ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್ ಲಾಲ್ ಅವರ ಜೊತೆಗೆ ಫೋಟೋ
ರಾಗಿಣಿ ದ್ವಿವೇದಿ ತಮ್ಮ ನೆಚ್ಚಿನ ನಾಯಕನ ನಟ ಮೋಹನ್ ಲಾಲ್ ಅವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಫೋಟೋಗಳನ್ನೆ ಈಗ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲದೇ ಸಿನಿಮಾ ತಂಡದ ಇತರ ಸದಸ್ಯರ ಜೊತೆಗೆ ರಾಗಿಣಿ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ರಾಗಿಣಿ ದ್ವಿವೇದಿ ತಮ್ಮ ಇಷ್ಟದ ಡೈರೆಕ್ಟರ್ ನಂದ್ ಕಿಶೋರ್ ಅವರ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನ ಕೂಡ ಇಲ್ಲಿ ಶೇರ್ ಮಾಡಿರೋದು ವಿಶೇಷ ಅನಿಸುತ್ತದೆ. ಈ ಮೂಲಕ ತಮ್ಮ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಚಿತ್ರಣವನ್ನ ರಿವೀಲ್ […]
ಸುರಿಂದರ್ ಶಿಂದಾ: ಜನಪ್ರಿಯ ಪಂಜಾಬಿ ಗಾಯಕ ಇನ್ನಿಲ್ಲ
60ರ ಹರೆಯದಲ್ಲಿ ಕೊನೆಯುಸಿರೆಳೆದ ಗಾಯಕ: ಸುರಿಂದರ್ ಶಿಂದಾ ಅವರು “ಪುಟ್ ಜತ್ತನ್ ದೇ”, “ಜತ್ ದಿಯೋನಾ ಮೋರ್ಹ್” ಮತ್ತು “ಟ್ರಕ್ ಬಲ್ಲಿಯಾ” ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಹಲವು ಸೂಪರ್ ಹಿಟ್ ಹಾಡುಗಳು ಇವರ ಕಂಠಸಿರಿಯಿಂದ ಮೂಡಿ ಬಂದಿದ್ದವು. ಆದ್ರೆ ಅನಾರೋಗ್ಯದ ಕಾರಣ 60ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬಸ್ಥರು ಸೇರಿದಂತೆ ಚಿತ್ರರಂಗದವರು ಜನಪ್ರಿಯ ಪಂಜಾಬಿ ಗಾಯಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಪಂಜಾಬಿ ಗಾಯಕ ಸುರಿಂದರ್ ಶಿಂದಾ ತಮ್ಮ 60ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ.ಲೂಧಿಯಾನ (ಪಂಜಾಬ್): […]
ಆರ್‌ಆರ್‌ಆರ್ ಸೀಕ್ವೆಲ್ ಕಥೆ ಆಫ್ರಿಕಾದಲ್ಲಿ ನಡೆಯಲಿದೆ – ಸ್ಕ್ರಿಪ್ಟ್ ಕೆಲಸ ಚುರುಕು
ವಿಶ್ವದಾದ್ಯಂತ ಸದ್ದು ಮಾಡಿ, ದೊಡ್ಡ ಮಟ್ಟಿನ ಯಶಸ್ಸಿಗೆ ಸಾಕ್ಷಿಯಾದ ಸಿನಿಮಾ. ಎಸ್‌ಎಸ್ ರಾಜಮೌಳಿ ನಿರ್ದೇಶನ ಅದ್ಭುತ ನಿರ್ದೇಶನ ಶೈಲಿ, ರಾಮ್ ಚರಣ್ – ಜೂ. ಎನ್ಟಿಆರ್ ಅಮೋಘ ಅಭಿನಯದ ಕಾಂಬಿನೇಶನ್ನಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ ‘ಆರ್‌ಆರ್‌ಆರ್’ ಭಾರತದ ಬ್ಲಾಕ್ಬಸ್ಟರ್ ಸಿನಿಮಾ. 2022ರಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಸೂಪರ್ ಹಿಟ್ ಚಿತ್ರ.ಆರ್‌ಆರ್‌ಆರ್ ಸೀಕ್ವೆಲ್ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ […]
ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ; ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
ಚಿಕ್ಕಮಗಳೂರು: ಇಲ್ಲಿನ ಮನಮೋಹಕ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲಿನ ರಸ್ತೆಗಳಲ್ಲಿ ಮಳೆಯಿಂದ ಗುಡ್ಡ ಕುಸಿಯುತ್ತಿರುವುದರಿಂದಾಗಿ ಸಂಚಾರಕ್ಕೆ ತೊಡಕಾಗುತ್ತಿದೆ. ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಡಳಿತವು ಮುಳ್ಳಯ್ಯನಗಿರಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ. ದತ್ತಪೀಠ ಮಾರ್ಗದಲ್ಲಿ ಮುಳ್ಳಯ್ಯನಗಿರಿಗೆ ತಿರುವು ತೆಗೆದುಕೊಳ್ಳುವ ಸ್ಥಳದಲ್ಲೇ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಪ್ರವಾಸಿಗರನ್ನು ತಡೆಯುತ್ತಿದ್ದಾರೆ. ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲೂ ಗುಡ್ಡ ಕುಸಿದು ಅರ್ಧದಷ್ಟು ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದ್ದು ಮಳೆ ಮುಂದುವರಿದಲ್ಲಿ ಪೀಠದ ಮಾರ್ಗವೂ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.
ಕಡಿಯಾಳಿ ವಲಯ ಬ್ರಾಹ್ಮಣ ಸಮಿತಿಯ 26 ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಉಡುಪಿ: ಕಡಿಯಾಳಿ ವಲಯ ಬ್ರಾಹ್ಮಣ ಸಮಿತಿಯ 26 ನೇ ವಾರ್ಷಿಕೋತ್ಸವವು ವಲಯದ ಅಧ್ಯಕ್ಷ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಹಾಗೂ ಕಾರ್ಯದರ್ಶಿ ಸಂದೀಪ್ ಮಂಜ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಹಿರಿಯ ವಿದ್ವಾಂಸ ಡಾ.ಬಿ.ಗೋಪಾಲಾಚಾರ್ಯ ಹಾಗೂ ವೇದವ್ಯಾಸ ಪುರಾಣಿಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಲಯದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಲಯದ […]