ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ ‘ಎಲ್​ಜಿಎಂ’:ಧೋನಿ ಅಭಿಮಾನಿಗಳಿಗೆ ನಿರಾಸೆ

ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ನಿರ್ಮಾಣದ ಮೊದಲ ಚಿತ್ರ ‘ಲೆಟ್ಸ್ ಗೆಟ್​ ಮ್ಯಾರೀಡ್’ (ಎಲ್‌ಜಿಎಂ) ಜುಲೈ 28 ರಂದು ತೆರೆ ಕಂಡಿದೆ. ‘ಎಲ್​​ಜಿಎಂ’ ತಮಿಳು ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೈದಾನದಲ್ಲಿ ಬ್ಯಾಟ್​ ಹಿಡಿದು ಫೋರ್​, ಸಿಕ್ಸ್​ ಬಾರಿಸುತ್ತಿದ್ದ ನಾಯಕ ಎಂಎಸ್​ ಧೋನಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ ‘ಎಲ್​ಜಿಎಂ’: ಎಲ್‌ಜಿಎಂ ಸಿನಿಮಾಗೆ ಸಂಬಂಧಿಸಿದಂತೆ ಟೀಸರ್​, ಟ್ರೇಲರ್​ […]

ಆರ್​ಆರ್​ಆರ್ ಸ್ಟಾರ್ ರಾಮ್ ​​ಚರಣ್​ ಅವರಿಂದ ಸೈಫ್​ ಅಲಿ ಖಾನ್​ ಅವರಲ್ಲಿ ರಾಜಮನೆತನದ ವರ್ಚಸ್ಸಿದೆ ಎಂದು ಗುಣಗಾನ

ಸಾಮಾನ್ಯವಾಗಿ ದೇಶಾದ್ಯಂತದ ಸೂಪರ್​ ಸ್ಟಾರ್​ಗಳ ಪೈಕಿ ಯಾರ ಫ್ಯಾಷನ್ ಸೆನ್ಸ್ ಇಷ್ಟ ಎಂದು ಯಾರಾದರೂ ಕೇಳಿದರೆ ಸಹಜವಾಗಿ ರಣ್​​​ವೀರ್ ಸಿಂಗ್, ಶಾರುಖ್ ಖಾನ್, ಹೃತಿಕ್ ರೋಷನ್ ಕೇಳಿದಂತೆ ಇನ್ನೂ ಕೆಲವರ ಹೆಸರು ಬರುತ್ತವೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಹೀರೋಗಳು ಸಹ ಈ ನಟರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಈ ಹಿಂದೆ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡ ಬಾಲಿವುಡ್​ ಸೂಪರ್​ ಸ್ಟಾರ್ ಹೃತಿಕ್ ರೋಷನ್ ಅವರ ನಟನೆ ಮತ್ತು ಡ್ರೆಸ್ಸಿಂಗ್​​ ಸೆನ್ಸ್ ಅನ್ನು ಇಷ್ಟಪಡುವುದಾಗಿ ತಿಳಿಸಿದ್ದರು. ಆರ್​ಆರ್​ಆರ್​ ಮೂಲಕ […]

ಆರಂಭಿಕರ ಎಲೈಟ್ ಪಟ್ಟಿಯಲ್ಲಿ ಕಿಶನ್ ನಂ.1: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಇಶಾನ್​​​.

ಬಾರ್ಬಡೋಸ್ (ವೆಸ್ಟ್​​ ಇಂಡೀಸ್​​):ಸದ್ಯ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಶನ್​ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಕಿಶನ್​ ಸಚಿನ್​ ದಾಖಲೆಯನ್ನು ಮುರಿದರು. ಭಾರತ ಕ್ರಿಕೆಟ್​ ತಂಡದ ಫ್ಯೂಚರ್​ ಸ್ಟಾರ್​ ಆಟಗಾರರ ಪಟ್ಟಿಯಲ್ಲಿ ಇಶಾನ್​ ಕಿಶನ್ ಸಹ ಒಬ್ಬರು.ಕ್ರಿಕೆಟ್​ ದೇವರು ಎಂದೇ ಕರೆಸಿಕೊಳ್ಳುವ ಸಚಿನ್​ ತೆಂಡೂಲ್ಕರ್​ ಅವರು ಮಾಡಿದ್ದ ದಾಖಲೆಯನ್ನು ಯುವ ಆಟಗಾರ […]

ಭಾರತೀಯ ಸೇನೆಯಿಂದ ತೆಂಗಾ ಕಣಿವೆಯಲ್ಲಿ ‘ಅಮೃತ ಸರೋವರ’ ಉದ್ಘಾಟನೆ

ಪಶ್ಚಿಮ ಕಮೆಂಗ್ (ಅರುಣಾಚಲ ಪ್ರದೇಶ): ಮಿಷನ್ ಅಮೃತ ಸರೋವರ ಕೇಂದ್ರ ಸರ್ಕಾರದ ಉಪಕ್ರಮ.ಇದರ ಭಾಗವಾಗಿ ಭಾರತೀಯ ಸೇನೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಅರುಣಾಚಲ ಪ್ರದೇಶದ ತೆಂಗಾ ಕಣಿವೆಯಲ್ಲಿರುವ ಅಮೃತ ಸರೋವರವನ್ನು ಲೋಕಾರ್ಪಣೆ ಮಾಡಿದೆ.ಭಾರತೀಯ ಸೇನೆ ಅರುಣಾಚಲದ ತೆಂಗಾ ಕಣಿವೆಯಲ್ಲಿ ಅಮೃತ ಸರೋವರವನ್ನು ಉದ್ಘಾಟಿಸಿದೆ. ಇದು ಮಳೆನೀರು ಕೊಯ್ಲು ಯೋಜನೆಗೆ ಒತ್ತು ನೀಡುತ್ತದೆ. ಯೋಜನೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮುದಾಯ ಸಬಲೀಕರಣದ ಜತೆಗೆ ಮಳೆನೀರು ಕೊಯ್ಲು ಮಾಡುವ ಗುರಿಯನ್ನು ಹೊಂದಿದೆ. ಸ್ಥಳೀಯ ಆಡಳಿತದ ಬೆಂಬಲದೊಂದಿಗೆ ಸೇನೆಯು ನಿರ್ಮಿಸಿದ […]

ವಿಜ್ಞಾನಿಗಳ ಮಹತ್ತರ ಸಾಧನೆ : ಭೂಮಿಗೆ ಯಶಸ್ವಿಯಾಗಿ ಮರಳಿದ ನಿಷ್ಕ್ರಿಯ ಉಪಗ್ರಹ ‘ಏಯೋಲಸ್​’

ಪ್ಯಾರಿಸ್ : ಇಎಸ್‌ಎಯ ವಿಂಡ್ ಮಿಷನ್ ಎಂದೂ ಕರೆಯಲ್ಪಡುವ ಏಯೋಲಸ್ ಬಾಹ್ಯಾಕಾಶ ನೌಕೆಯ ಇಂಧನ ಖಾಲಿಯಾದ ನಂತರ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಲು ಇಎಸ್‌ಎಯಲ್ಲಿನ ಮಿಷನ್ ಅಧಿಕಾರಿಗಳ ತಂಡ ಮಾರ್ಗದರ್ಶನ ನೀಡಿತು. ಉಪಗ್ರಹ ಜುಲೈ 28 ರಂದು ಅಂಟಾರ್ಟಿಕಾದಲ್ಲಿ ಇಳಿದಿದೆ. ಏಯೋಲಸ್ ಜುಲೈ 28 ರಂದು ಅಂಟಾರ್ಟಿಕಾದ ಮೇಲೆ ಸುಮಾರು 21:00 CEST (12:30am IST) ಸಮಯದಲ್ಲಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದೆ ಎಂದು ಯುಎಸ್​ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ ಎಂದು ESA Aeolus ಮಿಷನ್ ಟ್ವಿಟ್ಟರ್​ನಲ್ಲಿ ತಿಳಿಸಲಾಗಿದೆ..ಬಾಹ್ಯಾಕಾಶದಲ್ಲಿ […]