ನೂತನ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ. ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರಿಂದ ಅಧಿಕಾರ ಸ್ವೀಕರಿಸಿದರು. ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾದ ಇವರು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದು, ಮಂಗಳೂರು ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರದುರ್ಗದಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿಯಾಗಿ, ಮೈಸೂರು ಕಾರ್ಪೋರೇಷನ್ ಕೌನ್ಸಿಲ್ ಕಾರ್ಯದರ್ಶಿ, ಹುಣಸೂರು ಉಪವಿಭಾಗಾಧಿಕಾರಿ, ಮೈಸೂರು ಮುಡಾ ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ, ವೈದ್ಯಕೀಯ ಶಿಕ್ಷಣ ಇಲಾಖೆಯ […]

ಸೊಸೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಮಾವ

ಮೈಸೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸೊಸೆಯ ತಲೆಗೆ ಸುತ್ತಿಗೆಯಿಂದ ಮಾವ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಮೈಸೂರು, ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಂಟಯ್ಯ (70) ಎಂಬುವವರು ತಮ್ಮ ಸೊಸೆಯನ್ನೇ ಕೊಲೆ ಮಾಡಿದ್ದಾರೆ. ಹಾರೋಹಳ್ಳಿ ಗ್ರಾಮದ ಘಂಟಯ್ಯ ಅವರ ಪುತ್ರನ ಜೊತೆ 15 ವರ್ಷಗಳ ಹಿಂದೆ ಮಹಿಳೆ ಮದುವೆ ಮಾಡಲಾಗಿತ್ತು. ಕುಟುಂಬ ನಿರ್ವಹಣೆಗೆ ಗಂಡನ ದುಡಿಮೆ ಸಾಲದು ಎಂಬ ಕಾರಣದಿಂದ ಕವಿತಾ, ಖಾಸಗಿ ಕಾಲೇಜಿನಲ್ಲಿ ಆಯಾ ಕೆಲಸಕ್ಕೆ ಸೇರಿದ್ದರು. ಇದು ಮಾವ ಘಂಟಯ್ಯನಿಗೆ ಇಷ್ಟವಾಗುತ್ತಿರಲಿಲ್ಲ. ಕೆಲಸಕ್ಕೆ […]

ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟನೆ

ಉಡುಪಿ: ಶುಕ್ರವಾರದಂದು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯ ಸ್ಥಳಾಂತರ ಕಾರ್ಯಕ್ರಮವು ಜರುಗಿತು. ಕೋರ್ಟ್ ರಸ್ತೆಯ ಕಾರ್ತಿಕ್ ಟವರ್ಸ್ ನ ಒಂದನೇ ಮಹಡಿಗೆ ಸ್ಥಳಾಂತರಗೊಂಡ ಹೊಸ ಕಚೇರಿಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ದ.ಕ.ಜಿ. ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ, ಕ.ರಾ.ಸೌ.ಸಂ. ಸ. ನಿರ್ದೇಶಕ ಮಂಜುನಾಥ್ ಎಸ್.ಕೆ, ಮಣಿಪಾಲ ಸಹಕಾರ ಸಂಘಗಳ ಉಪನಿಬಂಧಕ […]

ಚಂದ್ರನತ್ತ ಪಯಣಿಸಿದ ಚಂದ್ರಯಾನ-3; ಆಗಸ್ಟ್ ವೇಳೆಗೆ ಚಂದ್ರನ ಮೇಲ್ಮೈಗೆ ಪಾದಾರ್ಪಣೆ ಮಾಡಲಿದೆ ವಿಕ್ರಮ್ ಲ್ಯಾಂಡರ್

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮೂನ್ ಮಿಷನ್ ಅನ್ನು ಪ್ರಾರಂಭಿಸಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ತೂಗುತ್ತದೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಭಾರತದ ಎರಡನೇ ಪ್ರಯತ್ನ ಇದಾಗಿದೆ. ಕೌಂಟ್‌ಡೌನ್‌ನ ಕೊನೆಯಲ್ಲಿ, ನಿಗದಿತ ಸಮಯದಲ್ಲಿ LVM3-M4 ರಾಕೆಟ್ ಭವ್ಯವಾಗಿ ಮೇಲಕ್ಕೆ ನೆಗೆದಿದೆ. ಲಿಫ್ಟ್-ಆಫ್ ಸಾಮಾನ್ಯ ಮತ್ತು ಸುಗಮವಾಗಿತ್ತು ಎಂದು ಇಸ್ರೋ ಹೇಳಿದೆ. ಬೇರ್ಪಡಿಕೆಯ ಹಂತಗಳನ್ನು […]

ಆ.16 ರಂದು ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ

ಕುಂದಾಪುರ: ಮರವಂತೆಯ ಅರಬ್ಬೀ ಸಮುದ್ರ ಹಾಗೂ ಸೌಪರ್ಣಿಕಾ ನದಿ ತಟದಲ್ಲಿರುವ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜು.17 ಕ್ಕೆಂದು ಕೆಲವು ಕ್ಯಾಲೆಂಡರ್‌ಗಳಲ್ಲಿ ತಪ್ಪಾಗಿ ಪ್ರಕಟಣೆಗೊಂಡಿದ್ದು ಈ ವರ್ಷ ಆ.16 ರಂದು ಮರವಂತೆ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ. ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ದಿನ ಶ್ರೀ ವರಾಹ ಸ್ವಾಮಿಯ ವಾರ್ಷಿಕ ಹಬ್ಬ ನಡೆಯುವುದು ದೇವಸ್ಥಾನದ ಪರಂಪರೆಯಾಗಿದೆ. ಆದರೆ ಕೆಲವು ಕ್ಯಾಲೆಂಡರ್‌ ಹಾಗೂ ಪಂಚಾಂಗದಲ್ಲಿ ಜು. […]