ರೋಹಿತ್ ಶರ್ಮಾ ನನಗೆ ಸ್ಫೂರ್ತಿ ಎಂದ ತಿಲಕ್​ ವರ್ಮಾ

ಜಾರ್ಜ್‌ಟೌನ್ (ಗಯಾನಾ): ಐಪಿಎಲ್​ನ ಗೋಲ್ಡನ್​ ಫಾರ್ಮ್ ಮುಂದುವರೆಸಿರುವ ವರ್ಮಾ, ತಾವು ಆಡಿರುವ ಎರಡು ಪಂದ್ಯಗಳಿಂದ 90 ರನ್​ ಕಲೆಹಾಕಿದ್ದಾರೆ. ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕವನ್ನೂ ದಾಖಲಿಸಿದ್ದಾರೆ.ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಆಂಧ್ರ ಪ್ರದೇಶದ ಬ್ಯಾಟರ್​ ತಿಲಕ್​ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ರೋಹಿತ್​ ಶರ್ಮಾ ಪ್ರೇರಣೆ ಎಂದು ಹೇಳಿದ್ದಾರೆ.ವಿಂಡೀಸ್​ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಭಾರತದ ಪರ ಮಿಂಚುತ್ತಿರುವ ತಿಲಕ್​ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ಟೀಂ​ ಇಂಡಿಯಾ ನಾಯಕ […]

ಬೆಳಗಾವಿಯಲ್ಲಿ ಕಸದ ಗಾಡಿ ಹತ್ತಿ ತ್ಯಾಜ್ಯ ವಿಲೇವಾರಿ ಪರಿಶೀಲಿಸಿದ ಪಾಲಿಕೆ ಆಯುಕ್ತ

ಬೆಳಗಾವಿ :ಕೆಲವು ಕಡೆಗಳಲ್ಲಿ ಸರಿಯಾದ ಸಮಯಕ್ಕೆ ವಾಹನ ತೆರಳುತ್ತಿಲ್ಲವೆಂದು ಆಯುಕ್ತರಿಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಆಯುಕ್ತ ಅಶೋಕ ದುಡಗುಂಟಿ ಸೋಮವಾರ ಬೆಳಗ್ಗೆ 5.30ಕ್ಕೆ ಸೈಕಲ್ ಮೇಲೆ ಕಸ ಸಂಗ್ರಹಿಸುವ ವಾಹನಗಳ ಶಾಖೆಗೆ ದಿಢೀರ್ ಭೇಟಿ ನೀಡಿದ್ದರು. ನಗರದ ಕೆಲವು ವಾರ್ಡ್​ಗಳಿಗೆ ಕಸ ಸಂಗ್ರಹಿಸುವ ವಾಹನಗಳು ಹೋಗುತ್ತಿರಲಿಲ್ಲ. ಖುದ್ದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಫಿಲ್ಡಿಗಿಳಿಯುವ ಮೂಲಕ ಕಸ ವಿಲೇವಾರಿ‌ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಾಲಕರು, ಕ್ಲೀನರ್ ಗಳು ಎಷ್ಟು ಗಂಟೆಗೆ ಡ್ಯೂಟಿಗೆ […]

ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರದ ಅಫಿಡವಿಟ್​ : ಚೀತಾಗಳ ಪ್ರಾಣ ಉಳಿಸಲು ಶತಪ್ರಯತ್ನ

ನವದೆಹಲಿ: ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಮರುಜನ್ಮಕ್ಕೆ ಶತಪ್ರಯತ್ನ ಮಾಡಲಾಗುತ್ತಿದೆ. ಈ ನಡುವೆ ಕಳೆದ 6 ತಿಂಗಳಲ್ಲಿ 6 ಚೀತಾಗಳು ಸಾವನ್ನಪ್ಪಿವೆ. ಆಫ್ರಿಕಾದಿಂದ ಎರವಲು ತಂದಿರುವ ಚೀತಾಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಅವುಗಳು ಸಾವನ್ನಪ್ಪುತ್ತಿವೆ ಎಂದು ದೂರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ, ಈ ಬಗ್ಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಇಂದು ಕೇಂದ್ರ ಅಫಿಡವಿಟ್​​ ಸಲ್ಲಿಸಿದೆ. ಇಲ್ಲಿಯೇ […]

ಸ್ಪಂದನಾ ವಿಜಯ್​ ಪಾರ್ಥಿವ ಶರೀರ ಇಂದು ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ

ಚಂದನವನದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಮಂಗಳವಾರ (ಇಂದು) ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಈಗಾಗಲೇ ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್​ ಬಂದ ತಕ್ಷಣವೇ ಮಾಧ್ಯಮಕ್ಕೆ ಕೊಡುತ್ತೇವೆ ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್​ಸಿ ಬಿ.ಕೆ ಹರಿಪ್ರಸಾದ್​ ಮಾಹಿತಿ ನೀಡಿದ್ದಾರೆ. ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್​ಸಿ ಬಿ.ಕೆ ಹರಿಪ್ರಸಾದ್​ ಮಾಹಿತಿ : […]

ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ತ್ರಿವರ್ಣ ಧ್ವಜಗಳು : ರಾಷ್ಟ್ರ ಧ್ವಜಗಳಿಗೆ ಭಾರೀ ಬೇಡಿಕೆ

ಹುಬ್ಬಳ್ಳಿ: ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಎಂದರೆ ಅದು ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ಕೋವಿಡ್ ನಂತರ ಮತ್ತೆ ಇಲ್ಲಿನ ರಾಷ್ಟ್ರಧ್ವಜಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಸಂಸ್ಥೆಯು ಈ ವರ್ಷ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಿದೆ. ಈ ಹಿಂದಿನ ದಿನಗಳಿಗೆ ಹೋಲಿಕೆ ‌ಮಾಡಿದರೆ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷದಿಂದ ವರ್ಷಕ್ಕೆ ಚೇತರಿಕೆಯನ್ನು ಕಂಡಿದೆ. ಕಳೆದ […]