀಂದ್ರ ಗೋಲ್ಡ್ ಫೈನಾನ್ಸ್ 3 ನೇ ಶಾಖೆಯನ್ನು ಖ್ಯಾತ ಚಲನಚಿತ್ರ ನಟ- ನಿರ್ದೇಶಕ ದೇವದಾಸ್ ಕಾಪಿಕಾಡ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಚಲನ ಚಿತ್ರ ನಟ ಅರುಣ್ ಐರೋಡಿ, ಯುವ ಉದ್ಯಮಿ ಸುಕುಮಾರ್ ಶೆಟ್ಟಿ, ಸಂಸ್ಥೆಯ ಪಾಲುದಾರರಾದ ಶ್ರೀಮತಿ ಆಶಾ ಹೆಗ್ಡೆ, ನವ್ಯ ಹೆಗ್ಡೆ, ನಿಶಾ ಹೆಗ್ಡೆ, ಸಂಸ್ಥೆಯ […]