ಜುಲೈ 16 ರಂದು 21 ನೇ ಅಂತರಾಷ್ಟ್ರೀಯ ಜಾವಾ ಯಜ಼್ದಿ ಮೋಟಾರ್ ಸೈಕಲ್ ದಿನ

ಉಡುಪಿ: ಉಡುಪಿ ಜಾವಾ ಯಜ಼್ದಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಜುಲೈ 16 ರಂದು 21 ನೇ ಅಂತರಾಷ್ಟ್ರೀಯ ಜಾವಾ ಯಜ಼್ದಿ ಮೋಟಾರ್ ಸೈಕಲ್ ದಿನ-2023 ಅನ್ನು ಉಡುಪಿ ಕೆ.ಎಂ ಮಾರ್ಗದಲ್ಲಿರುವ ವಿಜಯ ಕ್ಲಬ್ ನಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಾಸನ: ಚಿರತೆಯೊಂದಿಗೆ ಸೆಣಸಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಗಧೀರ!!

ಹಾಸನ: ಜಿಲ್ಲೆಯ ವ್ಯಕ್ತಿಯೊಬ್ಬರು 9 ತಿಂಗಳ ಚಿರತೆ ಮರಿಯನ್ನು ತನ್ನ ದ್ವಿಚಕ್ರ ವಾಹನದ ಹಿಂಬದಿಗೆ ಕಟ್ಟಿಕೊಂಡು ಹೋಗುತ್ತಿರುವ ದೃಶ್ಯವೊಂದು ಕಂಡುಬಂದಿದೆ. ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಚಿರತೆಯೊಂದನ್ನು ಕಟ್ಟಿಹಾಕಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಾಸನ ಜಿಲ್ಲೆಯ ಬಾಗಿವಾಳು ಗ್ರಾಮದ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದು ಗುರುತಿಸಲಾಗಿರುವ ಈ ಸವಾರ ತಾನು ಚಿರತೆಯನ್ನು ಅರಣ್ಯ ಇಲಾಖೆಗೆ ಕರೆದೊಯ್ಯುತ್ತಿದುದಾಗಿ ತಿಳಿಸಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ […]

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ

ಉಪ್ಪೂರು: ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು, ಎಂ.ಟೆಕ್, ಬಿ.ಇ ಹಾಗೂ ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸರ್ಕಾರಿ ಪ್ರೌಢಶಾಲೆ ಹತ್ತಿರ, ಕೊಳಲಗಿರಿ, ಉಪ್ಪೂರು, ಉಡುಪಿ ದೂ.ಸಂಖ್ಯೆ: 0820-2950101, ಮೊ.ನಂ: 9880510585, ಇ-ಮೇಲ್ [email protected] […]

ಚಂದ್ರಯಾನ-3ರ ಹಿಂದಿದ್ದಾರೆ ಭಾರತದ ‘ರಾಕೆಟ್ ಮಹಿಳೆ’ ಎಂದು ಖ್ಯಾತಿವೆತ್ತ ರಿತು ಕರಿದಾಲ್ ಶ್ರೀವಾಸ್ತವ

ಶ್ರೀಹರಿಕೋಟಾ: ಭಾರತದ ಮೂರನೇ ಚಂದ್ರಯಾನ ಅಭಿಯಾನ ‘ಚಂದ್ರಯಾನ-3’ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ರ ಹಿಂದಿರುವ ನಾರೀಶಕ್ತಿ ಭಾರತದ ಸ್ವಂತ ‘ರಾಕೆಟ್ ಮಹಿಳೆ’ ಎಂದೇ ಖ್ಯಾತರಾದ ರಿತು ಕರಿದಾಲ್ ಶ್ರೀವಾಸ್ತವ. ಮಹಿಳಾ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ರಿತು ಕರಿದಾಲ್ ಶ್ರೀವಾಸ್ತವ ಅವರು ಹಿರಿಯ ವಿಜ್ಞಾನಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. […]

ಯಾವ ಹುದ್ದೆಯಲ್ಲಿದ್ದರೂ ಉಡುಪಿ ಜಿಲ್ಲೆಗೆ ಅಗತ್ಯವಿರುವ ಎಲ್ಲ ಸಹಕಾರಕ್ಕೆ ಬದ್ದ: ಕೂರ್ಮಾರಾವ್ ಎಂ

ಉಡುಪಿ: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 1 ವರ್ಷ 10 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು ಅತ್ಯುತ್ತಮ ಮತ್ತು ಮರೆಯಲಾಗದ ಅನುಭವ ನೀಡಿದೆ, ಜಿಲ್ಲೆಯ ಅಭಿವೃದ್ದಿಗಾಗಿ ಮುಂದಿನ ದಿನದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ತನ್ನಿಂದ ಅಗತ್ಯವಿರುವ ಸಹಕಾರ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆಯನ್ನು ರಾಜ್ಯದಲ್ಲೇ ಸದಾ ಮಾದರಿ ಜಿಲ್ಲೆಯನ್ನಾಗಿ ಮಾಡುವ ತುಡಿತ ಉಡುಪಿಯ ಸಾರ್ವಜನಿಕರು ಮತ್ತು ನೌಕರರ […]