ಪರಮಾಣು ಕಲುಷಿತ ನೀರು ಜಪಾನ್​ನಿಂದ ಸಮುದ್ರಕ್ಕೆ ಬಿಡುಗಡೆ; ದಕ್ಷಿಣ ಕೊರಿಯಾ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿ ಆತಂಕ!

ಸಿಯೋಲ್ :ದಕ್ಷಿಣ ಕೊರಿಯಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣದ ಸಮುದ್ರಗಳಿಂದ, ಹಾಗೆಯೇ ದಕ್ಷಿಣದ ರೆಸಾರ್ಟ್ ನಗರವಾದ ಜೆಜು ನೀರಿನಿಂದ ಮತ್ತು ಹೆಚ್ಚು ದೂರದ ಪ್ರದೇಶಗಳಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜಪಾನ್ ತನ್ನ ದುರ್ಬಲಗೊಂಡ ಫುಕುಶಿಮಾ ಪರಮಾಣು ಸ್ಥಾವರದಿಂದ ವಿಕಿರಣ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಭೂಕಂಪದಿಂದ ಸ್ಥಗಿತಗೊಂಡಿರುವ ಫುಕುಶಿಮಾ ಅಣುಸ್ಥಾವರದಲ್ಲಿ ಸಂಗ್ರಹವಾಗಿರುವ ವಿಕಿರಣಶೀಲ ನೀರನ್ನು ಜಪಾನ್ ಸಮುದ್ರಕ್ಕೆ ಬಿಡುಗಡೆ ಮಾಡಲಿದೆ. ಇದು ನೆರೆಯ ದೇಶಗಳಿಗೆ ಮಾತ್ರವಲ್ಲದೇ ವಿಶ್ವಕ್ಕೇ ಆತಂಕ ಸೃಷ್ಟಿಸಿದೆ.ಆದರೆ, […]

ಗಿನ್ನಿಸ್ ವಿಶ್ವ ದಾಖಲೆ ಬರೆದ ಸಾತ್ವಿಕ್; ವಿಶ್ವದ ಅತಿ ವೇಗದ ಬ್ಯಾಡ್ಮಿಂಟನ್ ಸ್ಮ್ಯಾಶ್

ಸೋಕಾ (ಜಪಾನ್) : ಭಾರತದ ಸ್ಟಾರ್ ಷಟ್ಲರ್ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ.ಪುರುಷ ಆಟಗಾರನಿಗೆ 565 ಕಿ.ಮೀ/ಗಂಟೆ ವೇಗದಲ್ಲಿ ಆಕರ್ಷಕ ಸ್ಮ್ಯಾಶ್​ ಹಿಟ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ. ಇದು ಪುರುಷರ ಬ್ಯಾಡ್ಮಿಂಟನ್​ನಲ್ಲಿ ಈವರೆಗೆ ಅಧಿಕ ವೇಗದಲ್ಲಿ ಹೊಡೆದ ಸ್ಮ್ಯಾಶ್​ ಆಗಿದೆ. 565 ಕಿ.ಮೀ/ಗಂಟೆ ವೇಗದಲ್ಲಿ ಸ್ಮ್ಯಾಶ್​ ಹಿಟ್ ಹೊಡೆದು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ದಾಖಲೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಪ್ರಶಸ್ತಿಯನ್ನು […]

ಸಾವಿರ ರೂಪಾಯಿವರೆಗೆ ರಿಯಾಯಿತಿ :ಜುಲೈ 19ರಂದು realme C53 ಅರ್ಲಿ ಬರ್ಡ್ ಸೇಲ್;

ನವದೆಹಲಿ : ಕಂಪನಿಯ ಈ ಶ್ರೇಣಿಯಲ್ಲಿ realme C53 ಇದು 108MP ಕ್ಯಾಮೆರಾ ಹೊಂದಿರುವ ಮೊದಲ ಮತ್ತು ಏಕೈಕ ಸ್ಮಾರ್ಟ್‌ಫೋನ್ ಆಗಿದೆ.ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ರಿಯಲ್‌ಮಿ ತಾನು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್​ಫೋನ್ ರಿಯಲ್‌ಮಿ ಸಿ 53 ಮಾರಾಟಕ್ಕಾಗಿ ಜುಲೈ 19 ರಂದು “ಅರ್ಲಿ ಬರ್ಡ್ ಸೇಲ್” ಅನ್ನು ಘೋಷಿಸಿದೆ.ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ ರಿಯಲ್‌ಮಿ ಮಂಗಳವಾರ ಜುಲೈ 19 ರಂದು ದೇಶದಲ್ಲಿ ರಿಯಲ್‌ಮಿ C53 ಮಾರಾಟಕ್ಕಾಗಿ ಅರ್ಲಿ ಬರ್ಡ್ ಸೇಲ್ ಘೋಷಿಸಿದೆ. realme ಡಾಟ್ com ವೆಬ್​ಸೈಟ್​ನಲ್ಲಿ […]

‘ಋತು’: ಮುಟ್ಟಿನ ಕಿರುಚಿತ್ರ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಮಯೂರಿ

ಇದೀಗ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಮರ್ಥ್ ನಾಗರಾಜ್ ಈ ಮುಟ್ಟಿನ ಬಗ್ಗೆ ಕಿರುಚಿತ್ರ ಮಾಡಿದ್ದಾರೆ. 22 ನಿಮಿಷಗಳ ಈ ಶಾರ್ಟ್​ ಫಿಲ್ಮ್​ಗೆ ‘ಋತು’ವಿನ ಜೊತೆ ‘ಬದಲಾಗಬೇಕು’ ಎಂಬ ಅಡಿಬರಹವಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಮಾಡಲಾಗಿದ್ದು, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​, ನಟಿ ಮಯೂರಿ ಖ್ಯಾತರಿ ಹಾಗೂ ನಿರ್ದೇಶಕ ಶೂನ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಸಿನಿ ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಕಾಲ ಎಷ್ಟೇ ಮುಂದುವರೆದಿದ್ದರೂ ಕೂಡ […]

ವಿಜಯಪುರದಲ್ಲಿ ಐದು ದಿನ ಮಳೆ ಮುಂದುವರಿಕೆ ಕೊನೆಗೂ ಜಿಲ್ಲೆಗೆ ಮುಂಗಾರು ಆರಂಭ

ವಿಜಯಪುರ: ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಮಂಗಳವಾರ ಬೆಳಗ್ಗೆ 8-30ರಿಂದ ಸಂಜೆ 5-30ರವರೆಗೆ 5.2 ಮಿ,ಮೀ ಮಳೆ ದಾಖಲಾಗಿದೆ. ಇನ್ನೂ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ. ಕೊನೆಗೂ ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಸೋಮವಾರ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಇನ್ನೂ ಐದು ದಿನ ಇದೇ ರೀತಿ ಮಳೆ ಇರಲಿದೆ. […]