ಜು.27 ರಿಂದ ಸೆ.15 ರವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ

ಉಡುಪಿ: ಉಡುಪಿ ಹಾಗೂ ತೀರ್ಥಹಳ್ಳಿಯನ್ನು ಸಂಪರ್ಕಿಸುವ ಆಗುಂಬೆ ಘಾಟಿಯು ಬಿರುಕು ಬಿಟ್ಟಿದ್ದು, ರಸ್ತೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಜು.27 ರಿಂದ ಸೆ.15 ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟಿಯ 6,7 ಹಾಗೂ 11ನೇ ತಿರುವಿನಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡುಬಂದಿದೆ. ರಸ್ತೆ ಮತ್ತಷ್ಟು ಕುಸಿದು ಅಪಘಾತವಾಗುವ ಸಂಭವವಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಜು.27ರಿಂದ ಸೆಪ್ಟಂಬರ್ […]

ಯುವ ಜನತೆ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯಬೇಕು: ಪಂಡಿತ್ ಮಿಲಿಂದ್ ಚಿತ್ತಾಲ್

ಮಣಿಪಾಲ: ಶಾಸ್ತ್ರೀಯ ಸಂಗೀತದಲ್ಲಿ ಮನಸ್ಸನ್ನು ಶಮನಗೊಳಿಸುವ ಅಂಶಗಳಿವೆ. ಇಂದಿನ ಯುವ ಜನಾಂಗ ಈ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯುವ ಯತ್ನ ಮಾಡಬೇಕು ಎಂದು ಖ್ಯಾತ ಸಂಗೀತಗಾರ ಪಂಡಿತ್ ಮಿಲಿಂದ್ ಚಿತ್ತಾಲ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜೆಸಿಪಿಎಎಸ್), ಎಂಐಸಿ, ಎಂಐಟಿ ಯ ಆಶ್ರಯದಲ್ಲಿ ನಡೆದ ಹಿಂದೂಸ್ತಾನಿ ಗಾಯನದ ನಂತರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಆಧುನಿಕ ಸಮಾಜದಲ್ಲಿ ಸೇರಿಕೊಂಡಿರುವ ತೀವ್ರತರವಾದ ವೇಗ ಬದುಕಿನ ನೆಮ್ಮದಿಯನ್ನು ಕದಡುತ್ತದೆ. ಅಂತಹ ಸ್ಥಿತಿಯಲ್ಲಿ ಮುಖ್ಯವಾಗಿ […]

ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಬೈಂದೂರು: ಬೈಂದೂರು ತಾಲೂಕು ನಾವುಂದದಲ್ಲಿ ತೀವ್ರ ಮಳೆಯಿಂದ ನೆರೆ ಪೀಡಿತವಾಗಿರುವ ಪ್ರದೇಶ ಮತ್ತು ನಿರೋಡಿಯಲ್ಲಿ ಸೇತುವೆಗೆ ಹಾನಿಯಾದ ಪ್ರದೇಶ ಹಾಗೂ ಕುಂದಾಪುರದ ತೆಕ್ಕಟ್ಟೆಯಲ್ಲಿರುವ ಸೈಕ್ಲೋನ್ ಶೆಲ್ಟರ್‌ಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನೆರೆ ಬಾಧಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ನಾಳೆ (ಜು.28 )ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ‘ದೈವಂ ಶರಣಂ ಗಚ್ಛಾಮಿ’ ಅಫೀಷಿಯಲ್ ವೀಡಿಯೋ ಬಿಡುಗಡೆ

ಭರ್ಗ ಸಿನಿಮಾಸ್ ಪ್ರಸ್ತುತ ಪಡಿಸುವ ದೈವಂ ಶರಣಂ ಗಚ್ಛಾಮಿ ಚಿತ್ರದ ಅಫೀಷಿಯಲ್ ವೀಡಿಯೋ ನಾಳೆ (ಜು.28) ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಸಿನೆಮಾಗಳಾದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಚಮಕ್ ಮತ್ತು ಬಜಾರ್ ನಂತಹ ಸೂಪರ್ ಹಿಟ್ ನಿರ್ದೇಕ ಸಿಂಪಲ್ ಸುನಿ, ‘ದೈವಂ ಶರಣಂ ಗಚ್ಛಾಮಿ’ ಚಿತ್ರವನ್ನು ನೋಡಿ ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ವಿಜಯ್ ಮಂಜುನಾಥ್ ನಿರ್ದೇಶನ, ಸಹ ನಿರ್ದೇಶಕರಾಗಿ ರಾಜ್ ಕನಕ, ಡಿಒಪಿ ಮತ್ತು ಸಂಕಲನ ಸುಮಂತ್ ಆಚಾರ್ಯ, ಲೋಕಿ ತವಸ್ಯ […]

ಥಲಸೆಮಿಯಾದಿಂದ ಬಳಲುತ್ತಿರುವ ಪುಟಾಣಿ ಅದ್ರಿಕಾಳಿಗೆ ಬೇಕಾಗಿದೆ ದಾನಿಗಳ ನೆರವು

ಉಡುಪಿ: ಮೂರು ವರ್ಷದ ಪುಟಾಣಿ ಅದ್ರಿಕಾ ಟ್ರಾನ್ಸ್ ಫ್ಯೂಷನ್ ಡಿಪೆಂಡೆಂಟ್ ಥಲಸ್ಸೆಮಿಯಾ ಎಂಬ ರಕ್ತದ ಖಾಯಿಲೆಯಿಂದ ಬಳಲುತ್ತಿದ್ದು, ಈಕೆಗೆ ಜೀವನ ಪರ್ಯಂತ ರಕ್ತ ವರ್ಗಾವಣೆ ಮತ್ತು ಔಷಧಿಯ ಅವಶ್ಯಕತೆ ಇರುತ್ತದೆ. ಈ ಖಾಯಿಲೆಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮಾತ್ರ ಚಿಕಿತ್ಸೆಯಾಗಿದ್ದು ಇದಕ್ಕೆ 30 ಲಕ್ಷ ರೂ ಅಗತ್ಯವಿದೆ. ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಅದ್ರಿಕಾಗೆ ಪೂರ್ವ ಕಸಿ ಇಮ್ಯುನೊಸಪ್ರೆಸಿವ್ ಥೆರಪಿ ಮತ್ತು ನಂತರ ದಾನಿ ಪೋಷಕರೊಂದಿಗೆ ಅಸ್ಥಿ ಮಜ್ಜೆ ಕಸಿಯ ಅಗತ್ಯವಿದೆ. ಆಕೆಯ ತಂದೆ […]