ಕುನೊ ಉದ್ಯಾನವನದಲ್ಲಿ ಮೃತ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆ: ‘ಧಾತ್ರಿ’ ಹೆಣ್ಣು ಚೀತಾ ಸಾವು
ಭೋಪಾಲ್ (ಮಧ್ಯಪ್ರದೇಶ):ಚೀತಾ ಯೋಜನೆಯಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಎರಡು ಬ್ಯಾಚ್ಗಳಲ್ಲಿ ಒಟ್ಟು 20 ಚೀತಾಗಳನ್ನು ತರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ ಐದು ಹೆಣ್ಣು ಮತ್ತು ಮೂರು ಗಂಡು ಸೇರಿ ಎಂಟು ಚೀತಾಗಳು ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಸ್ಥಳಾಂತರ ಮಾಡಲಾಗಿದೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ಇರಿಸಲಾಗಿದೆ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಇದರೊಂದಿಗೆ ಮಾರ್ಚ್ ತಿಂಗಳಿಂದ ಇದುವರೆಗೆ ಮೃತಪಟ್ಟ ಚೀತಾಗಳ […]
‘ಕೋಯಿ ಮಿಲ್ ಗಯಾ’ 20 ವರ್ಷಗಳ ಬಳಿಕ ಮರು ರಿಲೀಸ್
ಕೋಯಿ ಮಿಲ್ ಗಯಾ ಚಲನಚಿತ್ರ 2023ರ ಆಗಸ್ಟ್ 8ರಂದು 20 ವರ್ಷ ಪೂರೈಸಲಿದೆ. ಸೂಪರ್ ಹಿಟ್ ಸಿನಿಮಾ 20 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ, ದೇಶದ ಪ್ರಮುಖ 30 ನಗರಗಳಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆಗಸ್ಟ್ 4ರಂದು ಅಂದರೆ ಇದೇ ಶುಕ್ರವಾರ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ.ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ‘ಕೋಯಿ ಮಿಲ್ ಗಯಾ’ ಯಾರಿಗೆ ತಾನೆ ನೆನಪಿಲ್ಲ […]
ದಕ್ಷಿಣ ರೈಲ್ವೆ ಇಲಾಖೆಯಿಂದ 790 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. 10ನೇ ತರಗತಿ ಮತ್ತು ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ದಕ್ಷಿಣ ರೈಲ್ವೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲೊಕೋ ಪೈಲಟ್, ಟೆಕ್ನಿಶಿಯನ್ ಪೋಸ್ಟ್, ಜ್ಯೂನಿಯರ್ ಇಂಜಿನಿಯರ್, ಟ್ರೈನಿ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. ವಿದ್ಯಾರ್ಹತೆ: ಅಸಿಸ್ಟೆಂಟ್ ಲೋಕೋ […]
ಎರಡನೇ ಸುತ್ತಿಗೆ ಪ್ರವೇಶಿಸಿದ ಶ್ರೀಕಾಂತ್, ಪ್ರಣಯ್, ಪಿವಿ ಸಿಂಧು
ಸಿಡ್ನಿ (ಆಸ್ಟ್ರೇಲಿಯಾ):ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ 21-18, 21-7ರಲ್ಲಿ ವಿಶ್ವದ 14ನೇ ಶ್ರೇಯಾಂಕದ ಜಪಾನ್ನ ಷಟ್ಲರ್ ಕೆಂಟಾ ನಿಶಿಮೊಟೊ ಅವರನ್ನು ಸೋಲಿಸಿದರು. ಗುರುವಾರ ನಡೆಯಲಿರುವ ಎರಡನೇ ಸುತ್ತಿನಲ್ಲಿ ಅವರು ಚೈನೀಸ್ ತೈಪೆಯ ಸು ಲಿ ಯಾಂಗ್ ವಿರುದ್ಧ ಆಡಲಿದ್ದಾರೆ. ಭಾರತದ ಅತ್ಯುನ್ನತ ಶ್ರೇಯಾಂಕದ ಸಿಂಗಲ್ಸ್ ಷಟ್ಲರ್ ಪ್ರಣಯ್ ಅವರು ಹಾಂಕಾಂಗ್ನ ವಿಶ್ವದ ನಂ. 15 ರ ಲೀ ಚೆಯುಕ್ ಯಿಯು ಅವರ ಸವಾಲನ್ನು ಎದುರಿಸಿ 21-18, 16-21, 21-15 ಅಂತರದಲ್ಲಿ ಗೆದಿದ್ದಾರೆ. ವಿಶ್ವ 9ನೇ ಶ್ರೇಯಾಂಕದ ಆಟಗಾರ ಪ್ರಣಯ್ […]
ಹೈಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ ಟ್ವಿಟ್ಟರ್: ವೈಯಕ್ತಿಕ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾ
ಬೆಂಗಳೂರು: ಕೆಲವು ವೈಯಕ್ತಿಕ ಖಾತೆಗಳನ್ನು ರದ್ದುಪಡಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ 50 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಟ್ವಿಟ್ಟರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ವೈಯಕ್ತಿಕ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಟ್ವಿಟ್ಟರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಮೇಲ್ಮನವಿ ಅರ್ಜಿಯಲ್ಲಿ ಏಕ ಸದಸ್ಯ ಪೀಠ 50 ಲಕ್ಷ ದಂಡ ವಿಧಿಸಿರುವುದು ಅತಿ […]