ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರ: ಮೇಷ ಹಾಗೂ ವೃಷಭ ರಾಶಿಯವರ ಫಲಗಳು

ವೈದಿಕ ಜ್ಯೋತಿಷ್ಯದಲ್ಲಿ, ಎಲ್ಲಾ ಗ್ರಹಗಳ ಬಗ್ಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅವುಗಳ ಚಲನೆಗಳು ವ್ಯಕ್ತಿಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತವೆ. ಆತ್ಮದ ಅಂಶವಾದ ಸೂರ್ಯನು ಜುಲೈ ತಿಂಗಳಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನ ಸಂಚಾರವು ವ್ಯಕ್ತಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಸೂರ್ಯ 17 ಜುಲೈ 2023 ರಂದು ಬೆಳಿಗ್ಗೆ 04.59 ಕ್ಕೆ ಮಿಥುನ ರಾಶಿಯಿಂದ ಹೊರಟು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ಕರ್ಕ ರಾಶಿಯ ಅಧಿಪತಿ ಮತ್ತು ಸೂರ್ಯನು ಸ್ನೇಹ ಗ್ರಹ. […]

ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಪುಣ್ಯಭೂಮಿ “ಕುಂದಾಪುರ”

ಕುಂದಾಪುರ: ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ […]

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರಿಗೆ ಕಾಳಮೆಣಸು, ಗೇರು, ಜಾಯಿಕಾಯಿ, ಅನಾನಸು, ಅಂಗಾಂಶ ಬಾಳೆ, ರಾಗದ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬುಟಾನ್, ಮಾಂಗೋಸ್ಟೀನ್ ಮತ್ತು ಡ್ರಾಗನ್ ಫ್ರೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ಸಣ್ಣ ಸಸ್ಯಾಗಾರಗಳ ನರ್ಸರಿ ಸ್ಥಾಪನೆಗೆ ಶೇ. 50 ರ ಸಹಾಯಧನ, ಅಂಗಾಂಶ ಕೃಷಿ ಘಟಕ ಸ್ಥಾಪನೆಗೆ ಶೇ.40 […]

ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿವಿಧ ನಾಗರಿಕ ಸೇವಾ ಸೌಲಭ್ಯ

ಉಡುಪಿ: ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸರ್ಕಾರದಿಂದ ನೀಡಲಾಗುವ ವಿವಿಧ ನಾಗರಿಕ ಸೇವಾ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತಿಯಿಂದ ಲಭ್ಯವಾಗುವ ವಿವಿಧ ಪರವಾನಿಗೆಗಳು, ನಿರಾಪೇಕ್ಷಣಾ ಪತ್ರಗಳು, ಜನನ ಮರಣ ಪ್ರಮಾಣ ಪತ್ರಗಳು, ಕಂದಾಯ ಇಲಾಖೆಯ ಸೇವೆಯಾದ ಪಹಣಿ ಪತ್ರಿಕೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯಕ್ಕೆ ನೋಂದಣಿಗಳು ಇತ್ಯಾದಿ ಸೇವಾ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ […]

ಭೋಪಾಲ್-ದೆಹಲಿ ವಂದೇ ಭಾರತ್ ರೈಲಿನ ಬ್ಯಾಟರಿ ಬಾಕ್ಸ್ ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ

ನವದೆಹಲಿ: ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಂದು ಕೋಚ್‌ನಲ್ಲಿನ ಬ್ಯಾಟರಿ ಬಾಕ್ಸ್‌ ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಮಧ್ಯಪ್ರದೇಶದ ಕುರ್ವೈ ಕೆಥೋರಾ ನಿಲ್ದಾಣದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಬೆಳಿಗ್ಗೆ 5.40 ರ ಸುಮಾರಿಗೆ ಭೋಪಾಲ್‌ನಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣವನ್ನು ಮಧ್ಯಾಹ್ನ 1.10 ರ ಸುಮಾರಿಗೆ ತಲುಪುತ್ತದೆ. ಸ್ಥಳದ ದೃಶ್ಯಗಳು ಚಕ್ರಗಳ ಬಳಿಯಿಂದ ಹೊಗೆ ಹೊರಹೊಮ್ಮುವುದನ್ನು […]