ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್ ಗಳಿಗೆ ಪ್ರವೇಶಾತಿ
ಮಣಿಪಾಲ: ಉದ್ಯೋಗ ಆಥವಾ ನೌಕರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್ ಗಳನ್ನು ಶ್ರೀ ಶಾರದ ಟೀಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಹಲವು ಪ್ರತಿಷ್ಠಿತ ಹಾಗೂ ಹೆಸರುವಾಸಿ ಶಿಕ್ಷಣ (CBSE/ICSE/STATE) ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ […]
ನೀಟ್ ಪರೀಕ್ಷೆ: ಜಿಪ್ಮರ್ ಮತ್ತು ಏಮ್ಸ್ ಗೆ ಆಯ್ಕೆಯಾದ ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳು
ಕಾರ್ಕಳ: ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊಂಡಿದ್ದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ.ಪಿ, ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ (JIPMER) ನಲ್ಲಿ ಪ್ರವೇಶ ಪಡೆಯುವುದು ಅಸಾಮಾನ್ಯ ಸಾಧನೆಯಾಗಿದೆ. ಜಾಗೃತಿ ಕೆ.ಪಿ ನೀಟ್ ಪರೀಕ್ಷೆಯಲ್ಲಿ 661 ಅಂಕ ಗಳಿಸುವುದರ ಮೂಲಕ ಜಿಪ್ಮರ್ (JIPMER) […]
ವಿಹಿಂಪ ಮೆರವಣಿಗೆ ಮೇಲೆ ಕಲ್ಲು ತೂರಾಟ: ಹರ್ಯಾಣದಲ್ಲಿ ಹಿಂಸಾಚಾರ; ನಿಷೇಧಾಜ್ಞೆ ಜಾರಿ
ಚಂಡಿಗಢ: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಜನಸಮೂಹವೊಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ ಕಾರಣ ಇಬ್ಬರು ಹೋಮ್ ಗಾರ್ಡ್‌ಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಪೊಲೀಸರು ಸೇರಿದಂತೆ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಹಾರಿಸಲಾಯಿತು. ಜನಸಮೂಹ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಗಲಭೆ ಭುಗಿಲೆದ್ದಿತು, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. VIDEO | Several […]
ಕಿನ್ನಿಮೂಲ್ಕಿ ಬ್ರಹ್ಮ ಬೈದರ್ಕಳ ಬಡಾವಣೆ ನಿವಾಸಿಗಳ ಸಂಘದ ಮಹಾಸಭೆ
ಉಡುಪಿ: ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಮಹಾಸಭೆಯು ಜುಲೈ 23 ರಂದು ಕಿನ್ನಿಮುಲ್ಕಿ ಶ್ರೀ ವೀರಭದ್ರ ಕಲಾ ಭವನದಲ್ಲಿ ಜರಗಿತು. ನಗರಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಡಾವಣೆಯ ಅಭಿವೃದ್ಧಿಗಾಗಿ ಸರಕಾರದಿಂದ ಅನುದಾನ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದರು. ಬಡಾವಣೆಯ ನಿವಾಸಿಗಳಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಅ ಅಧ್ಯಕ್ಷ ವಿಜಯ್ ಕುಮಾರ್ ಸ್ವಾಗತಿಸಿದರು. […]
ಡಾ. ದೇವದಾಸ್ ಕಾಮತ್ ಅವರ ಅಭಿನಂದನಾ ಕಾರ್ಯಕ್ರಮ: ಗುರ್ಮೆ ಸುರೇಶ್ ಶೆಟ್ಟಿ ಭಾಗಿ
ಹಿರಿಯಡಕ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜು. 31 ರಂದು ನಡೆದ IMA-KSB DOCTORS DAY AWARD – 2023 ಪ್ರಶಸ್ತಿ ಪುರಸ್ಕೃತ ಡಾ. ದೇವದಾಸ್ ಕಾಮತ್ ಅವರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ್ ಭಟ್, ಅಮೋಘ (ರಿ.) ಹಿರಿಯಡಕದ ನಿರ್ದೇಶಕಿ ಪೂರ್ಣಿಮಾ ಸುರೇಶ್, ಶಾಲಾ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.