ಗ್ಯಾರಂಟಿ ಮೂಲಕ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ
ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅನ್ನಭಾಗ್ಯ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ದಿನವೇ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದನ್ನು ಈ ದಿನ ಸ್ಮರಿಸುತ್ತೇನೆ ಎಂದರುಇಂದು ಅನ್ನಭಾಗ್ಯ ಭರವಸೆ ಜಾರಿ ಮೂಲಕ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. . ಬಳಿಕ ನಮ್ಮ ಸರ್ಕಾರ ಆ ಯೋಜನೆಯಲ್ಲಿ ಅಕ್ಕಿಯ ಪ್ರಮಾಣವನ್ನು 7 ಕೆಜಿಗೆ […]
ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ ಕಿರೀಟ ಪಡೆದ ʻಟ್ರಾನ್ಸ್ಜೆಂಡರ್ʼ ಮಾಡೆಲ್ ʻರಿಕ್ಕಿ ವ್ಯಾಲೆರಿ ಕೊಲ್ಲೆʼ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ಮಾಡೆಲ್ ರಿಕ್ಕಿ ವ್ಯಾಲೆರಿ ಕೊಲ್ಲೆಗೆ ಜುಲೈ 8 ರಂದು(ಶನಿವಾರ) ಲ್ಯೂಸ್ಡೆನ್‌ನಲ್ಲಿರುವ AFAS ಥಿಯೇಟರ್‌ನಲ್ಲಿ ನೀಡಲಾಯಿತು.ರಿಕ್ಕಿ ವಾಲೆರಿ ಕೊಲ್ಲೆ(Rikkie Valerie Kollé) ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಕಿರೀಟವನ್ನು ಪಡೆದ ಮೊದಲ ಟ್ರಾನ್ಸ್‌ಜೆಂಡರ್ ಆಗಿದ್ದು, ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇನ್ನೂ, ಆಮ್ಸ್ಟರ್‌ಡ್ಯಾಮ್‌ನ 26 ವರ್ಷದ ನಥಾಲಿ ಮೊಗ್ಬೆಲ್ಜಾಡಾ ಮೊದಲ ರನ್ನರ್ ಅಪ್ ಎಂದು ಹೆಸರಿಸಲ್ಪಟ್ಟರೆ, ಹಬೀಬಾ ಮೊಸ್ತಫಾ ಮತ್ತು ಲೌ ಡಿರ್ಚ್‌ಗಳು ಕ್ರಮವಾಗಿ […]
ರಾಜ್ಯ ಸರ್ಕಾರದಿಂದ ಆದೇಶ : 9 ಮಂದಿ ‘IAS’ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: 09 ಮಂದಿ ‘IAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಆದೇಶ ನೀಡಿದ್ದಾರೆ
ಶ್ರೀಲಂಕಾದಿಂದ ಬೆಂಗಳೂರಿಗೆ ಶಿಫ್ಟ್: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ಗೆ ಲಘು ಹೃದಯಾಘಾತ
ಬೆಂಗಳೂರು: ಶ್ರೀಲಂಕಾದ ಕೊಲಂಬೊಗೆ ತೆರಳಿದ್ದ ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ವಿಮಾನದ ಮೂಲಕ ಅವರನ್ನು ಬೆಂಗಳೂರಿಗೆ ಬಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಂಜೆ 5.30ಕ್ಕೆ ಕೊಲಂಬೊದಿಂದ ಹೆಚ್ಎಎಲ್ ನಿಲ್ದಾಣಕ್ಕೆ ವಿಮಾನಕ್ಕೆ ಬರಬೇಕಿತ್ತು. ಆದರೆ, ಕೆಲ ಕಾರಣಗಳಿಂದ 8 ಗಂಟೆಗೆ ರಂಗನ್ ಅವರಿರುವ ವಿಮಾನ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ರವಾನಿಸಲು ಬೆಂಗಳೂರಿನ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಟ್ವೀಟ್: ”ಭಾರತೀಯ […]
ಆರ್ಆರ್ಆರ್ ಮೀರಿಸಲಿರುವ ಈ ಚಿತ್ರ ಎಸ್ಎಸ್ಎಂಬಿ 29ಗೆ ಜೊತೆಯಾದ ರಾಜಮೌಳಿ, ಮಹೇಶ್ ಬಾಬು
ಬೆಂಗಳೂರು: ಮಹೇಶ್ ಬಾಬು ಅವರ ‘ಎಸ್ಎಸ್ಎಂಬಿ29’ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ಆಗಿದ್ದು, ಇದಕ್ಕಾಗಿ ಅವರು ರಾಜಮೌಳಿ ತಂಡವನ್ನು ಸೇರಿದದ್ದಾರೆ. ಈ ಕುರಿತು ಇತ್ತೀಚೆಗೆ ಖ್ಯಾತ ಬರಹಕಾರ ಕೆವಿ ವಿಜೇಂದ್ರ ಪ್ರಸಾದ್ ಕೂಡ ಚಿತ್ರದ ಮಾಹಿತಿ ಹಂಚಿಕೊಂಡಿದ್ದರು. ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಕೆವಿ ವಿಜಯೇಂದ್ರ ಪ್ರಸಾದ್, ‘ಎಸ್ಎಸ್ಎಂಬಿ29’ ಚಿತ್ರಕ್ಕೆ ಮಹೇಶ್ ಬಾಬು, ರಾಜಮೌಳಿ ಒಂದಾಗಿದ್ದಾರೆ. ಈ ಚಿತ್ರ ‘ಆರ್ಆರ್ಆರ್’ ಸಿನಿಮಾವನ್ನು ಮೀರಿಸಲಿದ್ದು, ಸಿಕ್ಕಾಪಟ್ಟೆ ಆಯಕ್ಷನ್ ಸಿನಿಮಾವಾಗಿರಲಿದೆ ಎಂದಿದ್ದಾರೆ ಖ್ಯಾತ ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಮಹೇಶ್ […]