ಅಗ್ನಿಶಾಮಕ ದಳ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಮಸೂದೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ
ಬೆಂಗಳೂರು: ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಕಾಯ್ದೆ (ತಿದ್ದುಪಡಿ) ಮಸೂದೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದರು.ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ ಬುಧವಾರ ಅಂಗೀಕಾರಗೊಂಡಿತು. ಈ ತಿದ್ದುಪಡಿ ಸಂಬಂಧ ಹಿಂದಿನ ಸರ್ಕಾರ ಕಳೆದ ಮಾರ್ಚ್ 24ರಂದು ಸುಗ್ರೀವಾಜ್ಞೆ ಹೊರಡಿಸಿತ್ತು.ಬಿಜೆಪಿ, ಜೆಡಿಎಸ್‌ನ ಕೆಲವು ಸದಸ್ಯರು ಎರಡೂ ಮಸೂದೆಗಳ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ, ಕೆಲವು ಸಲಹೆಗಳನ್ನು […]
ಸದನದಿಂದ ಅಮಾನತು ಶಿಕ್ಷೆ ನೀಡಿದ ಸಭಾಧ್ಯಕ್ಷರಿಗೆ ಪತ್ರ ಬರೆದ ಕಾರ್ಕಳ ಶಾಸಕ ಸುನಿಲ್ ಕುಮಾರ್
ಬೆಂಗಳೂರು: ಸರ್ಕಾರದ ನಡೆಯನ್ನು ಪ್ರಶ್ನಿಸಿದ ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪತ್ರ ಬರೆದಿದ್ದಾರೆ. ಶ್ರೀ ಯು.ಟಿ.ಖಾದರ್ ಸನ್ಮಾನ್ಯ ಸಭಾಧ್ಯಕ್ಷರು ವಿಧಾನಸಭೆ ವಿಷಯ: ಏಕಪಕ್ಷೀಯವಾಗಿ ಅಮಾನತು ಶಿಕ್ಷೆಕೊಟ್ಟದ್ದಕ್ಕಾಗಿ ಧನ್ಯವಾದ ಸಮರ್ಪಣೆ ಮಾನ್ಯ ಸಭಾಧ್ಯಕ್ಷರೇ , ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮನಿರೀಕ್ಷೆ ಇಂದು ಉಸುಕಿನ ಸೌಧದಂತೆ ಕುಸಿದು ಹೋಗಿದೆ. […]
ಸಭಾಪತಿಗಳಿಂದ ಸದನದ ಗೌರವಕ್ಕೆ ಚ್ಯುತಿ; ಬಿಜೆಪಿ ಶಾಸಕರ ಅಮಾನತು ಸರ್ವಾಧಿಕಾರಿ ಧೋರಣೆ: ಯಶ್ ಪಾಲ್ ಸುವರ್ಣ ಆಕ್ರೋಶ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ರಾಜಕೀಯ ಸಭೆಗೆ ಆಗಮಿಸಿದ ಪಕ್ಷಗಳ ನಾಯಕರಿಗೆ ನಿಯಮ ನಿಯಮಬಾಹಿರವಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡ ಸರ್ಕಾರದ ನಡೆಯನ್ನು ಖಂಡಿಸಿ, ಬಿಜೆಪಿ ಶಾಸಕರು ಸದನದಲ್ಲಿ ನಡೆಸಿದ ಪ್ರತಿಭಟನೆಯನ್ನು ನೆಪವಾಗಿಸಿ ಅಮಾನತುಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಬಯಲಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನರ್ಹಗೊಂಡಿರುವ ಸಂಸದ ರಾಹುಲ್ ಗಾಂಧಿ, ಜಾಮೀನಿನ ಮೇಲೆ ಹೊರಗೆ ಇರುವ ಲಾಲು ಪ್ರಸಾದ್ ಯಾದವ್ ಹಾಗೂ ತಮ್ಮ ರಾಜ್ಯಗಳಲ್ಲಿಯೇ […]
ರೋಟರಾಕ್ಟ್ ಕ್ಲಬ್ ಉಡುಪಿಯ ನೂತನ ಅಧ್ಯಕ್ಷೆಯಾಗಿ ರೋಟರಾಕ್ಟರ್ ತನ್ವಿ ವಿಶಿಷ್ಟ ಅಧಿಕಾರ ಸ್ವೀಕಾರ
ಉಡುಪಿ: ರೋಟರಿ ಜಿಲ್ಲೆ 3182, ವಲಯ 4ರ ಪ್ರತಿಷ್ಟಿತ ರೋಟರಾಕ್ಟ್ ಕ್ಲಬ್ ಉಡುಪಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಜು.16 ರಂದು ಸಂಜೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು. ಪದ ಪ್ರಧಾನ ಅಧಿಕಾರಿ, ರೋಟರಿ ಉಡುಪಿಯ ಅಧ್ಯಕ್ಷೆ ರೋ. ದೀಪಾ ಭಂಡಾರಿಯವರು ನೂತನ ಅಧ್ಯಕ್ಷೆ ರೋಟರಾಕ್ಟರ್ ತನ್ವಿ ವಿಶಿಷ್ಟ ಅವರಿಗೆ ಹಾಗೂ ಕಾರ್ಯದರ್ಶಿ ರೋಟರಾಕ್ಟರ್ ಅಂಶ್ ಕೋಟ್ಯಾನ್ ಅವರಿಗೆ ಪದ ಪ್ರಧಾನ ಮಾಡಿ, ಪ್ರಮಾಣ ವಚನ ಭೋದಿಸಿದರು. ಮುಖ್ಯ ಅತಿಥಿಗಳಾದ ರೋಟರಾಕ್ಟ್ ಜಿಲ್ಲಾ […]
ಕರ್ಕಾಟಕ ರಾಶಿಯಲ್ಲಿ ಸೂರ್ಯ ಸಂಚಾರ: ತುಲಾ ಮತ್ತು ವೃಷ್ಚಿಕ ರಾಶಿಯವರ ಫಲಗಳು
ತುಲಾ ರಾಶಿ ತುಲಾ ರಾಶಿಯಲ್ಲಿ ಜನಿಸಿದವರಿಗೆ ಸೂರ್ಯನು ಹನ್ನೊಂದನೇ ಮನೆಯ ಅಧಿಪತಿ. ಸೂರ್ಯನು ಕರ್ಕ ರಾಶಿಯ ಮೂಲಕ ಚಲಿಸುವಾಗ ಮತ್ತು ಹತ್ತನೇ ಮನೆಗೆ ಪ್ರವೇಶಿಸಿದಾಗ, ಅದು ಅವರ ವೃತ್ತಿಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರು ತಮ್ಮ ಕೆಲಸದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಹಾಗೂ ಸಹೋದ್ಯೋಗಿಗಳಿಂದ ಮನ್ನಣೆ ಮತ್ತು ಪ್ರಶಂಸೆಯನ್ನು ಗಳಿಸುತ್ತಾರೆ. ಇದು ಬಡ್ತಿ ಮತ್ತು ಸಂಬಳ ಹೆಚ್ಚಳದ ಅವಕಾಶಗಳಿಗೆ ಕಾರಣವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ಧನಾತ್ಮಕ ಫಲಿತಾಂಶಗಳು ಕಂಡು ಬಂದು ಉದ್ದಿಮೆಯಲ್ಲಿ ಯಶಸ್ಸು […]