ರಾಜ್ಯ ಸರಕಾರದ ಸಂವಿಧಾನ ವಿರೋಧಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

ಉಡುಪಿ: ಜನತೆಗೆ ಆಮಿಷವನ್ನು ಒಡ್ಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಗ್ಯಾರಂಟಿಗಳನ್ನು ಮರೆತು ಜನರ ಗಮನವನ್ನು ಬೇರೆಡೆಗೆ ಒಯ್ಯಲು ವಿವಿಧ ಜನ ವಿರೋಧಿ, ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿದೆ. ಇದರ ಭಾಗವಾಗಿ ವಿಧಾನಸಭೆಯಲ್ಲಿ ಉಪ ಸಭಾಪತಿಯವರ ಎದುರು ಪೇಪರ್ ಹರಿದು ಎಸೆದ ಕಾರಣಕ್ಕೆ ಸ್ಪೀಕರ್ ರವರು ಸರ್ವಾಧಿಕಾರಿ ಧೋರಣೆ ತಳೆದು ಬಿಜೆಪಿಯ 10 ಮಂದಿ ಶಾಸಕರನ್ನು ಅಸಾಂವಿಧಾನಿಕ ರೀತಿಯಲ್ಲಿ ಸದನದಿಂದ ಅಮಾನತುಗೊಳಿಸಿರುವುದು ಆತುರದ ನಿರ್ಧಾರದ ಅತ್ಯಂತ ಹೇಯ ಕೃತ್ಯವಾಗಿದೆ. ಈ ವಿಚಾರದಲ್ಲೂ ದಲಿತ ಕಾರ್ಡ್ ಬಳಕೆ ಮಾಡುತ್ತಿರುವ ಕಾಂಗ್ರೆಸ್ […]

ಒಂದು ನಿಮಿಷದಲ್ಲಿ 53 ಬಾರಿ ಬ್ಯಾಕ್ವರ್ಡ್ ಸ್ಟೆಪ್ಸ್ ಮಾಡಿ 9ನೇ ಗಿನ್ನೆಸ್ ದಾಖಲೆಗೆ ತನುಶ್ರೀ ಪಿತ್ರೋಡಿ ಪ್ರಯತ್ನ

ಉಡುಪಿ: ಯೋಗಬಾಲೆ ತನುಶ್ರೀ ಪಿತ್ರೋಡಿ 9ನೇ ಗಿನ್ನೆಸ್ ದಾಖಲೆಗೆ ಪ್ರಯತ್ನಿಸಿದ್ದಾಳೆ. ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ತನ್ನ ಸಹಪಾಠಿಗಳ ಮತ್ತು ಗುರುಗಳ ಸಮ್ಮುಖದಲ್ಲಿ ಈ ಗಿನ್ನೆಸ್ ದಾಖಲೆಯ ಪ್ರಯತ್ನ ಯಶಸ್ವಿಯಾಗಿ ಸಂಪನ್ನಗೊಂಡಿತು. ತನುಶ್ರೀ ಇದುವರೆಗೆ ಒಟ್ಟು ಎಂಟು ವಿಶ್ವದಾಖಲೆಯನ್ನು ಮಾಡಿದ್ದು ಇದು ಒಂಭತ್ತನೇ ವಿಶ್ವದಾಖಲೆಯ ಪ್ರಯತ್ನವಾಗಿದೆ. ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಎರಡೂ ಕಾಲುಗಳನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಕೈಯ ಚಲನೆ ಮಾಡುವ ಭಂಗಿ ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್ ಇದನ್ನು […]

ರಫ್ತು ಚಟುವಟಿಕೆಯಲ್ಲಿ ರಾಜ್ಯವನ್ನು ಮೊದಲನೇ ಸ್ಥಾನಕ್ಕೇರಿಸುವ ಗುರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಉದ್ಯಮಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ರಫ್ತಿಗೆ ಉತ್ತೇಜನ ನೀಡುವಂತಹ ಹೊಸ ಕೈಗಾರಿಕಾ ನೀತಿಯನ್ನು ರಾಜ್ಯ ಸರಕಾರವು ತ್ವರಿತವಾಗಿ ಜಾರಿಗೆ ತರಲಿದೆ. ರಫ್ತು ಚಟುವಟಿಕೆಯಲ್ಲಿ ದೇಶದ ಮಟ್ಟದಲ್ಲಿ ಮೂರನೇ ಸ್ಥಾನದಲ್ಲೇ ಇರುವ ರಾಜ್ಯವು ಮೊದಲ ಸ್ಥಾನಕ್ಕೆ ಏರಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಈ […]

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ: ಇಬ್ಬರ ಬಂಧನ; ಐದು ಯುವತಿಯರ ರಕ್ಷಣೆ

ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ್ದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿರುವ ಘಟನೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ನಡೆದಿದೆ. ಭವಾನಿ ಹೆಸರಿನ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆಯ ಜಾಲಕ್ಕೆ ಸಿಲುಕಿದ್ದ 5 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಈ ವೇಳೆ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್‌ ಸಲಾಮತ್‌, ಚಂದ್ರಹಾಸ ಎಂಬ ಆರೋಪಿಗಳನ್ನು ಪೊಲೀಸರು […]

ಮಣಿಪಾಲ ಡಾ.ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್’ನ‌ ಎಂ.ಡಿ ಡಾ.ವಿಜಯಭಾನು ಶೆಟ್ಟಿ ಅವರು ಸಂಶೋದಿಸಿದ ಅಲ್ಝೈಮರ್ಸ್ ಔಷಧಿಕ್ಕೆ ಅಮೆರಿಕದ ಪೇಟೆಂಟ್

ಮಣಿಪಾಲ: ಮಣಿಪಾಲದ ಡಾ. ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ನ ಎಂ.ಡಿ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿ ಪಡಿಸಿದ ಅಲ್ಝೈಮರ್ಸ್ ಮತ್ತು ಪಾರ್ಕಿನ್‍ಸೋನಿಸಮ್‍ನ ಆಯುರ್ವೇದ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಪೇಟೆಂಟ್ ಲಭಿಸಿರುತ್ತದೆ. ಇವರು ತಯಾರಿಸಿದ ಸಿಹಿಮೂತ್ರ ರೋಗದ ಇನ್ಸೋಲ್-ಎನ್, ಹೃದಯ ರಕ್ಷಣೆಯ ಹಾರ್ಟೋಜನ್, ಕ್ಯಾನ್ಸರ್ ಕಾಯಿಲೆ ಚಿಕಿತ್ಸೆಯ ಮುನೆಕ್ಸ್, ಮೂತ್ರಕೋಶದ ತೊಂದರೆಗಳಿಗೆ ಮುನಿಪ್ರಭಾ, ಮಾದಕದ್ರವ್ಯ ಚಟಬಿಡಿಸುವ ಹರ್ಬಾಡಿಕ್ಟ್, ಲಿಪಿಡ್ ಕೊಲೆಸ್ಟ್ರಾಲ್ ಹಿಡಿತದಲ್ಲಿಡುವ ಹರ್ಬೋಟ್ರಿಮ್, ಥೈರಾಯ್ಡ್ […]