ನಾಳೆ (ಆ.1) ಸಿಎಂ ಸಿದ್ದರಾಮಯ್ಯ ಉಡುಪಿಗೆ: ಭರ್ಜರಿ ಸ್ವಾಗತಕ್ಕೆ ಕಾಂಗ್ರೆಸ್ ಸಜ್ಜು
ಉಡುಪಿ: ನಾಳೆ ಸಿಎಂ ಸಿದ್ದರಾಮಯ್ಯ ಅವರು ದ.ಕ ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಹೆಜಮಾಡಿ ಟೋಲ್ ಗೇಟ್ ಬಳಿ ಉಡುಪಿ ಜಿಲ್ಲಾ ಕಾಂಗ್ರೆಸ್ ಭರ್ಜರಿಯಾಗಿ ಸ್ವಾಗತಿಸಲಿದೆ. ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳು, ನಾಯಕರು, ಬ್ಲಾಕ್ ಅಧ್ಯಕ್ಷರು, ಎಲ್ಲ ಘಟಕಗಳ ಅಧ್ಯಕ್ಷರು ಸಮಿತಿ ಸದಸ್ಯರು, ಹಾಗೂ ಕಾರ್ಯಕರ್ತರು ಹಾಜರಿದ್ದು, ಬೆಳಿಗ್ಗೆ 11 ಗಂಟೆಗೆ ಹೆಜಮಾಡಿ ಟೋಲ್ ಗೇಟ್ ಬಳಿ ಉಪಸ್ಥಿತರಿರಲು ಸೂಚಿಸಲಾಗಿದೆ. ನಾಳೆ ಮಧ್ಯಾಹ್ನ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿರುವ ಸಿಎಂ, ಬಳಿಕ […]
ಅ.15 ರಿಂದ ಅ.24 ರ ವರೆಗೆ ದ್ವಿತೀಯ ವರ್ಷದ ಉಚ್ಚಿಲ ದಸರಾ: ಮೈಸೂರು ದಸರಾ ಮಾದರಿಯಲ್ಲಿರಲಿದೆ ಕಾರ್ಯಕ್ರಮಗಳು!!
ಕಾಪು: ಅ.15 ರಿಂದ 24 ರ ವರೆಗೆ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ದ್ವಿತೀಯ ಉಚ್ಚಿಲ ದಸರಾ ಕಾರ್ಯಕ್ರಮವು ಸಂಭ್ರಮದಿಂದ ಜರುಗಲಿದ್ದು, ಅದರ ಪೂರ್ವಾಭಾವಿ ಸಭೆಯು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜರುಗಿತು. ಕಳೆದ ವರ್ಷ ಜೀರ್ಣೋದ್ಧಾರ ನಡೆದ ಬಳಿಕ ಕ್ಷೇತ್ರವು ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ಉದ್ದೇಶಿಸಲಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರದ […]
ವಿದ್ವಾನ್ ರಘುಪತಿ ಭಟ್ ಅವರ “ನಾನು ಮತ್ತು ನಾನು” ಭಾವ ಸಂಕಲನ ಕೃತಿ ಬಿಡುಗಡೆ
ಮಂಗಳೂರು: ಸಾಹಿತ್ಯವು ಭಾವನೆಗಳೊಂದಿಗೆ ಹುಟ್ಟಿಕೊಳ್ಳುತ್ತದೆ ಹೊರತು ಆಧುನಿಕ ಯಂತ್ರಗಳಿಂದಲ್ಲ. ಮನುಷ್ಯನು ಭಾವಜೀವಿ ಹಾಗಾಗಿ ಮನಸ್ಸಿನಲ್ಲಿ ಉಂಟಾಗುವ ಭಾವ ಪ್ರಪಂಚದ ಕಥೆ ವ್ಯಥೆಗಳೇ ಕಾವ್ಯಕ್ಕೆ ವಸ್ತು ಎಂದು ಹಿರಿಯ ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಅವರು ಹೇಳಿದರು. ದ.ಕ.ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ಆಶ್ರಯದಲ್ಲಿ ಶನಿವಾರ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ವಿದ್ವಾನ್ ರಘುಪತಿ ಭಟ್ ರಚಿಸಿದ “ನಾನು ಮತ್ತು ನಾನು” ಭಾವ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾಹಿತಿ ಶಶಿರಾಜ್ ಕಾವೂರು […]
ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಕಾನ್‌ಸ್ಟೆಬಲ್
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಸೋಮವಾರ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗಿನ ಜಾವ 5 ಗಂಟೆಯ ನಂತರ, ಕಾನ್ಸ್‌ಟೇಬಲ್ ತನ್ನ ಸ್ವಯಂಚಾಲಿತ ಆಯುಧದಿಂದ ಗುಂಡು ಹಾರಿಸಿ ರೈಲಿನಲ್ಲಿದ್ದ ಆರ್‌ಪಿಎಫ್ ಎಎಸ್‌ಐ ಮತ್ತು ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಾಲ್ಘರ್ ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿದೆ. […]
ಉಡುಪಿ ಅಂಚೆ ಇಲಾಖೆ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ
ಉಡುಪಿ: ಉಡುಪಿಯ ಅಂಚೆ ಸಿಬ್ಬಂದಿ ವಸತಿ ಸಮುಚ್ಚಯದ ಆವರಣದಲ್ಲಿ ಕರ್ನಾಟಕ ಅಂಚೆ ವೃತ್ತದ ಚೀಫ಼್ ಪೋಸ್ಟಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಸಿಬ್ಬಂದಿಗಳು ಹಾಗೂ ಅಂಚೆ ಪರಿವಾರದವರು ಬಹಳ ಉತ್ಸಾಹದಿಂದ ಭಾಗವಹಿಸಿದರು. ಈ ದಿನದ ಸ್ಮರಣಾರ್ಥ ಮತ್ತು ಅದರ ಮಹತ್ವವನ್ನು ಎಲ್ಲೆಡೆ ಸಾರುವ ಉದ್ದೇಶದಿಂದ ಅಂಚೆ ಪತ್ರ ಮತ್ತು ಲಕೋಟೆಗಳ ಮೇಲೆ ವಿಶೇಷ ಮೊಹರನ್ನು ಮುದ್ರಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಅಂಚೆಚೀಟಿ ಸಂಗ್ರಹ […]