ಶಕ್ತಿ ಯೋಜನೆಗೆ ಭರ್ಜರಿ ಬಲ: ಉಡುಪಿ ಜಿಲ್ಲೆಯಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರ ಪ್ರಯಾಣ; 3.62 ಕೋಟಿ ರೂ ಆದಾಯ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14 ರ ವರೆಗೆ ಇದುವರೆಗೆ 3.62 ಕೋಟಿ ರೂ ಆದಾಯ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ವರ್ಗ ಈ ಎಲ್ಲಾ […]

ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗಾಗಿ ವಸತಿ ವ್ಯವಸ್ಥೆ

ಉಡುಪಿ: ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಯು ಜುಲೈ 17 ರಿಂದ 25 ರವರೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ನಡೆಯಲಿದ್ದು, ಸದರಿ ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿದೆ. ಗೋವಿಂದ ಕಲ್ಯಾಣ ಮಂಟಪ ಅಜ್ಜರಕಾಡು ವಾರ್ಡಿನ ಭುಜಂಗ ಪಾರ್ಕನ ಹತ್ತಿರ ದೂ.ಸಂಖ್ಯೆ:-8660793549, ಅಂಬೇಡ್ಕರ್ ಭವನ, ಆದಿಉಡುಪಿ – ದೂ.ಸಂಖ್ಯೆ:-9480843209, ನಾರಾಯಣಗುರು ಸಭಾ ಭವನ -ಬನ್ನಂಜೆ, ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟಾಂಡ್ ಹತ್ತಿರ-ದೂ.ಸಂಖ್ಯೆ:-9481518767, ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪ […]

ರಾಷ್ಟ್ರೀಯ ತೋಟಗಾರಿಕಾ ಮಂಡಳಿ ವತಿಯಿಂದ ಸಾಲ ಆಧಾರಿತ ಸಹಾಯಧನ ಸೌಲಭ್ಯ

ಉಡುಪಿ: ತೋಟಗಾರಿಕೆ ಬೆಳೆಗಳ ಉತ್ಪಾದನೆ, ಉತ್ಪಾದಕತೆ ಹೆಚ್ಚಳ, ಸಂಸ್ಕರಣೆ, ಶೇಖರಣೆ, ಸಾಗಾಣಿಕೆ ಹಾಗೂ ಮಾರುಕಟ್ಟೆ ವ್ಯವಸೆಯನ್ನು ಉತ್ತಮಗೊಳಿಸಿ ತೋಟಗಾರಿಕೆ ಉದ್ಯಮದ ಸಮಗ್ರ ಅಭಿವೃದ್ಧಿಯನ್ನು ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. 2 ಹೆಕ್ಟೇರ್ (5.00 ಎಕ್ರೆ) ಗಿಂತ ಹೆಚ್ಚು ಪ್ರದೇಶದಲ್ಲಿ ಹೊಸ ತೋಟಗಳ ರಚನೆಗಾಗಿ ವಿವಿಧ ಘಟಕಗಳಾದ ಸಸ್ಯ ಉತ್ಪಾದನೆ, ಪ್ರದೇಶ ವಿಸ್ತರಣೆ, ನೀರಾವರಿ, ರಸಾವರಿ, ನಿಖರ ಬೇಸಾಯ ಮುಂತಾದವುಗಳನ್ನು ಒಳಗೊಂಡ ತೋಟ ಆಭಿವೃದ್ಧಿಗಾಗಿ ಶೆ.40 ರಂತೆ ಗರಿಷ್ಠ ರೂ. 30.00 ಲಕ್ಷ […]

ಮಾನಸಿಕ ಅಸ್ವಸ್ಥರ ಕೇಂದ್ರದಲ್ಲಿದ್ದ ವ್ಯಕ್ತಿ ನಾಪತ್ತೆ

ಬ್ರಹ್ಮಾವರ: ತಾಲೂಕಿನ ಉಪ್ಪೂರು ಗ್ರಾಮದ ಸಾಲ್ಮರ ಸ್ಪಂದನ ಬುದ್ದಿಮಾಂದ್ಯ ವಸತಿ ಕೇಂದ್ರದಲ್ಲಿ ವಾಸವಿದ್ದ ಶಿವ (21) ಎಂಬ ಬುದ್ದಿಮಾಂದ್ಯ ಯುವಕನು 2022 ರ ಅಕ್ಟೋಬರ್ 8 ರಂದು ಸಂಸ್ಥೆಯಿಂದ ಕಾಣೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.18 ಮತ್ತು19 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜುಲೈ 18 ಮತ್ತು 19 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಉಡುಪಿ-2 ಫೀಡರ್ ಮಾರ್ಗದಲ್ಲಿ ಹಾಗೂ 110/33/11 ಕೆ.ವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕುಡ್ಸೆಂಪು ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಉಡುಪಿ ನಗರ ಪ್ರದೇಶಗಳಾದ ಜೋಡುಕಟ್ಟೆ, ಟಿ.ಎಂ.ಎ ಪೈ ಆಸ್ಪತ್ರೆ, […]