ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ
ಪುಂಜಾಲಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ಪುಂಜಾಲಕಟ್ಟೆಯಲ್ಲಿ ಇಂದು ನಡೆದಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ಅವರ ಪುತ್ರ ರೂಪೇಶ್ ಆಚಾರ್ಯ(31) ಮೃತಪಟ್ಟವರು ಎಂದು ತಿಳಿಯಲಾಗಿದೆ. ಸ್ವರ್ಣ ಕುಸುರಿ ಕೆಲಸಗಾರರಾಗಿದ್ದ ರೂಪೇಶ್ ಅವರು ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಗುರುವಾರ ಮಧ್ಯಾಹ್ನ ತನ್ನ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಕೂಡಲೇ 108 ಅಂಬ್ಯುಲೆನ್ಸ್ […]
ಶ್ರೀಲಂಕಾಗೆ ಉಡುಗೊರೆಯಾಗಿ ನೀಡಿದ ಆನೆಯನ್ನು ಹಿಂಪಡೆದ ಥಾಯ್ಲೆಂಡ್ ಸರ್ಕಾರ
ಬ್ಯಾಂಕಾಕ್: ಥಾಯ್ಲೆಂಡ್ ಸರ್ಕಾರವು 22 ವರ್ಷಗಳ ಹಿಂದೆ ಪ್ರೀತಿಯಿಂದ ಶ್ರೀಲಂಕಾಗೆ ಉಡುಗೊರೆಯಾಗಿ ಕೊಟ್ಟಿದ್ದ 29 ವರ್ಷದ ಆನೆ ‘ಮುತ್ತುರಾಜ’ ಅಥವಾ ‘ಸ್ಯಾಕ್ ಸುರೀನ್’ನನ್ನು ಹಿಂಪಡೆದಿದೆ. ಶ್ರೀಲಂಕಾದಿಂದ ಆನೆಯನ್ನು ವಾಪಸ್ ತರಿಸಿಕೊಳ್ಳಲು ಥಾಯ್ಲೆಂಡ್ ಸರ್ಕಾರ 5.75 ಕೋಟಿ ರೂ. ಖರ್ಚು ಮಾಡಿದೆ. 4 ಸಾವಿರ ಕೆಜಿ ತೂಕದ ಮುತ್ತುರಾಜನನ್ನು ವಿಮಾನದ ಮೂಲಕ ಥಾಯ್ಲೆಂಡ್‌ಗೆ ತರಿಸಿಕೊಳ್ಳಲಾಗಿದೆ. ಲೋಹದ ಪಂಜರದಲ್ಲಿ ಆನೆಯನ್ನು ಸುಮಾರು 5 ಗಂಟೆಗಳಲ್ಲಿ ಥಾಯ್ಲೆಂಡ್‌ಗೆ ಸಾಗಿಸಲಾಗಿದೆ. ಶ್ರೀಲಂಕಾ ನಡೆಯಿಂದ ಥಾಯ್ಲೆಂಡ್ ಗೆ ಬೇಸರ: ಕೊಟ್ಟ ಉಡುಗೊರೆಗೆ ಸರಿಯಾದ ಗೌರವ […]
ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಲಲಿತ ಮಹಾ ತ್ರಿಪುರಸುಂದರಿ ಮಹಾಯಾಗ ಸಂಪನ್ನ
ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತ ಮಹಾ ತ್ರಿಪುರಸುಂದರಿ ಮಹಾ ಯಾಗವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಯ ನೇತೃತ್ವದಲ್ಲಿ ಸ್ಥಳೀಯ ಉದ್ಯಮಿಯೋರ್ವರ ಪ್ರಾಯಶ್ಚಿತ ಪೂರ್ವಕವಾಗಿ ಸಂಪನ್ನಗೊಂಡಿತು. ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾಯಾಗ ಬಹು ವಿಶಿಷ್ಟ ಹಾಗೂ ಅಪರೂಪದ್ದಾಗಿದೆ. ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ, ಲಲಿತಾ ಸಹಸ್ರನಾಮ ಅರ್ಚನೆಯಿಂದ ನೆರವೇರಿದ […]
ಲಿಂಗತ್ವ ಅಲ್ಪಸಂಖ್ಯಾತರಿಗೆ ಯಕ್ಷಗಾನ ಕೌಶಲ್ಯ ತರಬೇತಿ: ಉಡುಪಿ ಜಿಲ್ಲಾಡಳಿತದ ಮಾದರಿ ಕಾರ್ಯ
ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು, ದೈನಂದಿನ ಜೀವನ ನಿರ್ವಹಣೆಗಾಗಿ ಇಷ್ಟವಿಲ್ಲದಿದ್ದರೂ ಅವಮಾನ ಪಡುವಂತಹ ಭಿಕ್ಷಾಟನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುವ ಅನಿವಾರ್ಯತೆಗೆ ಸಿಲುಕುವ ಲಿಂಗತ್ವ ಅಲ್ಪ ಸಂಖ್ಯಾತರು, ಕೌಶಲ್ಯಾಬಿವೃದ್ಧಿ ತರಬೇತಿಗಳನ್ನು ಪಡೆಯುವುದರ ಮೂಲಕ ಮತ್ತು ತಮ್ಮಲ್ಲಿನ ಪ್ರತಿಭೆಯ ಮೂಲಕ ಗೌರವಯುತ ಜೀವನ ನಡೆಸಲು ಹಾಗೂ ಅತ್ಯುನ್ನತ ಸಾಧನೆ ಮಾಡಬಹುದಾಗಿದ್ದು ಇದಕ್ಕೆ ಉಡುಪಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅತ್ಯುತ್ತಮ ಅವಕಾಶ ಕಲ್ಪಿಸುವ ಮೂಲಕ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ಆಯೋಜಿಸಿದೆ. ಉಡುಪಿ ಜಿಲ್ಲಾಡಳಿತದ ಜಿಲ್ಲಾ […]
ಗ್ರೇಟರ್ ನೋಯ್ಡಾದ ಮಾಲ್ ನಲ್ಲಿ ಅಗ್ನಿ ಅವಘಡ: ಪ್ರಾಣ ಉಳಿಸಲು ಮೂರನೇ ಮಹಡಿಯಿಂದ ಜಿಗಿದ ಜನ
ನವದೆಹಲಿ: ಗ್ರೇಟರ್ ನೋಯ್ಡಾ ಗ್ಯಾಲಕ್ಸಿ ಪ್ಲಾಜಾ ಮಾಲ್‌ನಲ್ಲಿ ಗುರುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿರುವುದು ಕಂಡುಬಂದಿದೆ. ಗೌರ್ ಸಿಟಿ 1ರಲ್ಲಿರುವ ಮಾಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜನರು ಕಟ್ಟಡದ ಮೂರನೇ ಮಹಡಿಯಿಂದ ಜಿಗಿಯುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. WATCH – Fire At Shopping Complex In Greater Noida, Many Jumps From Third Floor.#GreaterNoida #Fire pic.twitter.com/o4d4Ddpyzk — TIMES NOW […]