ಹೆಬ್ರಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ
ಉಡುಪಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಬೇಳಂಜೆ ಗ್ರಾಮದ ಬೂತಗುಂಡಿ ನಿವಾಸಿ ವಿಜೇಶ (42) ಎಂಬ ವ್ಯಕ್ತಿಯು ಜೂನ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 163 ಸೆಂ.ಮೀ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ. ಸಂಖ್ಯೆ: 08253-251116, ಮೊ.ನಂ: 9480805463 ಹಾಗೂ ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08258-231083, […]
ಮಧ್ವನಗರ ಅಂಗನವಾಡಿಗೆ ಶಾಶ್ವತ ತಗಡು ಚಪ್ಪರ ಕಾಣಿಕೆ
ಉಡುಪಿ: ಕಟ್ಟೆ ಫ್ರೆಂಡ್ಸ್ ಜವಣೆರ ಕಟ್ಟೆಯ ಸಹಭಾಗಿತ್ವದಲ್ಲಿ ಸಮಾಜಸೇವಕ ಕೃಷ್ಣ ಮೂರ್ತಿ ಆಚಾರ್ಯ ಹಾಗೂ ದಯಾನಂದ ಕಪ್ಪೆಟ್ಟು ಇವರ ವತಿಯಿಂದ ಮಧ್ವನಗರ ಅಂಗನವಾಡಿಗೆ ಶಾಶ್ವತ ತಗಡು ಚಪ್ಪರವನ್ನು ಹೊದಿಸಲಾಯಿತು. ಸಮಾಜಸೇವಕಕೃಷ್ಣ ಮೂರ್ತಿ ಆಚಾರ್ಯ, ದಯಾನಂದ ಕಪ್ಪೆಟ್ಟು, ಉಡುಪಿ ನಗರಸಭೆಯ ಸ್ಥಾಯಿಸಮಿತಿಯ ಅಧ್ಯಕ್ಷ ಶ್ರೀಶ ಭಟ್, ಸ್ಥಳೀಯ ನಗರಸಭಾ ಸದಸ್ಯೆ ಸಂಪಾವತಿ, ಸಂತೋಷ್ ಕಂಗಣಬೆಟ್ಟು, ಅಂಗನವಾಡಿಯ ಶಿಕ್ಷಕಿ ಹರಿಣಾಕ್ಷಿ, ಕಟ್ಟೆ ಫ್ರೆಂಡ್ಸ್ ನ ಅಧ್ಯಕ್ಷ ಸಂತೋಷ್,ದಿನೇಶ್ ಜವಣೆರಕಟ್ಟೆ, ಮಹಮದ್ ಸಾಧಿಕ್,ಪ್ರಕಾಶ್ ಆಚಾರ್ಯ ,ಚಿದಾನಂದ,ಸಂಜೀವ ಸುವರ್ಣ, ರಾಜ ಜವಣೆರಕಟ್ಟೆ, ರಮೇಶ್ […]
ಕುಂದಾಪುರ ತಾಲೂಕು ಭಜನಾ ಒಕ್ಕೂಟ ಹಾಲಾಡಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ
ಕುಂದಾಪುರ: ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ, 6 ವಲಯಗಳ ಸಹಯೋಗದೊಂದಿಗೆ ನಡೆದ ಭಜನಾ ಪರ್ವ 2023, ಕಾರ್ಯಕ್ರಮದಲ್ಲಿ ಭಜನಾ ಒಕ್ಕೂಟ ಹಾಲಾಡಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಗೌರವಾಧ್ಯಕ್ಷರಾಗಿ ಆನಂದ್ ಶೆಟ್ಟಿ ಮುದುರಿ, ನೂತನ ಅಧ್ಯಕ್ಷೆ ಸುಶೀಲಾ ಅತುಲ್ ಶೆಟ್ಟಿ, ಶ್ರೀ ಜಟ್ಟಿಗೆಶ್ವರ ಭಜನಾ ಮಂಡಳಿ ರಾಜನ್ ಬೆಟ್ಟು ಜನ್ನಾಡಿ, ಉಪಾಧ್ಯಕ್ಷರಾಗಿ ಮುರುಳಿಧರ್ ಶೆಟ್ಟಿ, ದುರ್ಗಾ ಭಜನಾ ಮಂಡಳಿ ಹುಯ್ಯಾರು,ಜ್ಯೋತಿ ಮಹಾಲಿಂಗೇಶ್ವರ ಭಜನಾ ಮಂಡಳಿ, ನಾಲ್ತುರು, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಕೊಂಜಾಡಿ, ದುರ್ಗಾಪರಮೇಶ್ವರಿ ಭಜನಾ […]
ನ್ಯಾಕ್ ಪೀರ್ ತಂಡದಿಂದ ಭಂಡಾರ್ಕಸ್ ಕಾಲೇಜಿಗೆ ಭೇಟಿ
ಕುಂದಾಪುರ: ನ್ಯಾಕ್ ಪೀರ್ ತಂಡವು ಜುಲೈ 14 ಮತ್ತು 15 ರಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಭೇಟಿ ನೀಡಿತು. ತಂಡದ ಅಧ್ಯಕ್ಷರಾಗಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಅಶೋಕ್ ಬೊಯ್ಟಿ, ತಂಡದ ಸದಸ್ಯ ಸಂಯೋಜಕರಾಗಿ ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಶಹೀದ್ ರಸೂಲ್ ಮತ್ತು ಅಸ್ಸಾಂನ ಟನ್ಷುಕಿಯಾದ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಾದಲ್ ಕುಮಾರ್ ಸೇನ್ ಇದ್ದರು. ಸದಸ್ಯರನ್ನು ಸಂಸ್ಥೆಗೆ ಸ್ವಾಗತಿಸಲಾಯಿತು, ಅಲ್ಲಿ ಅವರಿಗೆ ಸಾಂಸ್ಥಿಕ ಮುಖ್ಯಾಂಶಗಳು ಮತ್ತು ವಿವಿಧ ಇಲಾಖೆಗಳಿಂದ ನ್ಯಾಕ್ […]
ಮಣಿಪಾಲ: ಎಂಐಟಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ
ಮಣಿಪಾಲ: ಪ್ರತಿಷ್ಠಿತ ಭಾರತೀಯ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹೊಸ ಶೈಕ್ಷಣಿಕ ವರ್ಷವನ್ನು ಜುಲೈ 17 ರಂದು ಉದ್ಘಾಟಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಸಮಾರಂಭವನ್ನು ಉದ್ಘಾಟಿಸಿದರು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಇಂತಹ ಅದ್ಭುತ ಕೊಡುಗೆಗಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಮತ್ತು ಅಗ್ರ ಶ್ರೇಯಾಂಕದ ಸಂಸ್ಥೆಯನ್ನು ಜಿಲ್ಲೆಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಉಪಕುಲಪತಿ ಲೆಫ್ಟಿನೆಂಟ್ […]