ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್‌ಗೆ ತಿದ್ದುಪಡಿ: ಹೆಚ್.ಕೆ.ಪಾಟೀಲ್
ಉಡುಪಿ: ರಾಜ್ಯದಲ್ಲಿ ಕಕ್ಷಿದಾರರಿಗೆ ಶೀಘ್ರದಲ್ಲಿ ನ್ಯಾಯದಾನ ವ್ಯವಸ್ಥೆ ತಲುಪಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲು ವಿಧಾನಸಭೆಯ 2 ಸದನಗಳಲ್ಲಿ ಅನುಮೋದನೆ ಪಡೆದಿದ್ದು, ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು. ಅವರು ಶನಿವಾರ ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಮತ್ತು ವಕೀಲರ ಸಂಘ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ […]
ಬೈಲೂರು ಮಹಿಷಮರ್ಧಿನಿ ದೇವಸ್ಥಾನ ರಸ್ತೆ ಅಗಲೀಕರಣ: ವಾಹನ ಸಂಚಾರ ತಾತ್ಕಾಲಿಕ ನಿಷೇಧ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ಮಹಿಷಮರ್ಧಿನಿ ದೇವಸ್ಥಾನ ರಸ್ತೆಯನ್ನು ಅಗಲೀಕರಣಗೊಳಿಸಿ, ರಸ್ತೆ ಕಾಂಕ್ರೀಟೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ನಗರಸಭೆ ಹಾಗೂ ಪಿ.ಡಬ್ಲ್ಯೂ.ಡಿ ಇಲಾಖೆ ವತಿಯಿಂದ ನಿರ್ವಹಿಸುತ್ತಿದ್ದು, ಸದ್ರಿ ರಸ್ತೆಯಲ್ಲಿ ಆಗಸ್ಟ್ 6 ರಿಂದ ಸೆಪ್ಟಂಬರ್ 5 ರ ವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಬದಲಿ ಮಾರ್ಗವಾಗಿ ಕಿನ್ನಿಮೂಲ್ಕಿ ಗೋಪುರದಿಂದ ಬಲೈಪಾದೆ ಜಂಕ್ಷನ್‌ನಿಂದ ಮುಂದೆ ಎಡಕ್ಕೆ ಹಾಗೂ ಚಿಟ್ಪಾಡಿ ಹನುಮಾನ್ ಗ್ಯಾರೇಜ್ ರಸ್ತೆಯಿಂದ ವಾಹನಗಳು ಸಂಚರಿಸಬಹುದಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ […]
ಕೃಷಿ ಮಾರುಕಟ್ಟೆ ಮೂಲಭೂತ ಸೌಕರ್ಯಾಭಿವೃದ್ಧಿ ಯೋಜನೆಯಡಿ ಸಹಾಯಧನ
ಉಡುಪಿ: ಕೇಂದ್ರ ಸರ್ಕಾರದ ಸಮಗ್ರ ಕೃಷಿ ಮಾರುಕಟ್ಟೆ ಯೋಜನೆಯ ಉಪಯೋಜನೆಯಾದ ಕೃಷಿ ಮಾರುಕಟ್ಟೆ ಮೂಲಭೂತ ಸೌಕರ್ಯಾಭಿವೃದ್ಧಿ ಯೋಜನೆಯಡಿ ಕೃಷಿ/ತೋಟಗಾರಿಕಾ ಸಂಗ್ರಹಣಾ ಘಟಕ ಹಾಗೂ ರೈತ- ಗ್ರಾಹಕ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯದ ಉನ್ನತೀಕರಣಕ್ಕೆ ಸಹಾಯಧನ ಒದಗಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳು, ಪಂಚಾಯತ್‌ಗಳು, ಮಹಿಳಾ, ಪ.ಜಾತಿ ಮತ್ತು ಪ.ಪಂಗಡದ ಉದ್ದಿಮೆದಾರರು ಮತ್ತು ಅವರ ಸಹಕಾರ ಸಂಘ ಮತ್ತು ಸ್ವ ಸಹಾಯ ಸಂಘಗಳು ಸ್ಥಾಪಿಸುವ ಸಂಗ್ರಹಣಾ ಘಟಕಗಳಿಗೆ ಹಾಗೂ ರೈತ- ಗ್ರಾಹಕ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ ಮೂಲಭೂತ ಸೌಕರ್ಯದ […]
ಆ. 8 ಮತ್ತು 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 8 ಮತ್ತು 9 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ಲೈನ್ ಶಿಫ್ಟಿಂಗ್ ಹಾಗೂ 110 ಕೆವಿ ಕಾರ್ಕಳ ವಿದ್ಯುತ್ ಕೇಂದ್ರದಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಂಡಿಮಠ, ದುರ್ಗಾ, ಬೈಲೂರ್ ಎಕ್ಸ್ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಹೆಚ್.ಬಿ, ನಕ್ರೆ ಮತ್ತು ಪದವು ಫೀಡರ್‌ಗಳಲ್ಲಿ ಬಂಡೀಮಠ, ಪೆರ್ವಾಜೆ, ಪತ್ತೊಂಜಿಕಟ್ಟೆ, ಜೋಡುರಸ್ತೆ, […]
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಉದ್ಯೋಗ ಮೇಳ
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಗಸ್ಟ್ 5 ರಂದು ಬೃಹತ್ ಉದ್ಯೋಗ ಮೇಳ ನಡೆಯಿತು. 30 ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ವಿವಿಧ ಹುದ್ದೆಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹೆಚ್.ಆರ್ ರಿಕ್ರೂಟರ್ ಜೀವನ್ ಕುಮಾರ್ , ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ, ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲೆ ಡಾ. ಸೀಮಾ ಜಿ ಭಟ್, ಪ್ಲೇಸ್ಮೆಂಟ್ ಆಫೀಸರ್ ಕುಮಾರಿ ವೈಷ್ಣವಿ ಹಾಗೂ ಎಲ್ಲಾ ಕಂಪನಿಗಳ ಹೆಚ್. ಆರ್ ಮ್ಯಾನೇಜರ್ ಭಾಗವಹಿಸಿದರು. ಸುಮಾರು 1500ಕ್ಕಿಂತಲೂ […]