ಆ. 31 ಮತ್ತು ಸೆ.1ಕ್ಕೆ ಮೀಟಿಂಗ್ ನಡೆಯುವ ಸಾಧ್ಯತೆ : ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ

ನವದೆಹಲಿ : ಇದೀಗ ಈ ಮೈತ್ರಿ ಪಕ್ಷಗಳು ಮೂರನೇ ಬಾರಿಗೆ ಸಭೆ ನಡೆಸಲು ಮುಂದಾಗಿದ್ದು, ಬರುವ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಮೀಟಿಂಗ್​ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಇಂಡಿಯಾ ಮೈತ್ರಿಕೂಟವು ತನ್ನ ಮುಂದಿನ ಸಭೆಯನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು […]

ರಾಜ್ಯ ಸರ್ಕಾರದಿಂದ ಮಳೆ ಹಾನಿ ಪರಿಹಾರ ಪಾವತಿಗೆ ಆದೇಶ

ಬೆಂಗಳೂರು: ಪ್ರವಾಹದಿಂದ ರಾಜ್ಯದ ಹಲವೆಡೆ ಜನ, ಜಾನುವಾರುಗಳ ಸಾವು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳು ಹಾನಿಯಾಗಿತ್ತು. ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದರು. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ಪಾವತಿಸಲು ಸರ್ಕಾರ ಮಂಜೂರಾತಿ ನೀಡಿದೆ.ರಾಜ್ಯದಲ್ಲಿ ಈ ಬಾರಿ ಪ್ರವಾಹದಿಂದ ಮನೆ, ಬೆಳೆ ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಪರಿಷ್ಕೃತ […]

​ ಹಾಲಿವುಡ್​ ನಟ ‘ಬ್ರೇಕಿಂಗ್​ ಬ್ಯಾಡ್’ ಖ್ಯಾತಿಯ ಮಾರ್ಕ್​ ಮಾರ್ಗೋಲಿಸ್​ ನಿಧನ

ಹಾಲಿವುಡ್​ ನಟ ಮಾರ್ಕ್​ ಮಾರ್ಗೋಲಿಸ್​ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ನ್ಯೂಯಾರ್ಕ್​ ನಗರದ ಮೌಂಟ್​ ಸಿನಾಯ್​ ಆಸ್ಪತ್ರೆಯಲ್ಲಿ ನಿಧನರಾದರುಅವರಿಗೆ 83 ವರ್ಷ ವಯಸ್ಸಾಗಿತ್ತು. ನಟ ‘ಬ್ರೇಕಿಂಗ್​ ಬ್ಯಾಡ್’​ ಮತ್ತು ‘ಬೆಟರ್​ ಕಾಲ್​ ಸಾಲ್’​ ಶೋನ ಹೆಕ್ಟರ್​ ಸಲಾಮಾಂಕಾ ಪಾತ್ರಕ್ಕೆ ಹೆಸರು ವಾಸಿಯಾಗಿದ್ದಾರೆ. ಮಾರ್ಕ್ ಮಾರ್ಗೋಲಿಸ್​ ನಿಧನದ ಸುದ್ದಿಯನ್ನು ಅವರ ಮಗ ಮಾರ್ಗನ್​ ಮಾರ್ಗೋಲಿಸ್​ ಮಾಧ್ಯಮಕ್ಕೆ ತಿಳಿಸಿದ್ದಾರೆ..83 ವರ್ಷದ ಹಾಲಿವುಡ್​ ನಟ ಮಾರ್ಕ್​ ಮಾರ್ಗೋಲಿಸ್ ಅವರು ಗುರುವಾರ ನ್ಯೂಯಾರ್ಕ್​ ನಗರದ ಮೌಂಟ್​ ಸಿನಾಯ್​ ಆಸ್ಪತ್ರೆಯಲ್ಲಿ ನಿಧನರಾದರು. ಮೊದಲಿಗೆ ರಂಗಭೂಮಿಯಲ್ಲಿ […]

ಝಾಕ್ ಕ್ರಾಲಿ ಉತ್ಸುಕತೆ: ಭಾರತದ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ನ ‘ಬಾಜ್‌ಬಾಲ್’ ಆಟ

ಲಂಡನ್ (ಯುಕೆ): ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ ತಂಡವು ತನ್ನ ‘ಬಾಜ್‌ಬಾಲ್’ ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್​ ಮುಂದುವರೆಸಲಿದೆ.ವಿಭಿನ್ನ ಪರಿಸ್ಥಿತಿ, ವಾತಾವರಣದಲ್ಲಿ ನಮ್ಮ ತಂಡದ ಸತ್ವಪರೀಕ್ಷೆಗೆ ಇದೊಂದು ಅದ್ಭುತ ಅವಕಾಶ ಎಂದು ಇಂಗ್ಲೆಂಡ್‌ನ ಆಕ್ರಮಣಕಾರಿ ಆರಂಭಿಕ ಆಟಗಾರ ಝಾಕ್ ಕ್ರಾಲಿ ಹೇಳಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್​ ತಂಡ​ ಬಾಜ್‌ಬಾಲ್ ಶೈಲಿಯ ಆಟ ಆಡುವ ಕುರಿತಂತೆ ತಂಡದ ಆರಂಭಿಕ ಆಟಗಾರ ಝಾಕ್ ಕ್ರಾಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಿವೀಸ್​ನ ಮಾಜಿ ಬ್ಯಾಟರ್​ […]

ಅಮೆರಿಕ ಕಿಡ್ಸ್ ವರ್ಲ್ಡ್ ಚಾಂಪಿಯನ್ಸ್‌ನ ಟಾಪ್ -5 ರಲ್ಲಿ ಮೂವರು ಭಾರತೀಯರು: ಗಾಲ್ಫ್​ನಲ್ಲಿ ನಿಹಾಲ್ ಚೀಮಾ ದ್ವಿತೀಯ

ಪೈನ್‌ಹರ್ಸ್ಟ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ 6 ರಿಂದ 12 ವರ್ಷ ವಯಸ್ಸಿನ ಬಾಲಕ – ಬಾಲಕಿಯರ ವಿಶ್ವಚಾಂಪಿಯನ್‌ ಶಿಪ್‌ನಲ್ಲಿ ಭಾರತೀಯ ಮೂವರು ಪುಟ್ಟ ಕ್ರೀಡಾ ಪಟುಗಳು ಟಾಪ್​-5 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 6 ವರ್ಷದೊಳಗಿನ ಬಾಲಕರ ವಿಭಾಗದ ಗಾಲ್ಫ್ ಆಟದಲ್ಲಿ ನಿಹಾಲ್ ಚೀಮಾ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾನೆ. ಇನ್ನು ಕಬೀರ್ ಗೋಯಲ್ 4 ನೇ ಸ್ಥಾನ ಪಡೆದುಕೊಂಡಿದ್ದರೆ, ಓಜಸ್ವಿನಿ ಸಾರಸ್ವತ್ ಎಂಬ ಬಾಲಕಿ, ಬಾಲಕಿಯರ ವಿಭಾಗದಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. […]