ಧಾರವಾಡದಲ್ಲಿ ನಿರಂತರ ಭೀಕರ ಮಳೆ ಹಿನ್ನೆಲೆ 198 ಮನೆಗಳಿಗೆ ಹಾನಿ
ಧಾರವಾಡ: ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸದ್ಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಲವೆಡೆ ಮಳೆಯಿಂದಾಗಿ ಅಪಾರ ಆಸ್ತಿಪಾಸ್ತಿ ಹಾನಿ, ಸಾವು-ನೋವು ಸಂಭವಿಸಿದೆ.ಧಾರವಾಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ 8 ತಾಲೂಕುಗಳಲ್ಲಿ 198 ಮನೆಗಳಿಗೆ ಹಾನಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ 87 ಮನೆಗಳು, ಅಳ್ನಾವರ ತಾಲೂಕಿನಲ್ಲಿ 4, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 11, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 7, ಕಲಘಟಗಿ ತಾಲೂಕಿನಲ್ಲಿ 45, […]
ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ: ಪೈರಸಿ 3 ವರ್ಷ ಜೈಲು ಶಿಕ್ಷೆ, ಸಿನಿಮಾ ನಿರ್ಮಾಣದ ಶೇ 4ರಷ್ಟು ದಂಡ
ನವದೆಹಲಿ : ಪೈರಸಿಗೆ 3 ವರ್ಷ ಜೈಲು: ಸಿನಿಮಾಟೋಗ್ರಾಫ್ ತಿದ್ದುಪಡಿ ವಿಧೇಯಕ 2023ರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜು ಜನತಾದಳದ ನಾಯಕ ಪ್ರಶಾಂತ್ ನಂದಾ, “ಕಳೆದ ಐವತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಮಗೆ ಬಾಂಧವ್ಯವಿದೆ. ಅವರು ಚಲನಚಿತ್ರಗಳನ್ನು ನಿರ್ಮಿಸುವ ಜೊತೆಗೆ ಪೈರಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಹಿಂದಿ ಚಿತ್ರ ಬಿಡುಗಡೆಯಾದ ಮರುದಿನವೇ ಪೈರಸಿಯಿಂದಾಗಿ ದುಬೈನಲ್ಲಿ ಪ್ರದರ್ಶನ ಆರಂಭವಾಗುತ್ತದೆ. ಈ ಮಸೂದೆಯಡಿ ನಕಲು ಮಾಡಿರುವ ಆರೋಪ ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡಾ […]
ಫಿಲಿಪ್ಪೀನ್ಸ್ನಲ್ಲಿ ದೋಣಿ ಮುಳುಗಡೆ ಹಿನ್ನೆಲೆ 30 ಮಂದಿ ಸಾವು, 40 ಪ್ರಯಾಣಿಕರ ರಕ್ಷಣೆ
ಮನಿಲಾ (ಫಿಲಿಪ್ಪೀನ್ಸ್): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್ ರಾಜಧಾನಿ ಸಮೀಪದ ಸರೋವರದಲ್ಲಿ ಗುರುವಾರ ನಡೆದಿದೆ.ಘಟನೆಯಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ ಫಿಲಿಪ್ಪೀನ್ಸ್ ದೇಶದ ರಾಜಧಾನಿಯ ಸಮೀಪದ ಸರೋವರದಲ್ಲಿ ದೋಣಿ ಮಗುಚಿ ಅಪಾರ ಸಾವುನೋವು ಸಂಭವಿಸಿದೆ. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ಯಾಂತ್ರೀಕೃತ ದೋಣಿ ಒಂದು ಕಡೆಗೆ ವಾಲಿತ್ತು. ಇದರಿಂದ ಭಯಭೀತರಾದ ಪ್ರಯಾಣಿಕರು ದೋಣಿಯ ಒಂದೇ ಕಡೆ […]
ಶಿವಪುರದಲ್ಲಿ ನೇಣು ಬಿಗಿದುಕೊಂಡು ವಿವಾಹಿತ ಆತ್ಮಹತ್ಯೆ
ಹೆಬ್ರಿ: ಜೀವನದಲ್ಲಿ ಮನನೊಂದ ವಿವಾಹಿತನೋರ್ವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಹಾಡಿಯಲ್ಲಿ ನಡೆದಿದೆ. ಹೆಬ್ರಿ ಶಿವಪುರ ನಿವಾಸಿ ರಂಗನಾಥ್ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಹಿರಿಯಡ್ಕ ಸೌಹಾರ್ದ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮನನೊಂದಿದ್ದು, ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇದೇ ವಿಚಾರದಲ್ಲಿ ಮನನೊಂದು ಶಿವಪುರ ಗ್ರಾಮದ ಮೇಲ್ಮುಕ್ಕಾಣಿ ಹಾಡಿಯಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]
ಜ್ಯೂನಿಯರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜ್ಯೂನಿಯರ್ ಪ್ರೋಗ್ರಾಮರ್, ಡಾಟಾಬೇಸ್ ಆಡ್ಮಿನ್ ನೆಟ್ವರ್ಕ್ ಆಡ್ಮಿನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಈ ಹುದ್ದೆಗಳನ್ನು ಹೊರಗುತ್ತಿಗೆ ಅವಧಿ ಮೇರೆಗೆ ಆಯ್ಕೆ ಮಾಡಲಾಗುತ್ತಿದೆ.ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾರ್ಡ್ವೇರ್ ಟೆಕ್ನಿಷಿಯನ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ: ಜೂನಿಯರ್ ಪ್ರೋಗ್ರಾಮರ್-1, ಡಾಟಾ ಬೇಸ್ ಆಡ್ಮಿನ್-1, ನೆಟ್ವರ್ಕ್ ಆಡ್ಮಿನ್-1, ಹಾರ್ಡ್ವೇರ್ ಟೆಕ್ನಿಷಿಯನ್-1 ಸೇರಿದಂತೆ ಒಟ್ಟು 4 ಹುದ್ದೆಗಳು. ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್ ಅಥವಾ ಮಾಹಿತಿ ತಂತ್ರಜ್ಞಾನ, ಇ & […]