ಐಫೆಲ್ ಟವರ್ ನಿಂದ ಭಾರತೀಯ ಯುಪಿಐ ಬಳಸಿ ರೂಪಾಯಿಗಳಲ್ಲಿ ಹಣ ಪಾವತಿಸಿ: ಪ್ರಧಾನಿ ಮೋದಿ

ಪ್ಯಾರಿಸ್: ಭಾರತದ ಅತ್ಯಂತ ಯಶಸ್ವಿ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್‌ನಲ್ಲಿಯೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದರು. “ಭಾರತ ಮತ್ತು ಫ್ರಾನ್ಸ್ ದೆಶಗಳು ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗುತ್ತದೆ, ಅಂದರೆ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ” ಎಂದು ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ)ಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. #WATCH | India and France have agreed […]

ಗಾಂಧಿ ಗ್ರಾಮ ಪುರಸ್ಕಾರ ಪಡೆದ ವಂಡ್ಸೆ ಗ್ರಾಮದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ ಸೇತುವೆ; ಪಂಚಾಯತ್ ಪ್ರತಿನಿಧಿಗಳಿಂದ ದಿವ್ಯ ನಿರ್ಲಕ್ಷ್ಯ

ವಂಡ್ಸೆ: ಪೇಟೆಯ ಅನತಿ ದೂರದಲ್ಲಿರುವ ಲಕ್ಷ್ಮಣ ನಾಯ್ಕ್ ಎಂಬುವವರ ಮನೆಯ ಹತ್ತಿರವಿರುವ 30 ವರ್ಷದ ಹಿಂದಿನ ಸೇತುವೆಯ ಎರಡು ಕಬ್ಬಿಣದ ಸರಳು ಪಟ್ಟಿ ಕಿತ್ತು ಹೋಗಿದ್ದರೂ ಸಂಬಂಧಪಟ್ಟವರು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇದು ವಂಡ್ಸೆ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಸೇತುವೆ ಆಗಿದ್ದು, ಮತದಾನದ ಸಮಯದಲ್ಲಿ ಇದೇ ಸೇತುವೆ ಮೂಲಕ ತೆರಳಿ ಮತದಾನ ನಡೆಸುತ್ತಾರೆ. ದಿನನಿತ್ಯ ಈ ಸೇತುವೆಯ ಮೂಲಕ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗಾಗಿ ತೆರಳುತ್ತಾರೆ. ಶಾಲಾ ಮಕ್ಕಳು ಕೂಡಾ ಇದೇ ಸೇತುವೆಯನ್ನಾಶ್ರಯಿಸಿ ಶಾಲೆಗೆ ತೆರಳುತ್ತಾರೆ. […]