ಸಿಂಗಲ್​ ಸೇವಂತಿ ಐಟಂ ಸಾಂಗ್​ ರಿಲೀಸ್​: ರಾಘವೇಂದ್ರ ರಾಜ್​ಕುಮಾರ್​ ನಟನೆಯ ’13’ ಸಿನಿಮಾದ ಹಾಡು

ಇದೀಗ ’13’ ಎಂಬ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ‘ಸಿಂಗಲ್​ ಸೇವಂತಿ’ ಎಂಬ ಐಟಂ ಸಾಂಗ್​ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ವೇಳೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್, ವಿನಯ್​ ರಾಜಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು.ನಟ ರಾಘವೇಂದ್ರ ರಾಜ್​ಕುಮಾರ್​ ಅನಾರೋಗ್ಯದ ನಡುವೆಯೂ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ರಾಘವೇಂದ್ರ ರಾಜ್​ಕುಮಾರ್ ಮತ್ತು ಶೃತಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ’13’ ಸಿನಿಮಾದ ‘ಸಿಂಗಲ್​ ಸೇವಂತಿ’ ಐಟಂ ಸಾಂಗ್​ ಬಿಡುಗಡೆಯಾಗಿದೆ. […]

ಇಸ್ರೋ ಎಸ್‌ಎಸ್‌ಎಲ್‌ವಿ ಉದ್ಯಮ ವರ್ಗಾವಣೆಗೆ ಘೋಷಣೆ

ನವದೆಹಲಿ: ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್​ಎಸ್​ಎಲ್​ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್​ಎಸ್​ಎಲ್​ವಿ ಇಸ್ರೋದ […]

ರಾಮ್ ಪೋತಿನೇನಿ- ಪುರಿ ಜಗನ್ನಾಥ್​ ಕಾಂಬೋದಲ್ಲಿ ಮತ್ತೊಂದು ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದ ‘ಡಬಲ್​ ಇಸ್ಮಾರ್ಟ್

ಈ ವೇಳೆ ಚಾರ್ಮಿ ‘ಡಬಲ್​ ಇಸ್ಮಾರ್ಟ್’ ಸಿನಿಮಾಗೆ ಕ್ಲಾಪ್​ ಮಾಡಿದರೆ, ನಿರ್ದೇಶಕ ಪುರಿ ಜಗನ್ನಾಥ್​ ಮೊದಲ ಶಾಟ್​ಗೆ ಆಯಕ್ಷನ್​ ಕಟ್​ ಹೇಳಿದರು. ಡಬಲ್ ಮಾಸ್ ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ ಅವರು ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಅನ್ನು ಇದೇ ತಿಂಗಳ 12 ರಿಂದ ಪ್ರಾರಂಭಿಸಲಿದ್ದಾರೆ. ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ.ಇದೀಗ ಸೆನ್ಸೇಷನಲ್​ ನಿರ್ದೇಶಕ ಪುರಿ ಜಗನ್ನಾಥ್ ಅವರ ಜೊತೆಗೆ […]

ಧೋನಿಯ ಕ್ರಿಕೆಟ್​ ಪಯಣ ಪಿಂಚ್-ಟು-ಜೂಮ್ ಶೈಲಿಯ ವಿಡಿಯೋದ ಮೂಲಕ

2007ರಲ್ಲಿ ಭಾರತದಲ್ಲಿ ನಡೆದ ಪ್ರಥಮ ಟಿ20 ವಿಶ್ವಕಪ್​ನ ಗೆಲುವಿನ ಮೂಲಕ ಅವರ ನಾಯಕತ್ವದ ಶಕ್ತಿ ಇಡೀ ವಿಶ್ವಕ್ಕೆ ಅನಾವರಣ ಆಗಿತ್ತು. ಮೈದಾನದಲ್ಲಿ ಬ್ಯಾಟರ್​ ಯಾವ ಬಾಲ್​ಗೆ ಯಾವ ಶಾಟ್​ ಆಡುತ್ತಾನೆ ಎಂಬ ಲೆಕ್ಕಾಚಾರವನ್ನು ಮೊದಲೇ ಮಾಡಿ ಬೌಲರ್​ಗೆ ಇದೇ ರೀತಿ ಬಾಲ್​ ಮಾಡು ಎಂದು ಹೇಳಿ ವಿಕೆಟ್​ ಉರುಳಿಸುವ ತಂತ್ರಗಾರಿಕೆ ಇದ್ದ ನಾಯಕ. ವಿಕೆಟ್​ ಹಿಂದೆ ಅತ್ಯಂತ ಚುರುಕಾಗಿ ಸ್ಟಂಪ್​ ಮಾಡಿ ವಿಕೆಟ್​​ ಕಬಳಿಸುತ್ತಿದ್ದ ಕೀಪರ್​​.ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶೇಷ ಕ್ಷಣಗಳನ್ನು ಚಿತ್ರಿಸಿರುವ […]

ಜುಲೈ 12ಕ್ಕೆ ಪಿಎಸ್‌ಐ ಮರುಪರೀಕ್ಷೆ ಪ್ರಶ್ನಿಸಿದ್ದ ಅರ್ಜಿವಿಚಾರಣೆ

ಬೆಂಗಳೂರು:ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿದ್ದವು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣ ಹಿನ್ನೆಲೆಯಲ್ಲಿ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು […]