ಭಾರತೀಯ ವನಿತೆಯರ ತಂಡವು ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನ ಪ್ರಶಸ್ತಿ ಗೆದ್ದು ಆಗ್ರಸ್ಥಾನ

ಬಾರ್ಸಿಲೋನಾ (ಸ್ಪೇನ್): ಭಾನುವಾರ ಇಲ್ಲಿ ನಡೆದ ಮೂರು ರಾಷ್ಟ್ರಗಳ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿತು.100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ.ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಟೇಬಲ್ ಟಾಪರ್‌ ಆದ ಭಾರತವು ಬಲವಾದ ಆರಂಭವನ್ನು ಪಡೆಯಿತು. ನಿಖರವಾದ ಪಾಸ್‌ಗಳೊಂದಿಗೆ ಶಿಸ್ತುಬದ್ಧ […]

ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಭಾರತದ 486 ಅತ್ಯಮೂಲ್ಯ ಪುರಾತನ ವಸ್ತುಗಳು ಕಳವು

ನವದೆಹಲಿ: ಕಳುವಾದ ಪುರಾತನ ವಸ್ತುಗಳನ್ನು ಮರಳಿ ದೇಶಕ್ಕೆ ತರುವ ಪ್ರಯತ್ನದ ನಡುವೆ ಇನ್ನೂ 486 ಐತಿಹಾಸಿಕ ವಸ್ತುಗಳು ಮಾಯವಾಗಿವೆ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಅದರಲ್ಲೂ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಪುರಾತನ ವಸ್ತುಗಳು ಕಾಣೆಯಾಗಿವೆ ಎಂದು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀಡಿದ ಅಂಕಿಅಂಶದಲ್ಲಿ ಗೊತ್ತಾಗಿದೆ.ಭಾರತ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರ. ದೇಶದ ಐತಿಹ್ಯವನ್ನು ಹೇಳುವ ಅತ್ಯಮೂಲ್ಯ ಪುರಾತನ ವಸ್ತುಗಳು ಕಳ್ಳತನವಾಗಿದ್ದು, ಅವುಗಳನ್ನು ಮರಳಿ ಪಡೆಯವ ಪ್ರಕ್ರಿಯೆ ನಡೆಯುತ್ತಿದೆ. ಆದಾಗ್ಯೂ, ಇನ್ನೂ 486 ಅತ್ಯಮೂಲ್ಯ […]

ಉಕ್ರೇನ್: ಮಾಸ್ಕೋ ರಷ್ಯಾದ ರಾಜಧಾನಿ ಮೇಲೆ ಡ್ರೋನ್ ದಾಳಿ

ಮಾಸ್ಕೋ (ರಷ್ಯಾ):  ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್‌ ದಾಳಿ ನಡೆಸಿದ್ದು 2 ಕಟ್ಟಡಗಳಿಗೆ ಹಾನಿಯುಂಟಾಗಿದೆ.ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು ನಗರದಲ್ಲಿ ಉಕ್ರೇನಿಯನ್ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಹೇಳಿದ್ದಾರೆ.  ಉಕ್ರೇನಿಯನ್ ಡ್ರೋನ್ ದಾಳಿ ನಡೆದಿದೆ. ಮಾಸ್ಕೋ ನಗರದಲ್ಲಿ ಎರಡು ಕಚೇರಿ ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ. ಯಾವುದೇ ಸಾವು-ನೋವು ವರದಿಯಾಗಿಲ್ಲ” ಎಂದು ಅವರು ತಮ್ಮ ಟೆಲಿಗ್ರಾಮ್ ಖಾತೆಯಲ್ಲಿ […]

ಇದು ದೊಡ್ಡ ಪರಿವರ್ತನೆ ಹಾದಿ :ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ ಮೋದಿ ಮೆಚ್ಚುಗೆ

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ತಮ್ಮ ಮನ್​​ ಕಿ ಬಾತ್ ಕಾರ್ಯಕ್ರಮದ 103ನೇ ಮಾಸಿಕ ರೇಡಿಯೋ ಭಾಷಣವನ್ನು ಮಾಡಿದರು ಇಂದು […]

ಬೆಂಗಳೂರಿಗರ ನೆಚ್ಚಿನ ಕಬ್ಬನ್ ಪಾರ್ಕ್ನಲ್ಲಿ ಈಗ ಸೃಜನಾತ್ಮಕ ಚಟುವಟಿಕೆಗಳು

  ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಜನಪ್ರಿಯ ಉದ್ಯಾನವನ ಕಬ್ಬನ್ ಪಾರ್ಕ್​ನಲ್ಲಿ 2022ರ ಡಿಸೆಂಬರ್​ನಲ್ಲಿ ಪ್ರಾರಂಭವಾದ ಕಬ್ಬನ್ ರೀಡ್ಸ್ ಪ್ರತಿ ಶನಿವಾರ ಅನೇಕ ಓದುಗ ಉತ್ಸಾಹಿಗಳ ನೆಚ್ಚಿನ ನೆಲೆಯಾಗಿ ಮಾರ್ಪಾಡಾಗಿದೆ. ಹೊಸ ವಿಸ್ತರಣೆಯ ಕುರಿತು ಮಾತನಾಡಿರುವ ಕಬ್ಬನ್ ರೀಡ್ಸ್ ಸಹ-ಸಂಸ್ಥಾಪಕಿ ಶ್ರುತಿ ಸಾಹ್, “ಕಲಾವಿದರು, ಬರಹಗಾರರು ಮತ್ತು ಧ್ಯಾನಾಸಕ್ತರು ಹೆಚ್ಚು ಇಷ್ಟಪಡುವ ರೀತಿಯಲ್ಲಿ ಅಭಿಯಾನ ಮುನ್ನಡೆಸುತ್ತಿದ್ದೇವೆ. ಪಾರ್ಕ್​ನಲ್ಲಿ ಪ್ರತಿ ಶನಿವಾರ ಸುಮಾರು 600ರಿಂದ 700 ಜನರು ಸೇರುತ್ತಾರೆ” ಎಂದು ಹೇಳಿದರು.ಇದೀಗ ಕಬ್ಬನ್ ರೈಟ್ಸ್, ಕಬ್ಬನ್ ಪೇಂಟ್ಸ್ ಮತ್ತು […]