ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ: 44 ಮಂದಿ ಮೃತ್ಯು, 200ಕ್ಕೂ ಅಧಿಕ ಮಂದಿಗೆ ಗಾಯ
ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ ಸಮೀಪವಿರುವ ಖಾರ್ ಪಟ್ಟಣದಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ 44 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ ರಾಜಕೀಯ ಪಕ್ಷದ ಕಾರ್ಯಕ್ರಮ ನಡೆಯುತ್ತಿದ್ದು, ಟೆಂಟ್ ಒಳಗಡೆ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಈ ದಾಳಿಯಲ್ಲಿ ಸ್ಥಳೀಯ ಜೆಯುಎಲ್-ಎಫ್ ನಾಯಕ ಮೃತಪಟ್ಟಿದ್ದಾರೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆ ದಿನ: ದಾಖಲೆಯ 6 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆ
ನವದೆಹಲಿ: ಹಣಕಾಸು ವರ್ಷ 2022-23ಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಜುಲೈ 31 ಕೊನೆ ದಿನವಾಗಿದ್ದು ಮತ್ತು ಗಡು ವಿಸ್ತರಣೆಯಾಗುವ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸುಳಿವು ನೀಡಲಾಗಿಲ್ಲ. ಆದಾಯ ತೆರಿಗೆ ಇಲಾಖೆಯ ಮಾಹಿತಿ ಪ್ರಕಾರ, ಇದುವರೆಗೆ 6 ಕೋಟಿಗೂ ಹೆಚ್ಚು ಐಟಿಆರ್ ದಾಖಲಾಗಿದೆ. ಭಾನುವಾರದಂದು ಸರಿ ಸುಮಾರು 27 ಲಕ್ಷ ಐಟಿಆರ್ ಗಳನ್ನು ಫೈಲ್ ಮಾಡಲಾಗಿದೆ. ಐಟಿಆರ್ ಫೈಲಿಂಗ್, ತೆರಿಗೆ ಪಾವತಿಗಳು ಮತ್ತು ಸಂಬಂಧಿತ ಸೇವೆಗಳಲ್ಲಿ ತೆರಿಗೆದಾರರಿಗೆ ಸಹಾಯ ಮಾಡಲು ಅದರ ಹೆಲ್ಪ್‌ಡೆಸ್ಕ್ 24×7 […]
ದೊಡ್ಡಣ್ಣಗುಡ್ಡೆ: ಅಗಸ್ಟ್ 1 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶ್ರೀ ಲಲಿತ ಸಹಸ್ರ ಕದಳಿಯಾಗ
ದೊಡ್ಡಣ್ಣಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 1 ರಂದು ಹುಣ್ಣಿಮೆಯ ಪರ್ವಕಾಲದಲ್ಲಿ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಅತಿ ವಿಶೇಷವಾದ ಶ್ರೀ ಲಲಿತಾ ಸಹಸ್ರ ಕದಳಿಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಭಕ್ತರೋರ್ವರ ಪ್ರಯುಕ್ತ ಪ್ರಾಯಶ್ಚಿತ ರೂಪದಲ್ಲಿ ನೆರವೇರಲಿದೆ. ಬಹು ಅಪರೂಪವಾದ ಅತಿ ವಿಶಿಷ್ಟ ಫಲಪ್ರದವೆನಿಸಿದ ಈ ಯಾಗವು ಬೆಳಿಗ್ಗೆ 9:00ಕ್ಕೆ ಆರಂಭಗೊಳ್ಳಲಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಾಳೆಹಣ್ಣನ್ನು […]
ಬೆಲೆ ಏರಿಕೆ ಬಿಸಿ: ಲಡ್ಡು ತಯಾರಿಸಲು ನಂದಿನಿ ತುಪ್ಪಕ್ಕೆ ವಿದಾಯ ಹೇಳಿದ ತಿರುಪತಿ ತಿಮ್ಮಪ್ಪ ದೇವಸ್ಥಾನ
ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಡೆಸುತ್ತಿರುವ ನಂದಿನಿ ಡೈರಿಯ ತುಪ್ಪವನ್ನು ಬಳಸಿ ತಿರುಪತಿ ದೇವಸ್ಥಾನದಲ್ಲಿ ತಿರುಪತಿ ಲಡ್ಡುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದ್ದಾರೆ. ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮತ್ತೊಂದು ಕಂಪನಿಗೆ ತುಪ್ಪದ ಗುತ್ತಿಗೆ ನೀಡಿದೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ್, ಆಗಸ್ಟ್ 1 ರಿಂದ ಹಾಲಿನ ದರ ಏರಿಕೆ ಮಾಡುವುದಾಗಿ ಘೋಷಿಸಿದ್ದರಿಂದ ತುಪ್ಪದ ಬೆಲೆಯೂ ಏರಿಕೆಯಾಗಲಿದೆ. ತಿರುಪತಿ ಲಡ್ಡುಗಳನ್ನು ಕಡಿಮೆ ಬೆಲೆಗೆ […]
ಮಂಗಳೂರು ವಿ.ವಿ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಭೈರಪ್ಪ ನಿಧನ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಭೈರಪ್ಪ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಹೃದಯಾಘಾತವಾಗಿದೆ. ಪ್ರೊ.ಕೆ.ಬೈರಪ್ಪ ಅವರು 2014 ರಿಂದ 2019 ರವರೆಗೆ ಐದು ವರ್ಷ ಕಾಲಾವಧಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಟನೇ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಅವರು ಆದಿಚುಂಚಗಿರಿ ವಿವಿಯಲ್ಲಿ ಸಹ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.