ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿದ ರಾಜಮೌಳಿ: ಆತ್ಮ ತೃಪ್ತಿಯ ಅನುಭೂತಿ ಎಂದ ಸ್ಟಾರ್ ಡೈರೆಕ್ಟರ್
ಚೆನ್ನೈ: ಚಿತ್ರ ನಿರ್ದೇಶನದ ಗೌಜಿ ಗದ್ದಲ ಮತ್ತು ಆಸ್ಕರ್ ಪ್ರಶಸ್ತಿಯ ವ್ಯಸ್ತ ವೇಳಾಪಟ್ಟಿಯ ನಂತರ ಬಿಡುವು ಪಡೆದುಕೊಂಡ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ಬಹು ದಿನಗಳ ಆಸೆಯಾಗಿದ್ದು, ಇದೀಗ ತಮ್ಮ ಕುಟುಂಬದೊಂದಿಗೆ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. Wanted to do a road trip in central Tamilnadu for a long time. Thanks to my daughter who wanted […]
ನಮಗೂ ಎರಡು ಹೊತ್ತು 90 ಎಂ.ಎಲ್ ಉಚಿತ ಮದ್ಯ ಯೋಜನೆ ಜಾರಿಗೊಳಿಸಿ: ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮದ್ಯಪ್ರಿಯರು!!
ಉಡುಪಿ: ರಾಜ್ಯ ಸರಕಾರ ಮಹಿಳೆಯರಿಗೆ ಸಾಲು ಸಾಲು ಉಚಿತ ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಿದ್ದು, ಮದ್ಯದ ಬೆಲೆ ಏರಿಕೆ ಮಾಡಿದ ಹಿನ್ನಲೆಯಲ್ಲಿ ಇದೀಗ ಮದ್ಯಪ್ರಿಯರು ಒಂದೋ ಮದ್ಯ ಮಾರಾಟ ನಿಷೇಧಿಸಿ ಇಲ್ಲವಾದಲ್ಲಿ ಮದ್ಯವನ್ನು ಉಚಿತವಾಗಿ ನೀಡಿ ಎನ್ನುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು. ನಾಗರಿಕ ಸಮಿತಿ ಸದಸ್ಯರಾದ ನಿತ್ಯಾನಂದ ಒಳಕಾಡು ಹಾಗೂ […]
ಜುಲೈ 16 ರಂದು ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ
ಉಡುಪಿ: ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂಭ್ರಮ “ರಂಗ ಸಂಗಮ” ಕಾರ್ಯಕ್ರಮವು ಜುಲೈ 16 ರಂದು ಮಧ್ಯಾಹ್ನ 2 ಗಂಟೆಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರುಗಲಿದೆ. ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ಲೀಲಾಧರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಸಾಯಿರಾಧಾ ಸಮೂಹ ಸಂಸ್ಥೆಗಳ ಎಂಡಿ ಮನೋಹರ್ ಶೆಟ್ಟಿ, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, […]
ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.16 ಡಿವಿಡೆಂಡ್ ಘೋಷಣೆ
ಕೊಡವೂರು: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2022- 23ನೇ ವಾರ್ಷಿಕ ಮಹಾಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಸಂಘದ 2022- 23ನೇ ಸಾಲಿನ ವರದಿಯನ್ನು ಮಂಡಿಸಿದರು. ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಾರಾಯಣ್ ಬಲ್ಲಾಳ್, ಸಂಘವು 31.03.2023 ಕ್ಕೆ ಎ ಗ್ರೇಡ್ ಅಡಿಟ್ ವರ್ಗಿಕರಣವನ್ನು ಪಡೆದಿದ್ದು, 2022- 23ನೇ ಸಾಲಿನಲ್ಲಿ ಒಟ್ಟು 55.52 ಕೋಟಿ ರೂ. […]
ಕುಂದಾಪುರ: ಖಿನ್ನತೆಗೊಳಗಾಗಿ ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ ಯುವತಿಯ ರಕ್ಷಣೆ
ಕುಂದಾಪುರ: ಮಾನಸಿಕವಾಗಿ ನೊಂದು ಕೊಲ್ಲೂರಿನ ಕಾಡಿನಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಮಂಗಳವಾರದಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ. ಯುವತಿ ತನ್ನ ಹೆಸರು ಅರ್ಚನಾ (28) ಎಂದೂ, ಹುಟ್ಟೂರು ಕೇರಳದ ಚರ್ವತ್ಕಲ್ ಎಂದೂ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. ಈಕೆ ಕೊಲ್ಲೂರಿನ ಸಲಗೇರಿ ಬಳಿ ಅರಣ್ಯದಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು […]