ನಿಷೇಧಿತ ಪ್ಲಾಸ್ಟಿಕ್ ವಶ: ದಂಡ ವಸೂಲಿ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಇಂದು ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 52 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು, 18,000 ರೂ. ದಂಡ ವಿಧಿಸಲಾಯಿತು ಹಾಗೂ ಉದ್ದಿಮೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು […]

ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಸನ್ಮಾನ

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘವು ಪೂಂಜಾ ಟವರ್ಸ್ ನಿಂದ ಕಾರ್ತಿಕ್ ಟವರ್ಸ್ ನ ಮೊದಲ ಮಹಡಿಗೆ ಸ್ಥಳಾಂತರಗೊಂಡು ಉದ್ಘಾಟಿಸಲ್ಪಟ್ಟ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾಸಕ ಯಶ್ ಪಾಲ್ ಸುವರ್ಣ, ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ದ.ಕ.ಜಿ. ಕೇಂದ್ರ […]

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಿಂದ ಮುಂಬೈ ಭೇಟಿ

ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಇದೇ ತಿಂಗಳ ಜುಲೈ 22 ಭಾನುವಾರದಿಂದ ತಾರೀಕು 25ರ ಮಂಗಳವಾರ ತನಕ ಮುಂಬೈಯ ದಾದರ್(ಪೂರ್ವ) ಪರಿಸರದಲ್ಲಿ ಭಕ್ತರ ಬೇಟಿಗೆ ಲಭ್ಯರಿರುತ್ತಾರೆ. ನಂತರ ಹೈದರಾಬಾದ್ ನಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಿ ಅನುಗ್ರಹಿತ ಭಕ್ತನಾಗಿ ತನ್ನ ಸೂಕ್ತ ಮಾರ್ಗದರ್ಶನದಿಂದ ಪರಿಹಾರ ಸೂಚಿಸಿ, ಸಂಕಷ್ಟಕ್ಕೆ ಒಳಗಾದವರ ಸಂಕಷ್ಟ ನಿವಾರಿಸಿ ಭಕ್ತ ಜನರ ಮಾತನಾಡುವ ಶಕ್ತಿ ಎನಿಸಿದ ಶ್ರೀ ಗುರೂಜಿಯವರ […]

ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದ ಸೂರತ್ ಡೈಮಂಡ್ ಬೋರ್ಸ್‌ ಕಟ್ಟಡ: ವಿಶ್ವದ ಅತಿದೊಡ್ಡ ಕಚೇರಿಯೆಂಬ ಹೆಗ್ಗಳಿಕೆ

ಗಾಂಧಿನಗರ: ಪ್ರಪಂಚದ ಸುಮಾರು 90% ವಜ್ರಗಳನ್ನು ಕತ್ತರಿಸಿ ಅವುಗಳಿಗೆ ಆಕಾರ ನೀಡುವ ಗುಜರಾತಿನ ಸೂರತ್ ನಗರವು ಹೊಸ ದಾಖಲೆಯನ್ನು ಬರೆದಿದೆ. ವಿಶ್ವದ ಅತಿದೊಡ್ಡ ಕಚೇರಿಯೆಂದು ಹೆಗ್ಗಳಿಕೆ ಹೊಂದಿರುವ ಸೂರತ್ ಡೈಮಂಡ್ ಬೋರ್ಸ್‌ ಕಟ್ಟಡ ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದೆ. ವಜ್ರದ ಬೃಹತ್ ಉದ್ಯಮವನ್ನು ಇನ್ನು ಮುಂದೆ ಸೂರತ್ ಡೈಮಂಡ್ ಬೋರ್ಸ್‌ನಲ್ಲಿ ಇರಿಸಲಾಗುವುದು. ಇದರಲ್ಲಿ ಕಟ್ಟರ್‌ಗಳು, ಪಾಲಿಷರ್‌ಗಳು ಮತ್ತು ವ್ಯಾಪಾರಿಗಳು ಸೇರಿದಂತೆ 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರು ಕೆಲಸ ಮಾಡಲಿದ್ದಾರೆ. The Pentagon was the world's […]

ಆಳ ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಡೆ: ಮೀನುಗಾರರ ರಕ್ಷಣೆ; 15 ಲಕ್ಷ ರೂಪಾಯಿ ನಷ್ಟ ಅಂದಾಜು

ಉಡುಪಿ: ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರು ಮೂಲದ ಜೈಸನ್ ಲೋಬೋ ಮಾಲಕತ್ವದ ಕ್ವೀನ್ ಮೇರಿ ಹೆಸರಿನ ದೋಣಿ ಮಂಗಳೂರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನ ಇದ್ದ ಕಾರಣ ದೋಣಿಯನ್ನು ಮಲ್ಪೆ ಕಡೆ ತಿರುಗಿಸಲಾಗಿದೆ. ಈ ಸಂದರ್ಭದಲ್ಲಿ ನೀರಿನ ಮಧ್ಯೆ ಇದ್ದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿ ಮುಳುಗಡೆಯಾಗಿದೆ. […]