ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯ ಚಿಕಿತ್ಸೆ ಪಡೆಯುವ ವಿದೇಶೀ ಪ್ರಜೆಗಳಿಗಾಗಿ ‘ಆಯುಷ್ ವೀಸಾ’ ಪರಿಚಯಿಸಿದ ಕೇಂದ್ರ
ನವದೆಹಲಿ: ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಗಳ ಮೂಲಕ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ಹೊಸದಾಗಿ ‘ಆಯುಷ್ ವೀಸಾ’ ವನ್ನು ಪರಿಚಯಿಸಲಾಗಿದೆ. ಈ ವೀಸಾ ವರ್ಗದ ಪರಿಚಯವು ವಿಶೇಷ ವೀಸಾ ಯೋಜನೆಯನ್ನು ರಚಿಸುವ ಪ್ರಸ್ತಾಪವನ್ನು ಪೂರೈಸುತ್ತದೆ, ಇದು ಆಯುಷ್ ವ್ಯವಸ್ಥೆಗಳು ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸಕ ಆರೈಕೆ, ಕ್ಷೇಮ ಮತ್ತು ಯೋಗ ಚಿಕಿತ್ಸೆಗಳಿಗಾಗಿ ಪ್ರತ್ಯೇಕವಾಗಿ ಭಾರತಕ್ಕೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ವೀಸಾ ಕೈಪಿಡಿಯಲ್ಲಿ […]
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಸಿದ್ದರಾಮಯ್ಯ ಅವರು ಮರದಲ್ಲಿ ತಯಾರಿಸಿದ ಆನೆಯ ವಿಗ್ರಹ ಮತ್ತು ಹಾರವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದರು. ಪಿಎಂಒ ಟ್ವೀಟ್ ಮಾಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕದ ಸಾಂಪ್ರದಾಯಿಕ ಪೇಟ ಮತ್ತು ಶಾಲನ್ನು ತೊಟ್ಟಿದ್ದಾರೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ […]
ಆ. 6 ರಂದು ಹಿರಿಯ ವಿದ್ವಾಂಸ ನಾಡೋಜ ಪ್ರೊ. ಕೆ.ಪಿ.ರಾವ್ ಅಭಿನಂದನಾ ಕಾರ್ಯಕ್ರಮ
ಉಡುಪಿ: ನಾಡಿನ ಹಿರಿಯ ವಿದ್ವಾಂಸ ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ನಾಡೋಜ ಪ್ರೊ.ಕೆ.ಪಿ.ರಾವ್ ಅವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ನಾಡೋಜ ಕೆ.ಪಿ.ರಾವ್ ಅಭಿನಂದನ ಸಮಿತಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದೆ. ಉಡುಪಿಯ ವಿವಿಧ ಸಂಘ -ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಗಸ್ಟ್ 6, ಭಾನುವಾರದಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಳಿಗ್ಗೆ ಗಂಟೆ 9.00 ರಿಂದ 1.15 ರವರೆಗೆ […]
ಮಂಗಳೂರು: ಸಾಹಿತ್ಯ ಅಕಾಡೆಮಿ ದೆಹಲಿ ವತಿಯಿಂದ ಕಥಾಸಂಧಿ ಕಾರ್ಯಕ್ರಮ
ಮಂಗಳೂರು: ಸಾಧ್ಯವಾದಷ್ಟು ಭಾಷಾ ಬಳಕೆ ಮತ್ತು ನಿರೂಪಣೆಯಲ್ಲಿ ಶುದ್ದತೆಯನ್ನು ಕಾಪಾಡಿಕೊಂಡು ಬರುವುದರ ಜತೆಗೆ ಪ್ರತಿ ಕಥೆಯಲ್ಲಿ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹಿರಿಯ ಕಥೆಗಾರ ಡಾಲ್ಪಿ ಕಾಸ್ಸಿಯಾ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ಕೊಡಿಯಾಲ್ ಬೈಲ್ ಬಿಷಪ್ಪರ ನಿವಾಸದಲ್ಲಿ ರಾಕ್ಣೊ ವಾರಪತ್ರಿಕೆಯ ಆಶ್ರಯದಲ್ಲಿ ಭಾನುವಾರದಂದು ಸಾಹಿತ್ಯ ಅಕಾಡೆಮಿ ದೆಹಲಿ ಆಯೋಜಿಸಿದ ಕಥಾಸಂಧಿ ಕಾರ್ಯಕ್ರಮದಲ್ಲಿ ತಮ್ಮ ಆಯ್ದ ಕಥೆ ‘ಮಾಂಯ್ ಕಿತ್ಯಾಕ್ ರಡ್ತಾ?’ (ಅಮ್ಮ ಯಾಕೆ ಅಳುತ್ತಾರೆ?) ಪ್ರಸ್ತುತ ಪಡಿಸಿ, ಕಥನ ಕಲೆಯ ಬಗ್ಗೆ ಮಾತನಾಡಿದರು. […]
ಆ.15 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ವತಿಯಿಂದ ಬಾಲಕರ ವಾಲಿಬಾಲ್ ಪಂದ್ಯಾಕೂಟ
ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಅಂಡರ್ -20 ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಕೂಟ: ಇಂಡಿಪೆಂಡೆನ್ಸ್ ಟ್ರೋಫಿ -2023, 15 ಆಗಸ್ಟ್- ಬೆಳಿಗ್ಗೆ 9:00 ಗಂಟೆಗೆ ಕೋಟ್ನಕಟ್ಟೆ ಮೈದಾನ, ಹಿರಿಯಡಕ ಇಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ರೂ. 500/- ಪ್ರಥಮ ಬಹುಮಾನ 5, 555 ಹಾಗೂ ಇಂಡಿಪೆಂಡೆನ್ಸ್ ಟ್ರೋಫಿ ದ್ವಿತೀಯ ಬಹುಮಾನ 3,333 ಹಾಗೂ ಇಂಡಿಪೆಂಡೆನ್ಸ್ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. […]