ಕ್ಯಾಪ್ಟನ್ ಮಿಲ್ಲರ್’ ಟೀಸರ್ ಧನುಷ್ ಜನ್ಮದಿನಕ್ಕೆ ‘ ಗಿಫ್ಟ್

ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಧನುಷ್  ಜನ್ಮದಿನದ ಸಂಭ್ರಮದಲ್ಲಿದ್ದಾರೆ. 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್‌ ಸ್ಟಾರ್ಗೆ ಕುಟುಂಬ ಸದಸ್ಯರು, ಆಪ್ತರು, ಸಿನಿಮಾ ಇಂಡಸ್ಟ್ರಿಯ ಸ್ನೇಹಿತರೂ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಜನ್ಮದಿನ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ‘ಕ್ಯಾಪ್ಟನ್ ಮಿಲ್ಲರ್ ಟೀಸರ್’ ಬಿಡುಗಡೆ: ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಮತ್ತು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವ […]

PU Exam: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ವೇಳಾಪಟ್ಟಿ ಪ್ರಕಟ; ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ

PU Exam: ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಕೊಡುವ ನಿಟ್ಟಿನಲ್ಲಿ  ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ವೇಳಾಪಟ್ಟಿ ಪ್ರಕಟ; ಬೆಂಗಳೂರು:ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ […]

ಉಡುಪಿ ಪ್ರಕರಣ ಗಂಭೀರ ಸ್ವರೂಪದ ಆರೋಪ; ಸಮಗ್ರ ತನಿಖೆಗೆ ಶಿರಿಯಾರ ಪ್ರಭಾಕರ್ ನಾಯಕ್ ಆಗ್ರಹ 

ಉಡುಪಿ: ಉಡುಪಿ ಪ್ರಕರಣ ಗಂಭೀರ ಸ್ವರೂಪದ ಆರೋಪವಾಗಿದ್ದು, ಪೊಲೀಸರು ಕಾಟಾಚಾರಕ್ಕೆ ಎಫ್. ಐ.ಆರ್   ಸಲ್ಲಿಸಿ ಆರೋಪಿಗಳನ್ನು ಪರೋಕ್ಷವಾಗಿ ರಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಈ ಕೃತ್ಯದ ಹಿಂದೆ ಸಾಮಾಜಿಕ ಶಾಂತಿ ಕದಡಿಸುವ ಹಲವಾರು ಸಂಘ ಮತ್ತು ಸಂಘಟನೆಗಳು ಇದ್ದು, ಇದರ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ, ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯ ನ್ಯಾಯವಾದಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ಪತ್ರಿಕಾ […]

ದೈವಂ ಶರಣಂ ಗಚ್ಛಾಮಿ ಕಿರು ಚಿತ್ರದ ಅಫೀಷಿಯಲ್ ವೀಡಿಯೋ ಬಿಡುಗಡೆ

ಭರ್ಗ ಸಿನಿಮಾಸ್ ಪ್ರಸ್ತುತ ಪಡಿಸುವ ದೈವಂ ಶರಣಂ ಗಚ್ಛಾಮಿ ಕಿರು ಚಿತ್ರದ ಅಫೀಷಿಯಲ್ ವೀಡಿಯೋ ಇಂದು ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಜಯ್ ಮಂಜುನಾಥ್ ನಿರ್ದೇಶನ, ಸಹ ನಿರ್ದೇಶಕರಾಗಿ ರಾಜ್ ಕನಕ, ಡಿಒಪಿ ಮತ್ತು ಸಂಕಲನ ಸುಮಂತ್ ಆಚಾರ್ಯ, ಲೋಕಿ ತವಸ್ಯ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರತೀಕ್ ಶೆಟ್ಟಿ, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಪ್ರತಿಮಾ ನಾಯಕ್, ಚೈತ್ರ, ಹರೀಶ್ ಭಟ್, ಗಣೇಶ್ ಶಶಾಂಕ್ ಮುಂತಾದವರಿದ್ದಾರೆ. ತುಳುನಾಡಿನ ದೈವಕ್ಕೆ ಸಂಬಂಧಪಟ್ಟ ಕಥಾ ಹಂದರವನ್ನು ಚಿತ್ರವು […]

ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ವರ್ಕ್-ಲೈಫ್ ಬ್ಯಾಲೆನ್ಸಿಂಗ್ ಕಾರ್ಯಾಗಾರ

ಮಂಗಳೂರು: ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ‘ರಚನಾ’ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ‘ಮೈಂಡ್ ಮ್ಯಾಪಿಂಗ್ ಮತ್ತು ವರ್ಕ್-ಲೈಫ್ ಬ್ಯಾಲೆನ್ಸಿಂಗ್’ ಕುರಿತು ಕಾರ್ಯಾಗಾರ ನಡೆಯಿತು ಕಾರ್ಯಕ್ರಮದ ಗೌರವ ಭಾಷಣಕಾರರಾಗಿ ಖ್ಯಾತ ವಾಗ್ಮಿ ಡಾ. ಸರ್ಫರಾಜ್‌ ಜೆ.ಹಸೀನ್ ಆಗಮಿಸಿ ಮಾತನಾಡಿ,ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಮತ್ತು ನಿರ್ಧರಿಸಲು ನೀವೇ ಉತ್ತಮ ವ್ಯಕ್ತಿ, ನೀವು ಧನಾತ್ಮಕವಾಗಿ ಯೋಚಿಸಿದರೆ, ನಿಮ್ಮ ಉಪಪ್ರಜ್ಞೆಯು ಸಕಾರಾತ್ಮಕ ಆಲೋಚನೆಗಳನ್ನು ರೂಪಿಸುತ್ತದೆ, ನೀವು ನಕಾರಾತ್ಮಕವಾಗಿ ಯೋಚಿಸಿದರೆ, ಅದೇ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು […]