ಕುತೂಹಲ ಹೆಚ್ಚಿಸಿದ ಪ್ರಭಾಸ್​ ಫಸ್ಟ್ ಲುಕ್‌, ಪ್ರಾಜೆಕ್ಟ್ ಕೆ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ

ಪ್ರಭಾಸ್​ ಫಸ್ಟ್ ಲುಕ್‌: ಬಹುನಿರೀಕ್ಷಿತ ಪ್ರಾಜೆಕ್ಟ್ ಕೆ ಸಿನಿಮಾಗೆ ಬಂಡವಾಳ ಹೂಡುತ್ತಿರುವ ವೈಜಯಂತಿ ಮೂವೀಸ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್‌ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದೆ. ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ, ”ಹೀರೋಸ್​ ರೈಸಸ್, ಈ ಕ್ಷಣದಿಂದ ಗೇಮ್​ ಚೇಂಜ್​ ಆಗಲಿದೆ. ಪ್ರಾಜೆಕ್ಟ್ ಕೆ ಚಿತ್ರದಿಂದ ರೆಬೆಲ್​ ಸ್ಟಾರ್ ಪ್ರಭಾಸ್​​ ಮೊದಲ ನೋಟ, ಜುಲೈ 20ರಂದು (ಭಾರತದ ಸಮಯಾನುಸಾರ ಜುಲೈ 21) ಪ್ರೊಜೆಕ್ಟ್​ ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್​ ಹೊರಬರಲಿದೆ” ಎಂದು ಬರೆದುಕೊಂಡಿದ್ದಾರೆ. […]

ಅಶಿಸ್ತಿನಿಂದ ವರ್ತಿಸಿ ಸ್ಪೀಕರ್ ಪೀಠಕ್ಕೆ ಅಗೌರವ: ಬಿಜೆಪಿಯ 10 ಶಾಸಕರ ಅಮಾನತು

ಬೆಂಗಳೂರು: ವಿಧಾನಸಭಾ ಕಲಾಪದ ವೇಳೆ ಅಶಿಸ್ತಿನಿಂದ ವರ್ತಿಸಿದ ಕಾರಣ ಯು.ಟಿ.ಖಾದರ್ ಅವರು ೧೦ ಶಾಸಕರ ಅಮಾನತು ಮಾಡಿದ್ದಾರೆ . ಸ್ಪೀಕರ್ ಪೀಠ ಮತ್ತು ಸದನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಈ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಬಿಜೆಪಿ ಶಾಸಕರಾದ ಉಮಾನಾಥ ಕೋಟ್ಯಾನ್, ಯಶ್ ಪಾಲ್ ಸುವರ್ಣ,ವೇದವ್ಯಾಸ ಕಾಮತ್, ವಿ.ಸುನಿಲ್ ಕುಮಾರ್,ಆರ್.ಅಶೋಕ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಭರತ್ ಶೆಟ್ಟಿ, ಡಾ. ಅಶ್ವತ್ಥ ನಾರಾಯಣ ಇವರೆಲ್ಲರನ್ನು ಅಮಾನತು […]

ಸಾರ್ವಕಾಲಿಕ 19833 ಅಂಕಗಳಿಗೆ ಏರುವ ಮೂಲಕ ನಿಫ್ಟಿ ರೆಕಾರ್ಡ್​

ನವದೆಹಲಿ: ಸಕಾರಾತ್ಮಕ ಏರಿಕೆಯೊಂದಿಗೆ ದಿನದ ವಹಿವಾಟು ಪ್ರಾರಂಭವಾದ ನಂತರ 19,833.15 ಅಂಕಗಳಲ್ಲಿ ನಿಫ್ಟಿ ಹೊಸ ಸಾರ್ವಕಾಲಿಕ ಹಾಗೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಮುಗಿಸಿತು ಎಂದಿದ್ದಾರೆ. ಎನ್‌ಎಸ್‌ಇ ನಿಫ್ಟಿ 50ಯು 83.90 ಅಂಕ ಅಥವಾ ಶೇ. 0.42ರಷ್ಟು ಏರಿಕೆ ಕಂಡು 19,833.15 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಬಲವಾದ ಕಾರ್ಯಕ್ಷಮತೆ ಪ್ರದರ್ಶಿಸುವ ಮೂಲಕ ಇದು ದಿನದ ವಹಿವಾಟಿನಲ್ಲಿ 102.45 ಅಂಕ ಅಥವಾ ಶೇ.0.51ರಷ್ಟು ಗಳಿಕೆ ಕಂಡು 19,851.70ರ ಮಟ್ಟಕ್ಕೂ ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ 83.90 ಅಂಕಗಳ ಏರಿಕೆ […]

ಉತ್ತರ ಕನ್ನಡ ಜಿಲ್ಲೆಯಲ್ಲಿ 6 ವರ್ಷದಲ್ಲಿ 13 ಕನ್ನಡ ಶಾಲೆಗಳಿಗೆ ಬೀಗ

ಕಾರವಾರ (ಉತ್ತರ ಕನ್ನಡ) :ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಾಗಿಲು ಮುಚ್ಚಿವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ.ಕಾರವಾರದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಕೆಯಾಗಿದೆ. ಹೌದು, ಕಾರವಾರ ಕರ್ನಾಟಕದ ಗಡಿ ಪ್ರದೇಶವಾಗಿದ್ದು, […]

ಕನ್ನಡ ಮಾಲೂಮ್ ನಹೀಗೆ ಪರಿಹಾರವೇನು?

ನಾನು ಅನ್ಯಭಾಷಿಕಳಾಗಿ,ಅನ್ಯ ರಾಜ್ಯದವಳಾಗಿ ಕನ್ನಡವನ್ನು ಮಾತನಾಡಲು,ಬರೆಯಲು,ಅನುಭವದ ಆಧಾರದ ಮೇಲೆ ಕರ್ನಾಟಕ ಸರ್ಕಾರ, ಕನ್ನಡ ಸಂಘಗಳು ಮತ್ತು ಕನ್ನಡ ಪ್ರೇಮಿಗಳ ಜೊತೆ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು, ಬಯಸುತ್ತೇನೆ. ಪೂಜಾ ಗಾಂಧಿ ,ಪ್ರಸಿದ್ಧ ಚಿತ್ರ ನಟಿ —– ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ವರದಿಯಾದಂತೆ, ಕರ್ನಾಟಕ ಸರ್ಕಾರದ ಗೌರವಾನ್ವಿತ ಗೃಹ ಸಚಿವರಾದ ಡಾ ಜಿ. ಪರಮೇಶ್ವರವರು “ಚಾವುಂಡರಾಯ ದತ್ತಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿರುವ ಶೇಕಡಾ 60 ರಷ್ಟು ಜನರಿಗೆ ಕನ್ನಡ ಬರದಿರುವ ಬಗ್ಗೆ ತಮ್ಮ ಕಳವಳ […]