ದುನಿಯಾ ವಿಜಯ್‌! -ಧರ್ಮಸ್ಥಳ ಬಗ್ಗೆ ವಿವಾದಿತ ಹೇಳಿಕೆ

ಸೌಜನ್ಯ ಕೊಲೆ ಪ್ರಕರಣ: ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ- ನಟ ದುನಿಯಾ ವಿಜಯ ದುನಿಯಾ ವಿಜಯ್ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಸೌಜನ್ಯ ಕೊಲೆ ಪ್ರಕರಣದ ನ್ಯಾಯ ಸಿಗುವವರೆಗೂ […]

ಉಡುಪಿ ಸೀರೆಗಳ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ: ಅಡಿಕೆಯ ನೈಸರ್ಗಿಕ ಬಣ್ಣದಿಂದ ತಯಾರಿಸಿದ ಉಡುಪಿ ಸೀರೆ ಬಿಡುಗಡೆ

ಕಿನ್ನಿಗೋಳಿ: ಕದಿಕೆ ಟ್ರಸ್ಟ್ ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಉಡುಪಿ ಸೀರೆಗಳನ್ನು ಸೋಮವಾರದಂದು ತಾಳಿಪಾಡಿ ನೇಕಾರರ ಸೊಸೈಟಿ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. 2018ರಲ್ಲಿ ಉಡುಪಿ ಸೀರೆ ಪುನರುಜ್ಜೀವನವನ್ನು ಪ್ರಾರಂಭಿಸಿದ ಕದಿಕೆ ಟ್ರಸ್ಟ್, ಎನ್‌ಜಿಒ ಸಾಮಾಜಿಕ ಮಾಧ್ಯಮ ಪ್ರಚಾರ, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ಮತ್ತು ಇತರ ಕ್ರಮಗಳಂತಹ ಬಹುಮುಖಿ ವಿಧಾನಗಳೊಂದಿಗೆ ಎರಡು ಜಿಲ್ಲೆಗಳಲ್ಲಿ ನೇಯ್ಗೆಯನ್ನು ಅಳಿವಿನಿಂದ ಮರಳಿ ತಂದಿದೆ. ಉಡುಪಿ ಸೀರೆಯನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಆಕರ್ಷಕವಾಗಿಸುವ ಉಪಕ್ರಮವಾಗಿ […]

ಮಾಲೀಕರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು: 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಕಳವು

ಹಿರಿಯಡ್ಕ: ಇಲ್ಲಿನ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿ ಶಂಕರ ಟಿ ಎಂಬವರು ತಮ್ಮ ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿದ್ದು, ವಾಪಾಸು ಬರುವಷ್ಟರಲ್ಲಿ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನಗೈದ ಪ್ರಕರಣ ಸೋಮವಾರ ಮಧ್ಯಾಹ್ನ ನಡೆದಿದೆ. ಕಳ್ಳತನಗೈದ ಚಿನ್ನಾಭರಣದ ಒಟ್ಟು ತೂಕ 242 ಗ್ರಾಂ ಆಗಿದ್ದು ಮೌಲ್ಯ 8,50,000 ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ 40 ಸಾವಿರ ರೂನ ಕ್ಯಾಮರಾ ಮತ್ತು 20 ಸಾವಿರ ನಗದು ಕಳ್ಳತನವಾಗಿದೆ. ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆ ಮಧ್ಯದ ಅವಧಿಯಲ್ಲಿ ಘಟನೆ […]

ಕ್ರಿಯೇಟಿವ್ ಪ.ಪೂ ಕಾಲೇಜಿಗೆ ಶಾಲಾ ವಾಹನ ಚಾಲಕರು ಬೇಕಾಗಿದ್ದಾರೆ

ಕಾರ್ಕಳ: ಕ್ರಿಯೇಟಿವ್ ಪ.ಪೂ ಕಾಲೇಜು, ಕಾರ್ಕಳ ಮತ್ತು ಉಡುಪಿ ಶಾಖೆಗೆ ಶಾಲಾ ವಾಹನ ಚಾಲಕರು ಬೇಕಾಗಿದ್ದಾರೆ. ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ. ಆಸಕ್ತರು 9900727407  ಅನ್ನು ಸಂಪರ್ಕಿಸಬಹುದು.

ಎಂ.ಟಿ. ವಾಸುದೇವನ್ ನಾಯರ್ ಜನಾಂಗದ ಕಣ್ಣು ತೆರೆಸಿದ ಲೇಖಕ: ವೈದೇಹಿ

ಮಣಿಪಾಲ: 90 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಇವರು ತಮ್ಮ ಅಪೂರ್ವ ಒಳನೋಟಗಳಿಂದ ಮನುಷ್ಯನ ಮನಸ್ಸಿನ ಪದರು ಪದರುಗಳನ್ನು ಬಿಚ್ಚಿಟ್ಟು ಜನಾಂಗದ ಕಣ್ಣು ತೆರೆಸಿದ್ದಾರೆ. ತಮ್ಮ ನಡೆ-ನುಡಿ , ಆಚಾರ-ವಿಚಾರಗಳಿಂದ ಕೇರಳ ಸಂಸ್ಕೃತಿಯ, ಹೀಗಾಗಿ ಭಾರತೀಯ ಸಂಸ್ಕೃತಿಯ ಅಪ್ಪಟ ಪ್ರತೀಕವಾಗಿದ್ದಾರೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಸಹೃದಯ ಸಂಗಮಮ್, ಕೇರಳ ಕಲ್ಚರಲ್ ಆಂಡ್ ಸೋಶಿಯಲ್ […]