ಬೈಂದೂರು: ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ಯುವಕ ನಾಪತ್ತೆ
ಬೈಂದೂರು: ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಎಂಬ ಯುವಕನು ಜುಲೈ 23 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಮಲೆಯಾಳಿ ಹಾಗೂ ಕೊರಗ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ: ಪ್ರವಾಸಿಗರು ಬೀಚ್ ಗಳ ಬಳಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಜಿಲ್ಲಾಧಿಕಾರಿ ಎಚ್ಚರಿಕೆ
ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದ ಕಾರಣ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನದಿಗಳು , ಹಳ್ಳಗಳು, ತೋಡುಗಳು ತುಂಬಿ ಹರಿಯುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್ ಗಳು, ನದಿಗಳು ಹಾಗು ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಕುಂದಾಪುರ: ಪ್ರಾಗೈತಿಹಾಸಿಕ ನಂದಿಗೋಣ ನೃತ್ಯದ ಬಂಡೆ ಕಲೆ ಪತ್ತೆ ಹಚ್ಚಿದ ಪುರಾತತ್ವ ಶಾಸ್ತ್ರಜ್ಞರು
ಕುಂದಾಪುರ: ಇಲ್ಲಿನ ಬುದ್ದನಜೆಡ್ಡು ಮತ್ತು ಅವಲಕ್ಕಿ ಪಾರೆ ಎಂಬಲ್ಲಿ ಪ್ರಾಗೈತಿಹಾಸಿಕ ಮಹತ್ವವುಳ್ಳ ನಂದಿಗೋಣ ನೃತ್ಯದ ಬಂಡೆಕಲೆಯನ್ನು ಎಂ.ಆರ್.ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಯು ಕಂಡುಹಿಡಿದಿದೆ ಎಂದು ಪುರಾತತ್ವ ಶಾಸ್ತ್ರಜ್ಞ ಪ್ರೊ.ಟಿಮುರುಗೇಶಿ ತಿಳಿಸಿದ್ದಾರೆ. ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಚಿತ್ರದಲ್ಲಿ ನಂದಿಯೊಂದನ್ನು ಹಲಗೆ ಮೇಲೆ ಹೊತ್ತುಕೊಂಡು ಹೋಗುತ್ತಿರುವಂತೆ ಕೆತ್ತಲಾಗಿದ್ದು, ಬಹುಶಃ ಇದು ನೃತ್ಯಕಲೆಯನ್ನು ಪ್ರತಿನಿಧಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಜನಪದ ಸಂಸ್ಕೃತಿಯು ಧಾರ್ಮಿಕ ಹಾಗೆಯೇ ನಾಟಕೀಯ ಪ್ರದರ್ಶನಗಳೆರಡನ್ನೂ ಸಂಯೋಜಿಸುತ್ತದೆ. ಇದು ಕರಾವಳಿಯ ಭೂತ ಕೋಲದಲ್ಲಿ ವಿಸ್ತೃತವಾದ ನೃತ್ಯ […]
ಪೋಸ್ಟರ್ ಜೊತೆ ಟೀಸರ್ ದಿನಾಂಕ ಬಹಿರಂಗಪಡಿಸಿದ ‘ಡೋನೋ’.
ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್ ಅವರ ಮಗ ರಾಜ್‌ವೀರ್ ಡಿಯೋಲ್ ಮತ್ತು ಪೂನಂ ಧಿಲ್ಲೋನ್ ಅವರ ಮಗಳು ಪಲೋಮಾ ತಕೆರಿಯಾ ಮೊದಲ ಬಾರಿಗೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರಿಬ್ಬರ ಮೊದಲ ಚಿತ್ರವಾಗಿದೆ. ನಿರ್ದೇಶಕ ಸೂರಜ್ ಬರ್ಜಾತ್ಯಾ ಅವರ ಪುತ್ರ ಅವ್ನಿಶ್ ಬರ್ಜಾತ್ಯಾ ತಮ್ಮ ಚೊಚ್ಚಲ ಚಿತ್ರ ‘ಡೋನೋ’ ಮೂಲಕ ನಿರ್ದೇಶಕರ ಟೋಪಿಯನ್ನು ಧರಿಸಲು ಸಿದ್ಧರಾಗಿದ್ದಾರೆ. ಗಮನಾರ್ಹ ವಿಚಾರವೆಂದರೆ, ಅವ್ನಿಶ್ ಅವರದ್ದು ಮಾತ್ರ ಇದು ಚೊಚ್ಚಲ ಸಿನಿಮಾವಲ್ಲ. ‘ಡೋನೋ’ ಚಿತ್ರದ ಪೋಸ್ಟರ್ ಜೊತೆ ಟೀಸರ್ ದಿನಾಂಕ ಘೋಷಣೆಯಾಗಿದೆ. ಸನ್ನಿ ಡಿಯೋಲ್ […]
ಭಾರೀ ಮಳೆ ಹಿನ್ನಲೆ: ನಾಳೆ (ಜುಲೈ25) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕಾರಣ, ಹವಮಾನ ಇಲಾಖೆಯು ಜಿಲ್ಲಾ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜು.25 ರಂದು ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.