ಅರಣ್ಯ ಇಲಾಖೆಯ ಸಸಿಗಳಿಗೆ ಪರಿಷ್ಕೃತ ದರ ನಿಗದಿ

ಉಡುಪಿ: ಸಾರ್ವಜನಿಕರ ವಿತರಣೆಗಾಗಿ ಅರಣ್ಯ ಇಲಾಖೆಯ ಎಲ್ಲಾ ಯೋಜನೆಗಳ ಅಡಿಯಲ್ಲಿ ಬೆಳೆಸಲಾಗುವ ಸಸಿಗಳು ಹಾಗೂ ಕಸಿ ಮಾಡಿದ ಸಸಿಗಳನ್ನು ಮಾರಾಟ ಮಾಡಲು 5*8 ಗಾತ್ರಕ್ಕೆ 2 ರೂ., 6*9 ಗಾತ್ರಕ್ಕೆ 3 ರೂ ಹಾಗೂ 8*12 ಗಾತ್ರಕ್ಕೆ 6 ರೂ. ನಂತೆ ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿರುತ್ತದೆ. ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿ ಮತ್ತು ಅಳತೆಯ ಗಿಡಗಳನ್ನು ಸಾರ್ವಜನಿಕ ವಿತರಣೆಗಾಗಿ ಕಾರ್ಕಳ, ಕುಂದಾಪುರ ಹಾಗೂ ಉಡುಪಿ ಸಾಮಾಜಿಕ ಅರಣ್ಯ ವಲಯದ ವಿವಿಧ ಸಸ್ಯಕ್ಷೇತ್ರಗಳಲ್ಲಿ […]

ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ನಿವಾಸಿ ಪ್ರಸನ್ನ (43) ಎಂಬ ವ್ಯಕ್ತಿಯು 2021 ಅಕ್ಟೋಬರ್ 26 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಪೂರ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ್ದು, ಶುಕ್ರವಾರ ಇರುವಕ್ಕಿಯಲ್ಲಿ ನಡೆದ 8ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಡಾಕ್ಟರೇಟ್ ಪ್ರದಾನ ಮಾಡಿದರು. “ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇಂದು ನೀಡಿದ ಗೌರವ ಡಾಕ್ಟರೇಟ್ ಸನ್ಮಾನ, ವಿಶೇಷವಾಗಿ ನಮ್ಮ ಅನ್ನದಾತ ರೈತರ ಹಕ್ಕು ಹಾಗೂ ಹಿತರಕ್ಷಣೆ ನಿಟ್ಟಿನಲ್ಲಿ […]

ನಿಷೇಧಿತ ಪ್ಲಾಸ್ಟಿಕ್ ವಸ್ತು ಬಳಸಿದಲ್ಲಿ ಕಾನೂನು ಕ್ರಮ ಜಾರಿ: ಸಾಲಿಗ್ರಾಮ ಪ.ಪಂ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪಿಯಲ್ಲಿ ಸಾರ್ವಜನಿಕರು, ಅಂಗಡಿ ಮಾಲೀಕರು, ಸಗಟು ಮಾರಾಟಗಾರರು, ಚಿಲ್ಲರೆ ವ್ಯಾಪಾರಿ ಮತ್ತು ಮಾರಾಟಗಾರರು ಪರಿಸರಕ್ಕೆ ಹಾನಿಯುಂಟು ಮಾಡುವಂತಹ ನಿಷೇಧಿತ ಪಾಸ್ಟಿಕ್ ವಸ್ತುಗಳನ್ನು ಬಳಕೆ ಮತ್ತು ಮಾರಾಟ, ಸಂಗ್ರಹಣೆ, ಸಾಗಾಣಿಕೆ ಮಾಡದಂತೆ ಈಗಾಗಲೇ ಹಲವಾರು ಬಾರಿ ತಿಳಿಸಿದ್ದರೂ ನಿಷೇಧಿತ ಬ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ. ಪರಿಸರಕ್ಕೆ ಹಾನಿಯುಂಟು ಮಾಡುವ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು. ತಪ್ಪಿದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪಟ್ಟಣ ಪಂಚಾಯತ್ ವತಿಯಿಂದ ವಶಪಡಿಸಿಕೊಳ್ಳುವುದರ ಜೊತೆಗೆ ಈ ಅಧಿಸೂಚನೆಯನ್ನು […]

ಮಣಿಪಾಲ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಾಯಾಳು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರಿನಲ್ಲಿದ್ದವರ ಮಾಹಿತಿ ಲಭ್ಯವಿಲ್ಲ. ಡಿಕ್ಕಿಯ ರಭಸಕ್ಕೆ ಬೊನೆಟ್ ಮತ್ತು ಬಂಪರ್ ಕಿತ್ತು ಹೋಗಿದೆ. ಮಣಿಪಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.