ಮುಂದುವರಿದ ವರುಣಾರ್ಭಟ ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಆರೆಂಜ್ ಅಲರ್ಟ್
ಬೆಂಗಳೂರು: ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಇನ್ನಷ್ಟು ಹೆಚ್ಚಾಗಲಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಬಳಿಕ ಜುಲೈ 25 ರಿಂದ ಮೂರು ದಿನ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಜುಲೈ 24 ರಂದು ಹೆಚ್ಚು ಮಳೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಡಲಾಗಿದೆ. ಧಾರವಾಡ […]
ಪವನ್ ಕಲ್ಯಾಣ್ - ಸಾಯಿ ತೇಜ್ ನಟನೆಯ ’ಬ್ರೋ’ ಟ್ರೇಲರ್ ರಿಲೀಸ್
2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದೂ ಒಂದು. ಈ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ‘ಬ್ರೋ’ ತಮಿಳಿನ ‘ವಿನೋದಯ ಸೀತಂ’ ಚಿತ್ರದ ರಿಮೇಕ್ ಆಗಿದೆ. ಸಮುದ್ರಖನಿ ‘ಬ್ರೋ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಜುಲೈ 28 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಿಲೀಸ್ ಆಗಿರುವ ಟ್ರೇಲರ್ ಸದ್ಯ ಟ್ರೆಂಡಿಂಗ್ ಆಗಿದೆ. ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್ ಕಾಂಬೋದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಬ್ರೋ’. ಪವನ್ ಕಲ್ಯಾಣ್ ಮತ್ತು […]
ಹಾವೇರಿಯಲ್ಲೊಂದು ಆಸ್ಟ್ರೋ ಫಾರ್ಮ್ ನಿರ್ಮಿಸಿದ ರೈತನ ಮಗ ನಿರಂಜನ್
ಹಾವೇರಿ: ಖಗೋಳ ವಿದ್ಯಮಾನಗಳು ಬಡವರ್ಗದ ಜನಸಾಮಾನ್ಯರಿಗೆ ಇಂದಿಗೂ ಕಬ್ಬಿಣದ ಕಡಲೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಈ ವಿದ್ಯಮಾನಗಳನ್ನ ತಿಳಿಸುವ ಸೂಕ್ತ ತಾರಾಲಯವಿಲ್ಲ. ಅಲ್ಲದೇ ಖಗೋಳ ವಿದ್ಯಾಮಾನ ವೀಕ್ಷಣೆಗೆ ಟೆಲಿಸ್ಕೋಪ್ ಸೇರಿದಂತೆ ವಿವಿಧ ಉಪಕರಣಗಳ ಕೈಗೆಟುಕುವ ಬೆಲೆಯಲ್ಲಿಲ್ಲ. ಮಿಲ್ಕಿವೇ, ಗ್ಯಾಲಕ್ಸಿ, ನಕ್ಷತ್ರ, ಕ್ಷುದ್ರಗೃಹ, ಧೂಮಕೇತು, ಸೌರವ್ಯೂಹ ಅಷ್ಟೇ ಯಾಕೆ ಎಷ್ಟೋ ಜನರು ಇನ್ನು ಭೂಮಿಯ ನೈಸರ್ಗಿಕ ಉಪಗೃಹ ಚಂದ್ರನ ಸರಿಯಾಗಿ ವೀಕ್ಷಣೆ ಮಾಡಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಮಿಸಲಾಗಿರುವ ತಾರಾಲಯಗಳಲ್ಲಿ ಶ್ರೀಮಂತರು, ನಗರವಾಸಿಗಳು ತಮ್ಮ ಖಗೋಳಕೌತುಕ ಕಳೆದುಕೊಳ್ಳುತ್ತಾರೆ.ಅನ್ಯಗ್ರಹ, […]
ಹಾಸ್ಟೆಲ್ ಹುಡುಗರ ಸಕ್ಸಸ್ ಮೀಟ್
ಯುವ ಪ್ರತಿಭೆಗಳ ಈ ಸಿನಿಮಾ ಶುಕ್ರವಾರ ಬಿಡುಗಡೆಗೊಂಡು ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಎರಡನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರಚಾರ ಮಾಡಿ, ಇಡೀ ಸ್ಯಾಂಡಲ್ವುಡ್ ಸಾಥ್ ಕೊಟ್ಟಿರುವ ಈ ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಶಿವರಾಜ್ ಕುಮಾರ್ ಅವರ ನಾಗವಾರ ನಿವಾಸದಲ್ಲಿ ಹಾಸ್ಟೆಲ್ […]
ಪ್ರತಿಕೂಲ ಹವಾಮಾನದ ಹಿನ್ನೆಲೆ ಎರಡು ವಿಮಾನಗಳು ಡೈವರ್ಟ್ ಆಗಿ ಮತ್ತೆ ಮಂಗಳೂರಿಗೆ
ಮಂಗಳೂರು: ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಎರಡು ವಿಮಾನಗಳನ್ನು ಡೈವರ್ಟ್ ಮಾಡಿ ಬಳಿಕ ಮತ್ತೆ ಮಂಗಳೂರಿನಲ್ಲಿ ಇಳಿಸಲಾಯಿತು.ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಕೂಡ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿಗೆ ಡೈವರ್ಟ್ ಮಾಡಲಾಯಿತು. ಬೆಂಗಳೂರಿನಿಂದ ಹೊರಟು ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ಬೆಂಗಳೂರಿನಿಂದ 9.55ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಬೆಳಗ್ಗೆ 11 ಗಂಟೆಗೆ ಮಂಗಳೂರು ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಪ್ರತಿಕೂಲ ಹವಾಮಾನ ಹಿನ್ನೆಲೆ ಕೇರಳದ ಕಣ್ಣೂರು ಏರ್ಪೋರ್ಟ್ನಲ್ಲಿ […]