ಇಸ್ರೋದಿಂದ ಪ್ರಾಯೋಗಿಕ ಪರೀಕ್ಷೆ: ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವಸಹಿತ ಗಗನಯಾನ ಮಿಷನ್

ಬೆಂಗಳೂರು: ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ.ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವ ಸಹಿತ ಗಗನಯಾನ ಮಿಷನ್​ನ ಬಂದರು ಪ್ರಯೋಗ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ ಗಗನಯಾನ ಯೋಜನೆಯು ಬಾಹ್ಯಾಕಾಶ ನೌಕೆಯ ಮೂಲಕ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ದೂರದ ಕಕ್ಷೆಗೆ ಉಡಾವಣೆ ಮಾಡಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವುದಾಗಿದೆ. ಆಂಧ್ರ ಪ್ರದೇಶದ […]

‘ ರಮ್ಯಾ ಬದಲು ರಚಿತಾ ರಾಮ್ ಹೀರೋಯಿನ್,ಸಂಜು ವೆಡ್ಸ್​ ಗೀತಾ 2’ಗೆ ನಾಯಕಿ ಫೈನಲ್​

ಚಿತ್ರದಲ್ಲಿನ ಹಾಡುಗಳು, ಕಥೆ, ಸಂಭಾಷಣೆ ಎಲ್ಲವೂ ಹಿಟ್​ ಆಗಿದ್ದವು. ಒಂದು ದಶಕ ಕಳೆದರೂ ಇಂದಿಗೂ ಈ ಸಿನಿಮಾದ ಕ್ರೇಜ್​ ಕಡಿಮೆ ಆಗಿಲ್ಲ ಅನ್ನೋದೇ ವಿಶೇಷ. ಇದೀಗ ಸುಮಾರು 12 ವರ್ಷಗಳ ಬಳಿಕ ಸಂಜು ವೆಡ್ಸ್​ ಗೀತಾ ಪಾರ್ಟ್​ 2ಗೆ ಸಿದ್ಧತೆ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ‘ಸಂಜು ವೆಡ್ಸ್​ ಗೀತಾ’… 2011ರಲ್ಲಿ ತೆರೆಕಂಡು ಬ್ಲಾಕ್​ ಬಸ್ಟರ್​ ಆದ ಸಿನಿಮಾ. ನಟ ಶ್ರಿನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಕೆಮಿಸ್ಟ್ರಿ ಸಿನಿ ಪ್ರೇಮಿಗಳನ್ನು ವಿಶೇಷವಾಗಿ ಸೆಳೆದಿತ್ತು. ಸಂಜು […]

1876 ಸಬ್​ ಇನ್ಸ್​ಪೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ

ಸಿಬ್ಬಂದಿ ನೇಮಕಾತಿ ಆಯೋಗ (ಎಸ್​ಎಸ್​ಸಿ)ಯಿಂದ ಕೇಂದ್ರ ಪೊಲೀಸ್ ಇಲಾಖೆಯಲ್ಲಿ​ ಸಬ್​ ಇನ್ಸ್​ಪೆಕ್ಟರ್​ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪೊಲೀಸ್​​ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆ ನೇಮಕಾತಿ, ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ. ದೆಹಲಿ ಪೊಲೀಸ್​ ಇಲಾಖೆ ಸಬ್​ ಇನ್ಸ್​ಪೆಕ್ಟರ್​​ ಮತ್ತು ಸೆಂಟ್ರಲ್​ ಆರ್ಮಡ್​ ಪೊಲೀಸ್​ ಫೋರ್ಸ್​ (ಸಿಎಪಿಎಫ್​)ಗೆ ಈ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲಾಗುವುದು. ಒಟ್ಟು 1876 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ […]

ಹಾಲಿವುಡ್ ಚಲನಚಿತ್ರ ನಟಿ ,ಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ಚಾಪ್ಲಿನ್ ನಿಧನ

ವಾಷಿಂಗ್ಟನ್: ಕಾಮಿಡಿ ಜಗತ್ತಿನ ಲೆಜೆಂಡ್​ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್ 74ನೇ ವಯಸ್ಸಿಗೆ ಪ್ಯಾರಿಸ್‌ನಲ್ಲಿ ನಿಧನ ಹೊಂದಿದ್ದಾಗಿ ಅವರ ಕುಟುಂಬದವರು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜೋಸೆಫೀನ್, ಪಿಯರ್ ಪಾವೊಲೊ ಪಸೊಲಿನಿಯ, ದಿ ಕ್ಯಾಂಟರ್ಬರಿ ಟೇಲ್ಸ್ ಸೇರಿದಂತೆ ಹಲವಾರು ಹಾಲಿವುಡ್ ಚಲನಚಿತ್ರಗಳಲ್ಲಿ ಇವರು ನಟಿಸಿದ್ದರು. ಜುಲೈ 13 ರಂದು ಇಹಲೋಕ ತ್ಯಜಿಸಿದ್ದಾರೆ. ​ಚಾರ್ಲಿ ಚಾಪ್ಲಿನ್​ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್​ 74ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಜೋಸೆಫೀನ್ ಚಾಪ್ಲಿನ್ ಹಾಸ್ಯ ಜಗತ್ತಿನ ದಂತಕಥೆ […]

ಮಂಗಳೂರು: ಹಿಂದೂ ಕಾರ್ಯಕರ್ತರ ಗಡಿಪಾರು ಆದೇಶ; ಹಿಂಜಾವೇ ಖಂಡನೆ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ಪೊಲೀಸರ ಕ್ರಮ ಖಂಡನೀಯ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಗೋರಕ್ಷಣೆಯ ಕಾರ್ಯವನ್ನು ಮಾಡಿದ ಕಾರಣಕ್ಕೆ ಹಾಗೂ ಹೋಳಿ ಆಚರಣೆಯ ನೆಪದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯನ್ನು ತಡೆದ ಕಾರಣಕ್ಕೆ ಅವರನ್ನು ಗಡಿಪಾರು ಮಾಡುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ […]