ಪಡುಬಿದ್ರೆ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಪಡುಬಿದ್ರೆ: ಬಿಸ್ಕೆಟ್ ಕೊಡುವ ನೆಪದಲ್ಲಿ ಐದು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮುಫಿಜುಲ್ ಶೇಖ್ (26) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಮುಫಿಜುಲ್ ಕೆಲಸ ಮಾಡುತ್ತಿದ್ದ. ಸಂತ್ರಸ್ತ ಬಾಲಕಿಯ ಪೋಷಕರು ಕೂಡ ಇದೇ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಇವರು ಕೂಡ ಮುರ್ಷಿದಾಬಾದ್ ಮೂಲದವರಾಗಿದ್ದಾರೆ. ಜುಲೈ 26 ರಂದು ಮಧ್ಯಾಹ್ನ, ಮುಫಿಜುಲ್ ಬಿಸ್ಕತ್ತು ಕೊಡುವುದಾಗಿ ಬಾಲಕಿಯ ಪೋಷಕರಿಗೆ ಹೇಳಿ […]

ಮಂಗಳೂರು: ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ವಿಶೇಷ ಶಿಕ್ಷಕರ ನೇರ ಗುತ್ತಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ

ಮಂಗಳೂರು: ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿ ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಖಾಲಿ ಇರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹಾಗೂ 1 ಬಿ.ಐ.ಇ.ಆರ್.ಟಿ. (ಮಾಧ್ಯಮಿಕ ಮತ್ತು ಪ್ರೌಢ) ಹುದ್ದೆಗೆ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹುದ್ದೆಗಳು: ಬಂಟ್ವಾಳ -2, ಬೆಳ್ತಂಗಡಿ– 2, ಮಂಗಳೂರು ಉತ್ತರ-2, ಮಂಗಳೂರು ದಕ್ಷಿಣ-2, ಮೂಡಬಿದ್ರೆ – 2, ಪುತ್ತೂರು – 2 ಮತ್ತು ಸುಳ್ಯ -2 ಹಾಗೂ 1 ಬಿ.ಐ.ಇ.ಆರ್.ಟಿ. (ಮಾಧ್ಯಮಿಕ […]

ಎಂಐಟಿಯ ಪ್ರಾಧ್ಯಾಪಕರಾದ ಡಾ. ನರೇಂದ್ರ ಖಾತ್ರಿ ಮತ್ತು ಡಾ. ನೀರಜ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಮಣಿಪಾಲ: ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನರೇಂದ್ರ ಖಾತ್ರಿ ಮತ್ತು ಡಾ. ನೀರಜ್ ಎರಡು ಗೌರವಾನ್ವಿತ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಅಸಾಧಾರಣ ಸಂಶೋಧನಾ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ ಹಾಗೂ ಸಂಸ್ಥೆಗೆ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ ಮತ್ತು ಅತ್ಯಾಧುನಿಕ ಸಂಶೋಧನೆಯಲ್ಲಿ ಅದರ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ದುಬೈನ ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಂಪ್ಯೂಟೇಶನಲ್ ಇಂಟೆಲಿಜೆನ್ಸ್ ಮತ್ತು ನಾಲೆಡ್ಜ್ ಎಕಾನಮಿ (ICCIKE2023) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ನರೇಂದ್ರ ಖಾತ್ರಿ ಅವರಿಗೆ ಅತ್ಯುತ್ತಮ ಪೇಪರ್ ಪೆಸೆಂಟೇಷನ್ ಗಾಗಿ […]

ಗೃಹಲಕ್ಷ್ಮಿ ಯೋಜನೆಗಾಗಿ ನೋಂದಣಿ ಕೇಂದ್ರಗಳ ಸ್ಥಾಪನೆ

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಉಡುಪಿ ನಗರಸಭಾ ಕಚೇರಿ ಹಾಗೂ ನಗರಸಭೆಯ ಮಲ್ಪೆ, ಪುತ್ತೂರು, ಮಣಿಪಾಲ ಮತ್ತು ಹೆರ್ಗಾ ಉಪಕಚೇರಿಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹರಿರುವ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಮಹಿಳಾ ಫಲಾನುಭವಿಗಳು ಸದರಿ ಕೇಂದ್ರಗಳಲ್ಲಿ ನೋಂದಾಯಿಸಿ, ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕಲ್ಮಾಡಿ: ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳ ಆಯ್ಕೆ

ಕಲ್ಮಾಡಿ: ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಾಧು ಸಾಲ್ಯಾನ್ ಪುನರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಸಾನಿಕ, ಪ್ರೇಮ್ ನಾಥ್ ಕಲ್ಮಾಡಿ, ಉಪಾಧ್ಯಕ್ಷರಾಗಿ ದಯಾಕರ್.ವಿ. ಸುವರ್ಣ, ಶೇಖರ್ ಎನ್.ಕೋಟ್ಯಾನ್,ಸುಂದರ್ ಜೆ.ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು, ಜತೆ ಕಾರ್ಯದರ್ಶಿಯಾಗಿ ರೋಹಿತ್ ಸುವರ್ಣ, ಕೋಶಾಧಿಕಾರಿಯಾಗಿ ಸುಧಾಕರ್ ವಿ. ಸುವರ್ಣ, ಜತೆ ಕೋಶಾಧಿಕಾರಿಯಾಗಿ ಸಂದೀಪ್ ಸಾಲ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಕಲ್ಮಾಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನಿಲ್ […]