ಐಐಟಿ ಖರಗ್ ಪುರ ಕ್ಕೆ ಪ್ರವೇಶ ಪಡೆದ ಜ್ಞಾನಸುಧಾ ವಿದ್ಯಾರ್ಥಿಗಳು
ಕಾರ್ಕಳ : ಗಣಿತನಗರದಲ್ಲಿರುವ ಜ್ಞಾನಸುಧಾ ಪ.ಪೂ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐ.ಐ.ಟಿ)ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ಡ್ ಫಲಿತಾಂಶದಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ ಆಲ್ ಇಂಡಿಯಾ (ಜನರಲ್ ಮೆರಿಟ್) 3918ನೇ ರ‍್ಯಾಂಕ್ ಮತ್ತು ಸಮೃದ್ಧ್ ನೆಲ್ಲಿ ಆಲ್ ಇಂಡಿಯಾ (ಜನರಲ್‌ಮೆರಿಟ್) 5769ನೇ ರ‍್ಯಾಂಕ್ ಪಡೆದು ಪ್ರತಿಷ್ಠಿತ ಐ.ಐ.ಟಿ ಖರಗ್‌ಪುರ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶಿಸಿದ್ದಾರೆ. ಕೆ.ಸಿ.ಇ.ಟಿ. ಇಂಜಿನಿಯರಿಂಗ್‌ನಲ್ಲಿಯೂ ಧನ್ವಿತ್ ನಾಯಕ್ 87ನೇ ರ‍್ಯಾಂಕ್, ಸಮೃದ್ಧ್ ನೆಲ್ಲಿ 349ನೇ […]
ಮಂಜೇಶ್ವರ: ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಸ್ನೇಹಾಲಯ ಫ್ಯಾಷನ್ ಫೆಸ್ಟ್
ಮಂಜೇಶ್ವರ: ಜು. 29 ರಂದು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದದಲ್ಲಿರುವವರಿಗಾಗಿ ‘ಸ್ನೇಹಾಲಯ ಫ್ಯಾಷನ್ ಫೆಸ್ಟ್’ ಅನ್ನು ಆಯೋಜಿಸಲಾಯಿತು. ಮಾನಸಿಕ ಅಸ್ವಸ್ಥರಿಗೆ ನಡೆದ ಈ ಫ್ಯಾಷನ್ ಫೆಸ್ಟ್, ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ಮಾತ್ರವಲ್ಲದೆ ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಮಂಜೇಶ್ವರ ಶಾಸಕ ಎ.ಕೆ. ಎಮ್ ಅಶ್ರಫ್ ಹಾಗೂ ಬ್ರದರ್ ಜೋಸೆಪ್ […]
ಐಐಟಿ ಖರಗ್ ಪುರ್ ಗೆ ಆಯ್ಕೆಯಾದ ಶ್ರೀ ವೆಂಕಟರಮಣ ಪ.ಪೂ ಕಾಲೇಜು ವಿದ್ಯಾರ್ಥಿನಿ ಪ್ರಣಮ್ಯ ಜಿ.ಎಚ್
ಕುಂದಾಪುರ : ರಾಷ್ಟ್ರಮಟ್ಟದಲ್ಲಿ ಜರುಗಿದ 2023 ನೇ ಸಾಲಿನ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ ಜಿ.ಎಚ್ ರಾಷ್ಟ ಮಟ್ಟದಲ್ಲಿ ವರ್ಗವಾರು(category wise) 2126 ನೇ ರ‍್ಯಾಂಕ್ ಪಡೆದಿರುವುದರಿಂದ ಕೇಂದ್ರ ಸರಕಾರದ ಶಿಕ್ಷಣ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ ಐ ಟಿ ) ಖರಗ್ ಪುರ ಪಶ್ಚಿಮ ಬಂಗಾಳದ ವಿದ್ಯಾಸಂಸ್ಥೆಗೆ 2023 – 2024 ನೇ ಸಾಲಿನ ಬಾಹ್ಯಕಾಶ ಸಂಶೋಧನಾ ಶಿಕ್ಷಣದ ವಿಭಾಗದ ಎಂಜಿನಿಯರಿಂಗ್ ಪದವಿ ಶಿಕ್ಷಣ ಪಡೆಯಲು […]
ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿದ ಜಯ್ ಶಾ
ದಕ್ಷಿಣ ಕನ್ನಡ: ಇಲ್ಲಿನ ಕಡಬ ತಾಲೂಕಿನ ಸುಪ್ರಸಿದ್ದ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾನುವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿ ಜಯ್ ಶಾ ಮತ್ತು ಪತ್ನಿ ರಿಷಿತಾ ಶಾ ಸಮೇತರಾಗಿ ಭೇಟಿ ನೀಡಿ ಆಶ್ಲೇಷ ಬಲಿ ಪೂಜೆ ಸಲ್ಲಿಸಿದರು. ಅವರು ದೇವಾಲಯದ ಸಂಕೀರ್ಣದಲ್ಲಿರುವ ಹೊಸಲಿಗಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು ಮತ್ತು ತಮ್ಮ ತಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ದೇವಾಲಯದಲ್ಲಿ ನೀಡಲಾಗುವ […]
ಖ್ಯಾತ ಮೂತ್ರಶಾಸ್ತ್ರಜ್ಞ ಡಾ. ವೇಣುಗೋಪಾಲ್ ನಿಧನ
ಮಣಿಪಾಲ: ಖ್ಯಾತ ಮೂತ್ರಶಾಸ್ತ್ರಜ್ಞ ಮತ್ತು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಸಂಸ್ಥಾಪಕ ಡಾ. ವೇಣುಗೋಪಾಲ್ ಅವರು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇವರು ಪ್ರಸ್ತುತ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಅವರ ತಂದೆ. ಕಸ್ತೂರ್ಬಾ ಆಸ್ಪತ್ರೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರ ವಿಭಾಗಕ್ಕೆ ಸುಧೀರ್ಘ ಸೇವೆಯು ಮತ್ತು ಅವರು ವಿಭಾಗಕ್ಕೆ ನೀಡಿದ ಕೊಡುಗೆ ಮರೆಯಲಾಗದು. ಅವರ ಜ್ಞಾನವು ಈಗ ದೇಶ ಮತ್ತು ವಿದೇಶಗಳ […]