ತ್ವರಿತ ಪಾವತಿ ಹಿನ್ನೆಲೆ : UPI LITE ಹೊರತಂದ ಗೂಗಲ್ ಪೇ
ನವದೆಹಲಿ : ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ ರೂ 2,000 ವರೆಗೆ ಲೋಡ್ ಮಾಡಬಹುದು ಮತ್ತು ರೂ 200 ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು. “ವಿಶಿಷ್ಟ ಕೊಡುಗೆಗಳು ಮತ್ತು ಬಳಕೆಯ ವಿಧಾನಗಳು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯ ವಿಚಾರದಲ್ಲಿ ಪ್ರಮುಖ ವಿಷಯಗಳಾಗಿವೆ ಮತ್ತು ಗೂಗಲ್ ಪ್ಲೇ ನಲ್ಲಿ ಯುಪಿಐ ಲೈಟ್ ಅನ್ನು ಪರಿಚಯಿಸುವುದರೊಂದಿಗೆ ಬಳಕೆದಾರರಿಗೆ ಅನುಕೂಲಕರ, ಕಾಂಪ್ಯಾಕ್ಟ್ ಮತ್ತು ಸೂಪರ್‌ಫಾಸ್ಟ್ ಪಾವತಿಗಳ ಅನುಭವ ನೀಡುವ ಮತ್ತು ಸಣ್ಣ-ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುವ ಗುರಿಯನ್ನು ನಾವು […]
ರಾಕೆಟ್ ಉಡಾವಣೆಗೆ ಪ್ರಕ್ರಿಯೆ ಆರಂಭ, ಕ್ಷಣಗಣನೆ
ಭುವನೇಶ್ವರ್, ಒಡಿಶಾ:ಚಂದ್ರಯಾನ- 3 ರಲ್ಲಿ ಒಡಿಶಾ ರಾಜ್ಯವು ಪ್ರಮುಖ ಪಾತ್ರ ವಹಿಸಿರುವುದರಿಂದ ಒಡಿಶಾದ ಜನರಿಗೆ ಇದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಅಲ್ಲಿನ ತಂತ್ರಜ್ಞರು ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ Chandrayaan 3 ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು Chandrayaan 3 ಉಡಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕೌಂಟ್ಡೌನ್ ಶುರುವಾಗಿದೆ. ಆದರೆ ಈ ಉಪಗ್ರಹಕ್ಕೆ ಬೇಕಾದ ಅನೇಕ ವಸ್ತುಗಳು ಒಡಿಶಾದಲ್ಲಿ ತಯಾರಿಸಲಾಗಿದ್ದು, ಇದು ರಾಜ್ಯದ ಜನರಿಗೆ ಸಂತಸದ ವಿಷಯವಾಗಿದೆ. ವರದಿಗಳ […]
ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ 25ನೇ Asian Athletics Championships 2023 ಭಾರತಕ್ಕೆ ಮೂರು ಚಿನ್ನ, ಎರಡು ಕಂಚು
ಬ್ಯಾಂಕಾಕ್: ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ 25ನೇ Asian Athletics Championships 2023 ರ ಎರಡನೇ ದಿನವಾದ ಗುರುವಾರ ಭಾರತೀಯ ಅಥ್ಲೀಟ್‌ಗಳು ಮೂರು ಚಿನ್ನ ಗೆದ್ದಿದ್ದಾರೆ. 25ನೇ Asian Athletics Championships 2023 ಎರಡನೇ ದಿನದಲ್ಲಿ ಭಾರತೀಯರು ಮೂರು ಚಿನ್ನದ ಪದಕ ಮತ್ತು ಎರಡು ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರ. ಅಜಯ್ ಕುಮಾರ್ ಸರೋಜ್ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದರು ಅಜಯ್ ಕುಮಾರ್ ಸರೋಜ್ ಪುರುಷರ 1500 ಮೀಟರ್ ಓಟವನ್ನು 3.41.51 ಸೆಕೆಂಡುಗಳಲ್ಲಿ ಗೆದ್ದು […]
ಬಾಲ್ಯದಲ್ಲೇ ಉದ್ಯಮಿಗಳಾದ ಅಪ್ಪಟ ಗ್ರಾಮೀಣ ಪ್ರತಿಭೆಗಳು
ಬೆಳಗಾವಿ : ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಹೌದು, ಈ ಸಾಧನೆ ಮಾಡಿರುವ ಆರು ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದವರು. 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹೊಸ ಅನ್ವೇಷಣೆ ಮಾಡಿ […]
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೈದರ್ಕಳ ಪಾತ್ರಿ ಹಿರ್ಗಾನ ಲೋಕು ಪೂಜಾರಿ ನಿಧನ
ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೈದರ್ಕಳ ಪಾತ್ರಿ ಹಿರ್ಗಾನ ಲೋಕು ಪೂಜಾರಿ (98) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ ಬೈದರ್ಕಳ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅವರು ಹಿರ್ಗಾನ ಹಾಡಿ ಗರಡಿ ಸೇರಿದಂತೆ ಕಾರ್ಕಳ ಮತ್ತು ಜಿಲ್ಲೆಯ ಗರಡಿ ಗಳಲ್ಲಿ ಪಾತ್ರಿಯಾಗಿ ಸೇವೆ ಸಲ್ಲಿಸಿದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಇವರ ದೈವಾರಾಧನೆಯ ಸಾಧನೆ ಗಾಗಿ 2022ರಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು