ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಜಿಲ್ಲೆಯಲ್ಲಿ 2.58 ಲಕ್ಷ ಫಲಾನುಭವಿಗಳು
ಉಡುಪಿ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿಯವರ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ವ್ಯಾಪ್ತಿಯ ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಈ ಯೋಜನೆಗೆ ಅರ್ಹರು. ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ ಪಾವತಿದಾರರಾಗಿದ್ದರೆ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಲಾಭ […]
ಕರ್ಕಾಟಕ ರಾಶಿಯಲ್ಲಿ ಸೂರ್ಯ ಸಂಚಾರ: ಧನು ಮತ್ತು ಮಕರ ರಾಶಿಯವರ ಫಲಗಳು
ಧನು ರಾಶಿ ಧನು ರಾಶಿಯ ಸ್ಥಳೀಯರಿಗೆ ಸೂರ್ಯನು ಒಂಬತ್ತನೇ ಮನೆಯನ್ನು ಆಳುತ್ತಾನೆ ಮತ್ತು ಕರ್ಕ ರಾಶಿಯ ಸೂರ್ಯನ ಸಂಚಾರವು ಇವರ ಎಂಟನೇ ಮನೆಯ ಮೂಲಕ ಸಾಗುತ್ತದೆ. ದುರದೃಷ್ಟವಶಾತ್, ಇದು ಉತ್ತಮ ಸುದ್ದಿಯಲ್ಲ ಏಕೆಂದರೆ ಈ ಅವಧಿಯು ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗೆ ಕೆಲವು ಸವಾಲುಗಳನ್ನು ಒಡ್ಡಬಹುದು. ಈ ಸಮಯದಲ್ಲಿ, ಅವರು ಹೊಟ್ಟೆ ನೋವು, ಅಧಿಕ ಜ್ವರ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿಯಂತಹ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ನಷ್ಟವನ್ನು ಅನುಭವಿಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ […]
ಜುಲೈ 24 ರವರೆಗೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: ಉಡುಪಿಗೆ ಆರೆಂಜ್ ಅಲರ್ಟ್
ಉಡುಪಿ: ಕಳೆದ ಹಲವು ದಿನಗಳಿಂದ ಉತ್ತರ ಭಾರತ ಮತ್ತು ಇದೀಗ ಮುಂಬೈನಲ್ಲಿ ಅಬ್ಬರ ತೋರಿರುವ ಮುಂಗಾರು ಮಳೆಯು ಮತ್ತೊಮ್ಮೆ ಕರ್ನಾಟಕದತ್ತ ಮುಖ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಲಘುವಿನಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆಯು ನೀಡಿದೆ. ರಾಜ್ಯದಾದ್ಯಂತ ಬೀಳಲಿರುವ ಭಾರೀ ಮಳೆಯ (64.5 ಮಿಮೀ-115.5 ಮಿಮೀ) ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಸೋಮವಾರ (ಜುಲೈ 24) ವರೆಗೆ ಅತಿ ಹೆಚ್ಚು (115.6 ಮಿಮೀ-204.5 ಮಿಮೀ) ಮಳೆಯಾಗುವ ಸಾಧ್ಯತೆಯಿದೆ. […]
ವಿದ್ಯಾಪೋಷಕ್‍ಗೆ 3 ಲಕ್ಷ ರೂ ದೇಣಿಗೆ ನೀಡಿದ ಲಯನ್ಸ್ ಮಾಜಿ ಗವರ್ನರ್ ವಿ. ಜಿ. ಶೆಟ್ಟಿ
ಉಡುಪಿ: ಪುರಭವನದಲ್ಲಿ ಜು.19 ರಂದು ನಡೆದ ಲಯನ್ಸ್ ಕ್ಲಬ್ ಉಡುಪಿ ಮಿಡ್-ಟೌನ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್ ಹಾಗೂ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಇವರು ವಿದ್ಯಾಪೋಷಕ್‍ಗೆ 3 ಲಕ್ಷ ರೂಗಳ ದೇಣಿಗೆ ನೀಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದು, ದೇಣಿಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್‍ಗಳಾದ ಪಿ. ಕಿಶೋರ್ ರಾವ್, ಮಧುಸೂದನ ಹೆಗ್ಡೆ, ಬಸ್ರೂರು […]
ನಿಖಿತಾ ಸಾವಿಗೆ ಆಸ್ಪತ್ರೆಯ ಸ್ಪಂದನೆ: ಕುಟುಂಬಕ್ಕೆ 20 ಲ.ರೂ ಸಾಂತ್ವನ ಧನ ಹಸ್ತಾಂತರ
ಉಡುಪಿ: ಆರೋಗ್ಯ ಸಮಸ್ಯೆಯಿಂದಾಗಿ ಇಲ್ಲಿನ ಖಾಸಗಿ ಆಸ್ಪತೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ ನಿಖಿತಾ ಸಾವಿಗೆ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಆಸ್ಪತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸಿ ಹೋರಾಟ ನಡೆಸಲಾಗಿತ್ತು. ಇದೀಗ ನಿಖಿತಾ ಸಾವಿಗೆ ಖೇದ ವ್ಯಕ್ತಪಡಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿಯು 20 ಲಕ್ಷ ರೂ ಗಳನ್ನು ಸಾಂತ್ವನ ಧನ ಪರಿಹಾರವಾಗಿ ನಿಖಿತಾ ಕುಟುಂಬಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಜಿಲ್ಲೆಯ ಎಲ್ಲಾ ಕುಲಾಲ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ಪ್ರಜ್ಞಾವಂತ ನಾಗರಿಕರು ನಡೆಸಿದ ಹೋರಾಟಕ್ಕೆ ಸಂದ ಜಯ ಇದಾಗಿದ್ದು, […]