ಜುಲೈ 26 ರಂದು ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಬೋನ್ ಮಿನರಲ್ ಡೆನ್ಸಿಟಿ ಉಚಿತ ತಪಾಸಣಾ ಶಿಬಿರ
ಉಡುಪಿ : ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಆಸ್ಟಿಯೊಪೊರೋಸಿಸ್, ಅದರ ಬಗ್ಗೆ ಅರಿವಿನ ಕೊರತೆಯಿಂದಾಗಿ ಪತ್ತೆಯಾಗುವುದೇ ಇಲ್ಲ. ಇದು ಪ್ರಧಾನವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ಹೆಚ್ಚುವುದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಟಿ.ಎಂ.ಎ ಪೈ ಆಸ್ಪತ್ರೆಯ ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ರಾಜಾರಾಂ ಪೈ, ಆಸ್ಟಿಯೊಪೊರೋಸಿಸ್ ತೊಂದರೆಯನ್ನು ಪತ್ತೆಹಚ್ಚುವಲ್ಲಿ ಬೋನ್ ಮಿನರಲ್ ಡೆನ್ಸಿಟಿ (BMD) ಪರೀಕ್ಷೆಯ ಮಹತ್ವವನ್ನು ಒತ್ತಿಹೇಳುತ್ತಾರೆ. ದೇಹವು ಹೊಸ ಮೂಳೆಗಳನ್ನು ಸಮರ್ಪಕವಾಗಿ […]
ಶ್ರೀ ರಾಮಂಜನೇಯ ದೇವಸ್ಥಾನದಲ್ಲಿ ಚೂಡಿ ಪೂಜೆ
ಉಡುಪಿ: ಅಧಿಕ ಮಾಸದ ಅಂಗವಾಗಿ ಕಲ್ಯಾಣಪುರದ ಶ್ರೀ ರಾಮಂಜನೇಯ ದೇವಸ್ಥಾನದಲ್ಲಿ ಶ್ರೀಮತಿ ಭಾಗ್ಯ ಕಾಶಿನಾಥ ಭಟ್ ನೇತೃತ್ವದಲ್ಲಿ ಚೂಡಿ ಪೂಜೆ ಆದಿತ್ಯವಾರದಂದು ನಡೆಯಿತು. ಜಿ ಎಸ್ ಬಿ ಸಮಾಜದ ಮಹಿಳೆಯರು ಪರಿಸರದಲ್ಲಿ ದೊರೆಯುವ ವಿವಿಧ ಬಗೆಯ ಹೂಗಳಿಂದ ಚೂಡಿ ತಯಾರಿಸಿ ತುಳಸಿ ಸನ್ನಿಧಾನದಲ್ಲಿ ಇಟ್ಟು ಆರತಿ ಬೆಳಗಿಸಿ ಪೂಜಿಸಿದ ಬಳಿಕ ಹಿರಿಯ ಮುತ್ತೈದೆಯರಿಗೆ ನೀಡಿ ಆಶೀರ್ವಾದ ಪಡೆದು ಪರಸ್ಪರ ವಿನಿಮಯ ಮಾಡಿಕೊಂಡರು.
ಹೆಬ್ರಿ: ಹೊಳೆಗೆ ಬಿದ್ದು ಬಾಲಕಿ ಸಾವು
ಹೆಬ್ರಿ: ಜು. 23ರಂದು ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಬಡಬೈಲು ದರಕಾಸು ನಿವಾಸಿ ಕು. ರಚನಾ ಪ್ರಭಾಕರ ಶೆಟ್ಟಿ (ವಯಸ್ಸು 12 ವರ್ಷ) ಹರಿಯುತ್ತಿದ್ದ ಹೊಳೆಗೆ ಬಿದ್ದು ಮೃತಳಾಗಿದ್ದಾಳೆ. ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ನಿವಾಸಿ ಗೋಕುಲದಾಸ್ ಪ್ರಭು (53 ವರ್ಷ) ಇವರು ಜು. 24 ರಂದು ಬ್ರಹ್ಮಾವರ ತಾಲೂಕಿನ ಕರ್ಕುಂಜೆ ಗ್ರಾಮದ ನೀರಿನ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹಲವಾರು ಮನೆಗಳಿಗೆ ಹಾನಿಯಾಗಿರುವ ವರದಿಗಳಾಗಿವೆ.
ಟೀಮ್ ನೇಶನ್ ಫಸ್ಟ್ ವತಿಯಿಂದ ಚಿಣ್ಣರ ನಟ್ಟಿ ಕಾರ್ಯಕ್ರಮ: ಸಾಲು ಮರದ ತಿಮ್ಮಕ್ಕ ಭಾಗಿ
ಉಡುಪಿ: ಟೀಮ್ ನೇಶನ್ ಫಸ್ಟ್ (ರಿ.) ಉಡುಪಿ ವತಿಯಿಂದ ಉಡುಪಿ ವಿಠೋಭ ಭಜನಾ ಮಂದಿರದ ಬಳಿ ಜು. 23 ರಂದು ಆಯೋಜಿಸಿದ ಚಿಣ್ಣರ ನಟ್ಟಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಭಾಗವಹಿಸಿದರು. ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿಯಲ್ಲಿ ಹಮ್ಮಿಕೊಂಡ “ಹಡಿಲು ಭೂಮಿ ಕೃಷಿ ಆಂದೋಲನ”ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಟೀಮ್ ನೇಶನ್ ಫಸ್ಟ್ ತಂಡ ಉಡುಪಿ ಇದರಿಂದ ಪ್ರೇರಣೆ ಪಡೆದು ಈ ಬಾರಿ 6 ಎಕರೆ ಪ್ರದೇಶದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದು, ಚಿಣ್ಣರ ನಟ್ಟಿ […]
ಕಾಪು: ಮನೆ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪು: ತಾಲೂಕಿನಲ್ಲಿ ಸುರಿದ ಮಳೆಗೆ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಬೆಟ್ಟು ನಿವಾಸಿ ಗೋಪಾಲ ಪಾಣಾರ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಜು. 24 ರಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದರು. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯ ಸುಭಾಸ್ ಬಲ್ಲಾಳ್, ಸವಿತಾ ಎ ಶೆಟ್ಟಿ, ಸುಜಲಾ ಪೂಜಾರಿ, ಕೋಟೆ ಗ್ರಾಮ ಪಂಚಾಯತ್ ಸದಸ್ಯ […]